ಕೊರೊನಾ ವಿರುದ್ಧ ಭಾರತಕ್ಕೆ ಮೊದಲ ಜಯ: ಬೆಂಗಳೂರು ಮೂಲಕ ಹೋಗಿದ್ದ ಟೆಕ್ಕಿ ಪಾರು

ಹೈದರಾಬಾದ್: ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಟೆಕ್ಕಿಯೋರ್ವ ಕೊರೊನಾದಿಂದ ಪಾರಾಗಿದ್ದಾರೆ. ಈ ಬಗ್ಗೆ ತೆಲಂಗಾಣ ಸಚಿವ ಈಟೇಲ ರಾಜೇಂದ್ರ ತಿಳಿಸಿದ್ದಾರೆ. ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಗಳಲ್ಲಿ ಸೋಂಕಿತನ ವರದಿಯು ನೆಗೆಟಿವ್ ಬಂದಿದೆ. 48 ಗಂಟೆಗಳ ಬಳಿಕ ಮತ್ತೆ ಟೆಕ್ಕಿಯ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ಲ್ಯಾಬ್​ಗೆ ಕಳುಹಿಸಲಾಗುವುದು. ಅಲ್ಲಿಯೂ ಸಹ ವರದಿ ನೆಗೆಟಿವ್ ಬಂದರೆ ಡೆಡ್ಲಿ ಕೊರೊನಾ ವೈರಸ್​ನಿಂದ ಟೆಕ್ಕಿ ಪೂರ್ತಿ ಗುಣಮುಖನಾದಂತೆ ಎಂದು ಸಚಿವರು ತಿಳಿಸಿದರು. 24 ವರ್ಷದ ಸಾಫ್ಟ್​ವೇರ್ ಇಂಜಿನಿಯರ್ ದುಬೈನಿಂದ […]

ಕೊರೊನಾ ವಿರುದ್ಧ ಭಾರತಕ್ಕೆ ಮೊದಲ ಜಯ: ಬೆಂಗಳೂರು ಮೂಲಕ ಹೋಗಿದ್ದ ಟೆಕ್ಕಿ ಪಾರು
Follow us
ಸಾಧು ಶ್ರೀನಾಥ್​
|

Updated on: Mar 11, 2020 | 10:25 AM

ಹೈದರಾಬಾದ್: ಡೆಡ್ಲಿ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದ ಟೆಕ್ಕಿಯೋರ್ವ ಕೊರೊನಾದಿಂದ ಪಾರಾಗಿದ್ದಾರೆ. ಈ ಬಗ್ಗೆ ತೆಲಂಗಾಣ ಸಚಿವ ಈಟೇಲ ರಾಜೇಂದ್ರ ತಿಳಿಸಿದ್ದಾರೆ. ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ನಡೆದ ಪರೀಕ್ಷೆಗಳಲ್ಲಿ ಸೋಂಕಿತನ ವರದಿಯು ನೆಗೆಟಿವ್ ಬಂದಿದೆ. 48 ಗಂಟೆಗಳ ಬಳಿಕ ಮತ್ತೆ ಟೆಕ್ಕಿಯ ರಕ್ತದ ಮಾದರಿಯನ್ನು ಪುಣೆಯ ವೈರಾಲಜಿ ಲ್ಯಾಬ್​ಗೆ ಕಳುಹಿಸಲಾಗುವುದು. ಅಲ್ಲಿಯೂ ಸಹ ವರದಿ ನೆಗೆಟಿವ್ ಬಂದರೆ ಡೆಡ್ಲಿ ಕೊರೊನಾ ವೈರಸ್​ನಿಂದ ಟೆಕ್ಕಿ ಪೂರ್ತಿ ಗುಣಮುಖನಾದಂತೆ ಎಂದು ಸಚಿವರು ತಿಳಿಸಿದರು.

24 ವರ್ಷದ ಸಾಫ್ಟ್​ವೇರ್ ಇಂಜಿನಿಯರ್ ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ. ಬೆಂಗಳೂರಿನಲ್ಲಿ ಎರಡು ದಿನ ತಂಗಿ ನಂತರ ಹೈದರಾಬಾದ್​ಗೆ ಪ್ರಯಾಣಿಸಿದ್ದ. ವಿಮಾನ ನಿಲ್ದಾಣದಲ್ಲಿ ರಕ್ತ ಪರೀಕ್ಷೆ ಮಾಡಿದಾಗ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಹೈದರಾಬಾದ್​ನ ಗಾಂಧಿ ಆಸ್ಪತ್ರೆಯಲ್ಲಿ ಟೆಕ್ಕಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.