AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ದಿನಾಂಕ ಘೋಷಣೆ ಮುಂದೂಡಿಕೆ; ಆಕ್ರೋಶ ವ್ಯಕ್ತ ಪಡಿಸಿದ ಆಪ್ ಸರ್ಕಾರ

ಬಿಜೆಪಿ ಓಡಿ ಹೋಗಿದೆ. ಅವರು ಎಂಸಿಡಿ ಚುನಾವಣೆಯನ್ನು ಮುಂದೂಡಿದರು ಮತ್ತು ಸೋಲನ್ನು ಒಪ್ಪಿಕೊಂಡರು. ದೆಹಲಿಯ ಜನರು ತುಂಬಾ ಕೋಪಗೊಂಡಿದ್ದಾರೆ ಎಂದು ಅರವಿಂದ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣಾ ದಿನಾಂಕ ಘೋಷಣೆ ಮುಂದೂಡಿಕೆ; ಆಕ್ರೋಶ ವ್ಯಕ್ತ ಪಡಿಸಿದ ಆಪ್ ಸರ್ಕಾರ
ಅರವಿಂದ ಕೇಜ್ರಿವಾಲ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Mar 09, 2022 | 8:33 PM

Share

ದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ (municipal polls) ದಿನಾಂಕಗಳ ಘೋಷಣೆಯನ್ನು ರಾಜ್ಯ ಚುನಾವಣಾ ಆಯೋಗವು ಬುಧವಾರ ಮುಂದೂಡಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ  (Manish Sisodia) ಇದನ್ನು “ಕೇಂದ್ರದ ಆಜ್ಞೆಯ ಮೇರೆಗೆ” ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರದಿಂದ ದಕ್ಷಿಣ, ಪೂರ್ವ ಮತ್ತು ಉತ್ತರ ಎಂಬ ಮೂರು ನಿಗಮಗಳನ್ನು ಏಕಕಾಲದಲ್ಲಿ ಒಗ್ಗೂಡಿಸಲು ಏಕಕಾಲದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಇದು ದೇಶದ ಪ್ರಜಾಪ್ರಭುತ್ವದಲ್ಲಿ ದುರದೃಷ್ಟಕರ ದಿನ. ಇದು ನಮ್ಮ ದೇಶದ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿದೆ. ನ್ಯಾಯಸಮ್ಮತ ಮತ್ತು ಸಮಯೋಚಿತ ಚುನಾವಣೆಗಳನ್ನು ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಎಂಸಿಡಿ ಚುನಾವಣೆಗಳಿಗೆ ದಿನಾಂಕಗಳನ್ನು ನಿಗದಿಪಡಿಸಲು ನಿರಾಕರಿಸಿದೆ. ಇಂದು ಎಂಸಿಡಿ ಚುನಾವಣೆಯ ದಿನಾಂಕಗಳನ್ನು ಘೋಷಿಸಲು ಚುನಾವಣಾ ಆಯೋಗ ಎಲ್ಲಾ ಮಾಧ್ಯಮ ಸದಸ್ಯರನ್ನು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿಗೆ ಕರೆದಿತ್ತು. ಆದರೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಒತ್ತಡ ಹೇರಿ ತಡೆದು ನಿಲ್ಲಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ಸೋಲನ್ನು ಒಪ್ಪಿಕೊಂಡಿರುವುದರಿಂದ ಮತ್ತು ಓಡಿಹೋಗುತ್ತಿರುವ ಕಾರಣ ದೆಹಲಿಯ ಮುನ್ಸಿಪಲ್ ಚುನಾವಣೆಯನ್ನು ಮುಂದೂಡಲಾಗಿದೆ ಎಂದಿದ್ದಾರೆ.

ಬಿಜೆಪಿ ಓಡಿ ಹೋಗಿದೆ. ಅವರು ಎಂಸಿಡಿ ಚುನಾವಣೆಯನ್ನು ಮುಂದೂಡಿದರು ಮತ್ತು ಸೋಲನ್ನು ಒಪ್ಪಿಕೊಂಡರು. ದೆಹಲಿಯ ಜನರು ತುಂಬಾ ಕೋಪಗೊಂಡಿದ್ದಾರೆ. ಚುನಾವಣೆಯನ್ನು ಮುಂದೂಡುವ ಹುಮ್ಮಸ್ಸು ಇವರಿಗೆ ಹೇಗೆ ಎಂದು ಕೇಳುತ್ತಿದ್ದಾರೆ. ಅವರು ಬಿಜೆಪಿ ಠೇವಣಿ ಕಳೆದುಕೊಳ್ಳುವಂತೆ ಮಾಡುತ್ತಾರೆ. 272ರಲ್ಲಿ 250 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಸಮೀಕ್ಷೆ ಹೇಳಿದೆ. ಈಗ ನಾವು 260 ಕ್ಕಿಂತ ಹೆಚ್ಚು ಪಡೆಯುತ್ತೇವೆ. ಆದರೆ ಚುನಾವಣಾ ಆಯೋಗವು ಬಿಜೆಪಿಯ ಒತ್ತಡಕ್ಕೆ ಮಣಿಯಬಾರದಿತ್ತು,” ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ದೆಹಲಿ ಸರ್ಕಾರದ ಮೂಲಗಳ ಪ್ರಕಾರ, ನಗರದಲ್ಲಿರುವ ಮೂರು ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ಒಂದುಗೂಡಿಸುವಲ್ಲಿ ಕೇಂದ್ರವು ಕೆಲಸ ಮಾಡುತ್ತಿದೆ. ಈ ಘೋಷಣೆಗೆ ಅನುಗುಣವಾಗಿ ಎಂಸಿಡಿ ಚುನಾವಣೆಯ ಘೋಷಣೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ಹೇಳುತ್ತವೆ. ಏತನ್ಮಧ್ಯೆ, ದೆಹಲಿ ಬಿಜೆಪಿ ವಕ್ತಾರ ಹರೀಶ್ ಖುರಾನಾ, ಬಿಜೆಪಿ ಎಂದಿಗೂ ಚುನಾವಣೆಗೆ ಹೆದರುವುದಿಲ್ಲ. “ನಾವು ಯಾವಾಗಲೂ ಚುನಾವಣೆಗೆ ಸಿದ್ಧರಿದ್ದೇವೆ. ಇಂದು ಇರಲಿ, ನಾಳೆ ಇರಲಿ, ಯಾವಾಗಲಾದರೂ ನಾವು ಗೆಲ್ಲುತ್ತೇವೆ. ಈಗ ಅದನ್ನು ಯಾವಾಗ ನಡೆಸಬೇಕು ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸುತ್ತದೆ. ಆದರೆ ಇಂದು, ಎಲ್ಲಾ ಮೂರು ನಿಗಮಗಳ ದುಃಸ್ಥಿತಿಗೆ ಅರವಿಂದ್ ಕೇಜ್ರಿವಾಲ್ ಅವರು ಎಂಸಿಡಿಗಳಿಗೆ ಹಣವನ್ನು ನೀಡದೆ ಮಲತಾಯಿಯ ವರ್ತನೆಯಿಂದಾಗಿ ಕಾರಣ ಎಂಬುದಂತೂ ನಿಜ ಎಂದಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಕರೆ ಮಾಡಿ ಶುಭಾಶಯ ಕೋರಿದ್ದಾರೆ ಅಮಿತ್ ಶಾ; ಏನೋ ವಿಶೇಷ ಇರಬೇಕು ಎಂದ ಶಶಿ ತರೂರ್

Published On - 8:18 pm, Wed, 9 March 22

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ