ಜೆಡಿಯುನಿಂದ ಬಿಜೆಪಿಗೆ ಆರು ಶಾಸಕರು; ನಿತೀಶ್​ ಕುಮಾರ್​ಗೆ ಭಾರಿ ಮುಖಭಂಗ

60 ಸದಸ್ಯರಿರುವ ಅರುಣಾಚಲ ಪ್ರದೇಶದಲ್ಲಿ ಜೆಡಿಯು 7 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಆರು ಶಾಸಕರು ಬಿಜೆಪಿ ಸೇರಿದ್ದಾರೆ. ಹೀಗಾಗಿ, ಪಕ್ಷಾಂತರ ಕಾಯ್ದೆ ಕೂಡ ಇದಕ್ಕೆ ಅನ್ವಯ ಆಗುವುದಿಲ್ಲ. ಪೀಪಲ್​ ಪಾರ್ಟಿ ಆಫ್​ ಅರುಣಾಚಲ ಪಕ್ಷದ ಬೆಂಬಲವೂ ಸೇರಿ ಬಿಜೆಪಿ ಈಗ 48 ಸದಸ್ಯ ಬಲವನ್ನು ಹೊಂದಿದಂತಾಗಿದೆ.

ಜೆಡಿಯುನಿಂದ ಬಿಜೆಪಿಗೆ ಆರು ಶಾಸಕರು; ನಿತೀಶ್​ ಕುಮಾರ್​ಗೆ ಭಾರಿ ಮುಖಭಂಗ
ಬಿಹಾರ ಸಿಎಂ ನಿತೀಶ್​ ಕುಮಾರ್
Edited By:

Updated on: Dec 25, 2020 | 4:14 PM

ಪಾಟ್ನಾ: ಅರುಣಾಚಲ ಪ್ರದೇಶ ವಿಧಾನಸಭೆಯ 7 ಜೆಡಿಯು ಶಾಸಕರ ಪೈಕಿ ಆರು ಮಂದಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ಈ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ಗೆ ಭಾರೀ ಮುಖಭಂಗವಾಗಿದೆ.

60 ಸದಸ್ಯರಿರುವ ಅರುಣಾಚಲ ಪ್ರದೇಶದಲ್ಲಿ ಜೆಡಿಯು 7 ಸ್ಥಾನಗಳನ್ನು ಗೆದ್ದಿತ್ತು. ಈ ಪೈಕಿ ಆರು ಶಾಸಕರು ಬಿಜೆಪಿ ಸೇರಿದ್ದಾರೆ. ಹೀಗಾಗಿ, ಪಕ್ಷಾಂತರ ಕಾಯ್ದೆ ಕೂಡ ಇದಕ್ಕೆ ಅನ್ವಯ ಆಗುವುದಿಲ್ಲ. ಪೀಪಲ್​ ಪಾರ್ಟಿ ಆಫ್​ ಅರುಣಾಚಲ ಪಕ್ಷದ ಬೆಂಬಲವೂ ಸೇರಿ ಬಿಜೆಪಿ ಈಗ 48 ಸದಸ್ಯ ಬಲವನ್ನು ಹೊಂದಿದಂತಾಗಿದೆ.

ಹಯೇಂಗ್​ ಮಂಗ್​ಫಿ, ಜಿಕ್ಕೆ ತಕೊ, ಡೊಂಗ್ರು ಸಿಯೊಂಗ್ಜು, ತಲೇಮ್ ತಬೋಹ್, ಕಾಂಗ್ಗಾಂಗ್ ಟಕು ಮತ್ತು ಡೋರ್ಜಿ ವಾಂಗ್ಡಿ ಖರ್ಮಾ ಬಿಜೆಪಿ ಸೇರಿದ ಶಾಸಕರು. ಪಕ್ಷ ವಿರೋಧಿ ಕಾರ್ಯದಲ್ಲಿ ತೊಡಗಿದ ಆರೋಪದ ಮೇಲೆ ಮೂವರನ್ನು ಸಸ್ಪೆಂಡ್​ ಮಾಡಲಾಗಿತ್ತು ಮತ್ತು ನೋಟಿಸ್​ ಕೂಡ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಈ ಆರು ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.

ನಿತೀಶ್​ ಕುಮಾರ್​ ಅಸಮಾಧಾನ
ಅರುಣಾಚಲ ರಾಜಕೀಯ ಬೆಳವಣಿಗೆಯಿಂದ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅಸಮಾಧಾನ ಹೊರ ಹಾಕಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅರುಣಾಚಲ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಬಿಜೆಪಿ (41) ನಂತರ ಅತಿ ಹೆಚ್ಚು ಸ್ಥಾನ ಗಳಿಸಿದ ಹೆಗ್ಗಳಿಕೆ ಜೆಡಿಯುನದ್ದಾಗಿತ್ತು. ಇನ್ನು, ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಜೆಡಿಯು ಸರ್ಕಾರ ರಚನೆ ಮಾಡಿದೆ. ಅರುಣಾಚಲದ ಈ ಬೆಳವಣಿಗೆ ಜೆಡಿಯುಗೆ ನುಂಗಲಾರದ ತುತ್ತಾಗಿದೆ.

ಬಿಹಾರದಲ್ಲಿ ಹೊಸ ರಾಜಕೀಯ ಸಂಚಲನ: ಎನ್​ಡಿಎ ಬಿಟ್ಟುಹೋಗಿದ್ದ ಉಪೇಂದ್ರ ಕುಶ್ವಾಹಾ ಜೊತೆ ನಿತೀಶ್​ ಚರ್ಚೆ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us