ಕೈಯಲ್ಲಿ ಹಗ್ಗ, ಬಾಯಲ್ಲಿ ಬಟ್ಟೆ, ಅಪಹರಣವಾದಂತೆ ನಾಟಕವಾಡಿ ಮನೆಯಲ್ಲಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟ ವ್ಯಕ್ತಿ
ಸೂರತ್‌ನ ಲೆಕ್ಕಪರಿಶೋಧಕ ಜಿಗ್ನೇಶ್ ತಲವಿಯಾ, ಷೇರು ಮಾರುಕಟ್ಟೆಯ ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ಭಾರಿ ನಷ್ಟ ಅನುಭವಿಸಿದ್ದರಿಂದ, ಕುಟುಂಬದಿಂದ 50 ಲಕ್ಷ ರೂ. ಸುಲಿಗೆ ಮಾಡಲು ತನ್ನದೇ ಅಪಹರಣದ ನಾಟಕವಾಡಿದ್ದ. ಕೈಕಾಲು ಕಟ್ಟಿಹಾಕಿದ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಪೊಲೀಸರ ತನಿಖೆಯಿಂದ ಆತನ ಸುಳ್ಳು ನಾಟಕ ಬಯಲಾಗಿ, ಬಂಧನಕ್ಕೊಳಗಾಗಿದ್ದಾನೆ.

ಸೂರತ್, ಜೂನ್ 21: ಷೇರು ಮಾರುಕಟ್ಟೆ(Share Market)ಯ ‘ಆಪ್ಷನ್ಸ್ ಟ್ರೇಡಿಂಗ್’ನಲ್ಲಿ ಉಂಟಾದ ಭಾರಿ ನಷ್ಟದಿಂದ ಪಾರಾಗಲು ಗುಜರಾತ್‌ನ ಸೂರತ್ ನಗರದ ಆಡಿಟರ್ ಒಬ್ಬ ಅಪಹರಣ(Kidnap)ದ ನಾಟಕವಾಡಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ತನ್ನ ಕುಟುಂಬದವರ ಬಳಿಯೇ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ಸೂರತ್‌ನ ಮೋಟಾ ವರಾಚಾ ನಿವಾಸಿ ಜಿಗ್ನೇಶ್ ತಲವಿಯಾ ಎಂದು ಗುರುತಿಸಲಾಗಿದೆ. ಜೂನ್ 12 ರಂದು ಈತ ನಾಪತ್ತೆಯಾಗಿದ್ದ.
ಪೊಲೀಸರಿಗೆ ತಿಳಿಸಿದರೆ ಕೊಲೆ ಎಚ್ಚರಿಕೆ: ಜಿಗ್ನೇಶ್ ನಾಪತ್ತೆಯಾದ ತಕ್ಷಣ ಆತನ ಪತ್ನಿ ಮೀನಾಕ್ಷಿಬೆನ್ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಅವರ ಕುಟುಂಬಕ್ಕೆ ಅಪಹರಣಕಾರರ ಹೆಸರಿನಲ್ಲಿ ಆತಂಕಕಾರಿ ಸಂದೇಶಗಳು ಬರಲಾರಂಭಿಸಿದವು. 50 ಲಕ್ಷ ರೂಪಾಯಿ ನೀಡಬೇಕು, ಪೊಲೀಸರಿಗೆ ತಿಳಿಸಿದರೆ ಜಿಗ್ನೇಶ್‌ನನ್ನು ಕೊಲ್ಲಲಾಗುವುದು ಎಂದು ಬೆದರಿಸಲಾಗಿತ್ತು.
ಜಿಗ್ನೇಶ್‌ನ ಕೈಕಾಲುಗಳನ್ನು ಕಟ್ಟಿಹಾಕಿ ಒತ್ತೆಯಾಳಾಗಿ ಇರಿಸಿರುವಂತಹ ವೀಡಿಯೊವೊಂದು ಕುಟುಂಬಕ್ಕೆ ತಲುಪಿತ್ತು. ಹಣ ನೀಡದಿದ್ದರೆ ಹೆಣ ಕಳುಹಿಸುವುದಾಗಿ ಮತ್ತೊಂದು ವಿಡಿಯೋ ಬಂದಾಗ ಕುಟುಂಬಸ್ಥರು ನಿಜವಾದ ಅಪಹರಣವೆಂದೇ ನಂಬಿದ್ದರು.
ಮತ್ತಷ್ಟು ಓದಿ: Video: ಅಜ್ಜ-ಅಜ್ಜಿ ಜತೆ ಬೈಕ್ನಲ್ಲಿ ಕುಳಿತಿದ್ದ 4 ವರ್ಷದ ಬಾಲಕಿಯ ಅಪಹರಣ
ತನಿಖೆ ವೇಳೆ ಪೊಲೀಸರಿಗೆ ಸಿಕ್ಕ ಸುಳಿವು ಹಾಗೂ ಟ್ವಿಸ್ಟ್ ಹೋಟೆಲ್‌ನಲ್ಲಿ ಐಷಾರಾಮಿ ವಾಸ್ತವ್ಯ: ಸೂರತ್ ಡಿಸಿಪಿ ಅಲೋಕ್ ಕುಮಾರ್ ಝಾಲಾ ನೇತೃತ್ವದಲ್ಲಿ ಗುಜರಾತ್ ಮತ್ತು ಮಧ್ಯಪ್ರದೇಶದಾದ್ಯಂತ ಸಿಸಿಟಿವಿ ಹಾಗೂ ತಾಂತ್ರಿಕ ಕಣ್ಗಾವಲು ಮೂಲಕ ಪೊಲೀಸರು ಬಲೆ ಬೀಸಿದ್ದರು. ಜೂನ್ 15 ರಂದು ಗೋಧ್ರಾದ ‘ಶಿವ್ ಹೋಟೆಲ್’ ಮೇಲೆ ದಾಳಿ ನಡೆಸಿದಾಗ ಜಿಗ್ನೇಶ್ ಯಾವುದೇ ಹಾನಿಯಿಲ್ಲದೆ ಆರಾಮವಾಗಿ ಇರುವುದು ಪತ್ತೆಯಾಗಿದೆ.
Man stages his own fake kidnapping and demands 50 lakhs from family to cover up his financial losses incurred through trading.
Kitne tejasvi log hain 🤣🤣 pic.twitter.com/S9K0QNSzdf
— Yogesh Kumar (@Yogesh_KP07) June 20, 2026
ವಿಚಾರಣೆ ನಡೆಸಿದಾಗ ಜಿಗ್ನೇಶ್ ತನ್ನದೇ ಅಪಹರಣದ ಪ್ಲಾನ್ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಯಾರದೇ ಸಹಾಯವಿಲ್ಲದೆ ತಾನೇ ಹೇಗೆ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು, ಮೊಬೈಲ್ ಮೂಲಕ ವಿಡಿಯೋ ರೆಕಾರ್ಡ್ ಮಾಡಿಕೊಂಡೆ ಎಂಬುದನ್ನು ಪೊಲೀಸರ ಎದುರು ಆತ ಸ್ವತಃ ಪ್ರದರ್ಶಿಸಿ ತೋರಿಸಿದ್ದಾನೆ.
ಪೊಲೀಸ್ ತನಿಖೆಯ ಪ್ರಕಾರ, ಜಿಗ್ನೇಶ್ ಶೇರು ಮಾರುಕಟ್ಟೆಯ ಅತ್ಯಂತ ಅಪಾಯಕಾರಿ ವಿಭಾಗವಾದ ಕಾಲ್ ಮತ್ತು ಪುಟ್ ಆಪ್ಷನ್ಸ್ ಟ್ರೇಡಿಂಗ್‌ನಲ್ಲಿ ಭಾರಿ ಹೂಡಿಕೆ ಮಾಡಿ ಸುಮಾರು 50 ರಿಂದ 60 ಲಕ್ಷ ರೂಪಾಯಿಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ. ಸಾಲಗಾರರ ಕಾಟ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಸ್ವಂತ ಕುಟುಂಬದಿಂದಲೇ ಹಣ ಸುಲಿಗೆ ಮಾಡಲು ಈ ಜಾಲ ಹೆಣೆದಿದ್ದ.
ವೈರಲ್ ವಿಡಿಯೋ
ઉત્રાણ વિસ્તારમાં ₹50 લાખ મેળવવા પોતાના જ અપહરણનું નાટક રચનાર શખ્સને પોલીસે ઝડપી પાડ્યો 12 મે 2026ના રોજ જીગ્નેશ તળાવિયા ગુમ થતાં પત્નીએ ઉત્રાણ પોલીસ મથકે ફરિયાદ નોંધાવી હતી પતિના જ મોબાઈલમાંથી પત્નીને ₹50 લાખની ખંડણી માંગતો અને જાનથી મારી નાખવાની ધમકીનો મેસેજ મળ્યો… pic.twitter.com/fJTYtIwbZT
— Benefit News 24 (@BenefitNews24) June 18, 2026
ಸುಳ್ಳು ಮಾಹಿತಿ ನೀಡುವುದು, ನಕಲಿ ಸಾಕ್ಷ್ಯ ಸೃಷ್ಟಿ ಮತ್ತು ಪೊಲೀಸ್ ಇಲಾಖೆಯ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತಾ (BNS) ಅಡಿಯಲ್ಲಿ ಜಿಗ್ನೇಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




