ವಿರುದ್ಧವಾಗಿ ಯಾರೇ ನಿಂತ್ರೂ ಗೆಲ್ಲುವುದು ಡಿಎಂಕೆ ಮಾತ್ರ: ಉದಯನಿಧಿ ಸ್ಟಾಲಿನ್
ವಿರುದ್ಧವಾಗಿ ಯಾರೇ ನಿಂತರೂ ಚುನಾವಣೆಯಲ್ಲಿ ಗೆಲ್ಲುವುದು ಡಿಎಂಕೆ ಮಾತ್ರ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರೇ ವಿರೋಧವಾಗಿ ಬಂದರೂ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ವಿಜಯ್ ಎಚ್ಚರಿಕೆ ನೀಡಿದ್ದಾರೆ.
ವಿರುದ್ಧವಾಗಿ ಯಾರೇ ನಿಂತರೂ ತಮಿಳುನಾಡು ಚುನಾವಣೆಯಲ್ಲಿ ಗೆಲ್ಲುವುದು ಡಿಎಂಕೆ ಮಾತ್ರ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. 2026ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರೇ ವಿರೋಧವಾಗಿ ಬಂದರೂ ತಮ್ಮ ಪಕ್ಷವೇ ಗೆಲ್ಲಲಿದೆ ಎಂದು ಉದಯನಿಧಿ ಸ್ಟಾಲಿನ್ ಪರೋಕ್ಷವಾಗಿ ವಿಜಯ್ ಎಚ್ಚರಿಕೆ ನೀಡಿದ್ದಾರೆ.
ನಟ, ರಾಜಕಾರಣಿ ವಿಜಯ್ ಅಕ್ಟೋಬರ್ 27 ರಂದು ಹೊಸದಾಗಿ ಪ್ರಾರಂಭಿಸಲಾದ ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (TVK) ಉದ್ಘಾಟನಾ ಸಮಾವೇಶವನ್ನು ನಡೆಸಿದರು.
ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ವಿಜಯ್ ಅವರು ತಮ್ಮ ಮೊದಲ ರಾಜಕೀಯ ಭಾಷಣವನ್ನು ಮಾಡಿದರು. ಅವರು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮತ್ತು ಬಿಜೆಪಿಯನ್ನು ಹೆಸರಿಸದೆ ವಿರುದ್ಧ ಮಾತನಾಡಿದ್ದರು.
ಅದಕ್ಕೆ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, 2026ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ವಿರೋಧಿಸಲು ಯಾರು ನಿರ್ಧರಿಸಿದರೂ, ಯಾವುದೇ ಮೈತ್ರಿ ಮಾಡಿಕೊಂಡರೂ ಡಿಎಂಕೆಯೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯ್ ಜೊತೆ ಬಹಳ ದಿನಗಳಿಂದ ಗೆಳೆತನ ಹೊಂದಿರುವ ಉದಯನಿಧಿ, ತಮ್ಮ ಚೊಚ್ಚಲ ರಾಜಕೀಯ ಸಮಾವೇಶಕ್ಕೆ ಸಹ ನಟನಿಗೆ ಶುಭ ಹಾರೈಸಿದ್ದರು.
ಮತ್ತಷ್ಟು ಓದಿ: Thalapathy Vijay: ತಮಿಳುನಾಡು ಚುನಾವಣೆಗೆ ನಟ ದಳಪತಿ ವಿಜಯ್ ಸಿದ್ಧತೆ, ಪಕ್ಷದ ಚಿಹ್ನೆ ಬಿಡುಗಡೆ
ವಿಜಯ್ ಏನು ಹೇಳಿದ್ದರು? ಮೊದಲ ಸಭೆಯಲ್ಲಿ ದಳಪತಿ ವಿಜಯ್ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆ ಒಂದು ಕುಟುಂಬ ತಮಿಳುನಾಡನ್ನು ಲೂಟಿ ಮಾಡುತ್ತಿದೆ ಎಂದಿದ್ದರು. ದ್ರಾವಿಡ ರಾಜಕಾರಣ ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದ್ದಾರೆ. ವಿಜಯ್ ವೇದಿಕೆಯಲ್ಲಿ ಡಿಎಂಕೆ ಮತ್ತು ಬಿಜೆಪಿ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ನಮ್ಮಲ್ಲಿ ಯಾವುದೇ ರಾಜಿ ರಾಜಕಾರಣ ಇಲ್ಲ. 2026ರ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದೂ ವಿಜಯ್ ಘೋಷಿಸಿದ್ರು. ತಮಿಳಿಗ ವೆಟ್ರಿ ಕಳಗಂನ ಮೊದಲ ಸಮ್ಮೇಳನದಲ್ಲಿ ವಿಜಯ್ ಮಾಡಿದ ಭಾಷಣ ಡಿಎಂಕೆ ವಿರುದ್ಧ ಮಾತನಾಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ