ಕಾಶ್ಮೀರ್ ಫೈಲ್ಸ್​ ನಿರ್ದೇಶಕರಿಗೆ ಉಗ್ರರ ಸಂಪರ್ಕವಿದೆ, ಇದು ಬ್ರಾಹ್ಮಣರಲ್ಲಿ ಭಯ ಹುಟ್ಟಿಸುವ ಪ್ರಯತ್ನ; ಬಿಹಾರದ ಮಾಜಿ ಸಿಎಂ ಆರೋಪ

The Kashmir Files: ಕಾಶ್ಮೀರದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳದಂತೆ ಭಯದ ಭಾವನೆ ಹುಟ್ಟುಹಾಕಲು ಭಯೋತ್ಪಾದಕ ಸಂಘಟನೆಗಳು ಮಾಡಿದ ಪಿತೂರಿಯೇ ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ಎಂದು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಟೀಕಿಸಿದ್ದಾರೆ.

ಕಾಶ್ಮೀರ್ ಫೈಲ್ಸ್​ ನಿರ್ದೇಶಕರಿಗೆ ಉಗ್ರರ ಸಂಪರ್ಕವಿದೆ, ಇದು ಬ್ರಾಹ್ಮಣರಲ್ಲಿ ಭಯ ಹುಟ್ಟಿಸುವ ಪ್ರಯತ್ನ; ಬಿಹಾರದ ಮಾಜಿ ಸಿಎಂ ಆರೋಪ
ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 18, 2022 | 2:23 PM

ನವದೆಹಲಿ: ಬಾಲಿವುಡ್​ನ ದಿ ಕಾಶ್ಮೀರ್ ಫೈಲ್ಸ್​ (The Kashmir Files) ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ಕೂಡ ನೀಡಲಾಗಿದೆ. ಕೆಲವೆಡೆ ಸಿನಿಮಾ ನೋಡಲು ಸರ್ಕಾರಿ ಉದ್ಯೋಗಿಳಿಗೆ ರಜೆ ಕೂಡ ನೀಡಲಾಗಿದೆ. ಇದಕ್ಕೆ ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳಿಂದ ಟೀಕೆಯೂ ವ್ಯಕ್ತವಾಗಿದೆ. ಎನ್‌ಡಿಎ ಸರ್ಕಾರವು ಬಿಹಾರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರು 1980ರ ದಶಕದ ಉತ್ತರಾರ್ಧದಲ್ಲಿ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಆಧರಿಸಿದ ಈ ಸಿನಿಮಾ ಕಾಶ್ಮೀರದ ಬ್ರಾಹ್ಮಣರಲ್ಲಿ ಭಯ ಹುಟ್ಟಿಸಲು ಮಾಡಿರುವ ಪಿತೂರಿಯಾಗಿರಬಹುದು ಎಂದು ಆರೋಪಿಸಿದ್ದಾರೆ.

ಈ ಸಿನಿಮಾ ಜಮ್ಮು ಕಾಶ್ಮೀರದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳದಂತೆ ಅವರಲ್ಲಿ ಭಯದ ಭಾವನೆಯನ್ನು ಹುಟ್ಟುಹಾಕಲು ಭಯೋತ್ಪಾದಕ ಸಂಘಟನೆಗಳು ಮಾಡಿದ ಪಿತೂರಿಯಾಗಿದೆ. ಅಲ್ಲದೆ, ಉಗ್ರ ಸಂಘಟನೆಗಳು ಮತ್ತು ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ನಿರ್ಮಾಪಕರ ನಡುವಿನ ಸಂಪರ್ಕದ ಬಗ್ಗೆ ಸುಳಿವು ನೀಡಿದ ಮಾಂಝಿ “ಕಾಶ್ಮೀರ ಫೈಲ್ಸ್​ ಸಿನಿಮಾ ಕಾಶ್ಮೀರಿ ಬ್ರಾಹ್ಮಣರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಭಯೋತ್ಪಾದಕರ ಪಿತೂರಿಯೂ ಆಗಿರಬಹುದು. ಇದರಿಂದ ಅವರು ಮತ್ತೆ ಕಾಶ್ಮೀರಕ್ಕೆ ಹೋಗಬಾರದು ಎಂಬ ಉದ್ದೇಶವಿರಬಹುದು” ಎಂದಿದ್ದಾರೆ.

The Kashmir Files

ದಿ ಕಾಶ್ಮೀರ್ ಫೈಲ್ಸ್

ದಿ ಕಾಶ್ಮೀರ್ ಫೈಲ್ಸ್​ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಭಯೋತ್ಪಾದಕ ಸಂಘಟನೆಗಳು ಮತ್ತು ಸಿನಿಮಾದ ನಿರ್ಮಾಪಕರ ನಡುವೆ ಸಂಪರ್ಕ ಇರಬಹುದು ಎಂದು ಅವರು ಹೇಳಿದ್ದಾರೆ. “ದಿ ಕಾಶ್ಮೀರ್ ಫೈಲ್ಸ್” ಚಿತ್ರತಂಡ ಮತ್ತು ಅವರ ಸಂಭವನೀಯ ಭಯೋತ್ಪಾದಕ ಸಂಪರ್ಕದ ಕುರಿತೂ ತನಿಖೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ಕಾಶ್ಮೀರಿ ಪಂಡಿತರ ವಾಸ್ತವ ಸ್ಥಿತಿಯನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ಈ ಸಿನಿಮಾವನ್ನು ಶ್ಲಾಘಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯನ್ನು ಶ್ಲಾಘಿಸಿದ್ದಾರೆ. ಜನರನ್ನು ಜಾಗೃತಗೊಳಿಸಲು ಕಾಶ್ಮೀರದ ಕುರಿತು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ. ಹಾಗೇ, ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿಗೆ ವೈ ಕೆಟಗರಿಯ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶವಿರೋಧಿಗಳು; ವಿವಾದಾತ್ಮಕ ಹೇಳಿಕೆ ಕೊಟ್ಟ ಶಾಸಕ ರೇಣುಕಾಚಾರ್ಯ

ದಿ ಕಾಶ್ಮೀರ್ ಫೈಲ್ಸ್​ ಸಿನಿಮಾದಂತೆ ದಿ ಲಖಿಂಪುರ್​ ಫೈಲ್ಸ್​ ಸಿನಿಮಾವೂ ಬರಲಿ: ಎಸ್​ಪಿ ಮುಖ್ಯಸ್ಥ ಅಖಿಲೇಶ್​ ಯಾದವ್​

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು