ಪ್ರಧಾನಿ ಮೋದಿಗೆ 750 ವರ್ಷದ ಹಿಂದಿನ ಗ್ರಂಥ ಉಡುಗೊರೆ ನೀಡಿದ ತೇಜಸ್ವಿ ಸೂರ್ಯ ದಂಪತಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ದಂಪತಿ ಮೋದಿಯವರ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಅವರು ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ʼಸರ್ವಮೂಲʼ ಗ್ರಂಥವನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚೆಗಷ್ಟೆ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರೊಂದಿಗೆ ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾಹವಾಗಿದ್ದರು.

ನವದೆಹಲಿ, ಮಾರ್ಚ್ 28: ಇತ್ತೀಚೆಗಷ್ಟೇ ಮದುವೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಪ್ರಧಾನಿ ಮೋದಿಯವರಿಗೆ ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ಸಂರಕ್ಷಿತ ʼಸರ್ವಮೂಲʼ ಗ್ರಂಥವನ್ನು ಉಡುಗೊರೆಯಾಗಿ ನೀಡಿದ್ದು ವಿಶೇಷ.
ನಮ್ಮನ್ನು ಆಶೀರ್ವದಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನಮ್ಮ ಮದುವೆ ಸಮಾರಂಭದ ಫೋಟೋಗಳನ್ನು ಈಗಾಗಲೇ ವೀಕ್ಷಿಸಿರುವುದಾಗಿ ತಿಳಿಸಿದ್ದು ತುಂಬಾ ಖುಷಿಯನ್ನುಂಟು ಮಾಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಸಂತಸ ಹಂಚಿಕೊಂಡಿದ್ದಾರೆ.
Sivasri and I had the opportunity to meet and receive blessings from our Hon. PM Sri @narendramodi Ji.
As always, the PM exuded warmth and love and blessed us. He remarked that he had seen our wedding pictures, which left us both pleasantly surprised.
On the occasion, we… pic.twitter.com/CQFgR9Xeah
— Tejasvi Surya (@Tejasvi_Surya) March 28, 2025
ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಮಧ್ವಾಚಾರ್ಯ ವಿರಚಿತ 750 ವರ್ಷಗಳ ಹಿಂದಿನ ಸಂರಕ್ಷಿತ ʼಸರ್ವಮೂಲ ಗ್ರಂಥʼವನ್ನು ಉಡುಗೊರೆಯಾಗಿ ನೀಡಲಾಯಿತು. ಅತ್ಯಂತ ಪುರಾತನವಾಗಿರುವ ಈ ಗ್ರಂಥವನ್ನು ನೂತನ ತಂತ್ರಜ್ಞಾನದ ಮೂಲಕ ಸಂರಕ್ಷಿಸಲಾಗಿದ್ದು, ಇವುಗಳು ವಾಟರ್ ಪ್ರೂಫ್ , ಫೈರ್ ಪ್ರೂಫ್ ತಂತ್ರಜ್ಞಾನವನ್ನು ಒಳಗೊಂಡಿರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ತೇಜಸ್ವಿ ಸೂರ್ಯ ವಿವರಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎನ್.ಜಿ.ಓ ತಾರಾ ಪ್ರಕಾಶನದಿಂದ ಈ ಗ್ರಂಥವನ್ನು ಸಂರಕ್ಷಿಸಲಾಗಿದ್ದು, ತಾಳೆಗರಿ ಮತ್ತು ಪುರಾತನ ಹಸ್ತಪ್ರತಿಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಈ ಸಂಸ್ಥೆ ತೊಡಗಿಸಿಕೊಂಡಿದೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್ ಸಂಗೀತ ಸಾಧನೆ ಹಿಂದಿದೆ ರಾಯರ ಕೃಪೆ
ಸಂರಕ್ಷಣಾ ವಿಧಾನವನ್ನು ವಿಧೇಯ ವಿದ್ಯಾರ್ಥಿಯಂತೆ ಕೇಳಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ನಮ್ಮ ಪೂರ್ವಜರ ಜ್ಞಾನ, ಸಂಸ್ಕೃತಿ ಉಳಿಸುವಿಕೆ ನಿಟ್ಟಿನಲ್ಲಿ ಜ್ಞಾನ ಭಾರತಿ ಮಿಶನ್ ಅನ್ನು ಆರಂಭಿಸಲಾಗಿದ್ದು, ಇದಕ್ಕೆ ಬಜೆಟ್ ನಲ್ಲಿ ಅನುದಾನ ಕೂಡ ಒದಗಿಸಿದ್ದು ಶ್ಲಾಘನೀಯ.
ತಾರಾ ಪ್ರಕಾಶನ 2006ರಲ್ಲಿ ವೇದಗಳಲ್ಲಿನ ಜ್ಞಾನ ಸಂರಕ್ಷಣೆ, ಪಸರಿಸುವ ನಿಟ್ಟಿನಲ್ಲಿ ಪ್ರಾರಂಭಗೊಂಡಿದೆ. ಕಳೆದ 18 ವರ್ಷಗಳಲ್ಲಿ ಸಂಸ್ಥೆಯು, ನೂತನ ತಂತ್ರಜ್ಞಾನದ ಸಹಾಯದೊಂದಿಗೆ ಪುರಾತನ ಹಸ್ತಪ್ರತಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದೆ. ತಾಳೆಗರಿಗಳಲ್ಲಿನ ಬರಹಗಳನ್ನು ಡಿಕೋಡ್ ಮಾಡುವ, ಮುಂದಿನ ಹಲವಾರು ವರ್ಷಗಳವರೆಗೆ ನಾಶವಾಗದ ರೀತಿಯಲ್ಲಿ ವಿನ್ಯಾಸಗೊಳಿಸುವ ಕಾರ್ಯವನ್ನು ಈ ಸಂಸ್ಥೆಯು ಮಾಡುತ್ತಿದೆ.
ಇದನ್ನೂ ಓದಿ: ಏಪ್ರಿಲ್ನಲ್ಲಿ ಥೈಲ್ಯಾಂಡ್, ಶ್ರೀಲಂಕಾಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ
ಅಮೆರಿಕದ ರೋಚೆಸ್ಟರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಪ್ರೊಫೆಸರ್ ಆಗಿರುವ , ಪಿ.ಆರ್ ಮುಕುಂದ್ ಅವರಿಂದ ತಾರಾ ಪ್ರಕಾಶನವು ಸ್ಥಾಪಿತವಾಗಿದ್ದು, ಆಧ್ಯಾತ್ಮಿಕತೆ ಮತ್ತು ವಿಜ್ಞಾನಗಳ ಸಂಬಂಧಗಳ ಕುರಿತಾಗಿ ಹಲವು ಪುಸ್ತಕಗಳನ್ನು ಕೂಡ ಇವರು ಬರೆದಿದ್ದು ಗಮನಾರ್ಹ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ