ಬಿಜೆಪಿ ನಾಯಕನ ಬಾಯಿಗೆ ಆ್ಯಸಿಡ್ ಸುರಿಯುತ್ತೇನೆ ಎಂದು ಬೆದರಿಕೆ ಹಾಕಿದ ಟಿಎಂಸಿ ಶಾಸಕ
ಟಿಎಂಸಿ ಶಾಸಕರೊಬ್ಬರು ಬಿಜೆಪಿ ನಾಯಕನ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮಾಲ್ಡಾ ಜಿಲ್ಲಾ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷ ಅಬ್ದುರ್ ರಹೀಮ್ ಬಕ್ಷಿ ಬಿಜೆಪಿ ಶಾಸಕರ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಭಾರತದ ಇತರ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಭಕ್ಷಿ ಮಾತನಾಡಿದರು.ಬಕ್ಷಿ ಅವರು ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಮೇಲೆ ವಾಗ್ದಾಳಿ ನಡೆಸಿದರು.

ಕೋಲ್ಕತ್ತಾ, ಸೆಪ್ಟೆಂಬರ್ 07: ಟಿಎಂಸಿ ಶಾಸಕರೊಬ್ಬರು ಬಿಜೆಪಿ ನಾಯಕನ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿರುವ ಘಟನೆ ಪಶ್ಚಿಮ ಬಂಗಾಳ(West Bengal)ದಲ್ಲಿ ನಡೆದಿದೆ. ಮಾಲ್ಡಾ ಜಿಲ್ಲಾ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧ್ಯಕ್ಷ ಅಬ್ದುರ್ ರಹೀಮ್ ಬಕ್ಷಿ ಬಿಜೆಪಿ ಶಾಸಕರ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿದ್ದಾರೆ.
ಭಾರತದ ಇತರ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಭಕ್ಷಿ ಮಾತನಾಡಿದರು.ಬಕ್ಷಿ ಅವರು ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಮೇಲೆ ವಾಗ್ದಾಳಿ ನಡೆಸಿದರು. ಆದರೆ ಅವರ ಹೆಸರನ್ನು ಉಲ್ಲೇಖಿಸಲಿಲ್ಲ. ಬಂಗಾಳದ ವಲಸೆ ಕಾರ್ಮಿಕರನ್ನು ರೋಹಿಂಗ್ಯಾಗಳು ಅಥವಾ ಬಾಂಗ್ಲಾದೇಶಿಗಳು ಎಂದು ಬಣ್ಣಿಸುವ ಘೋಷ್ ಅವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, ಬಕ್ಷಿ ಮಾತನಾಡಿದ್ದಾರೆ.
ಬಂಗಾಳದ ಹೊರಗೆ ಕೆಲಸ ಮಾಡುವ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ, ಅವರು ರೋಹಿಂಗ್ಯಾಗಳು, ಅವರು ಬಾಂಗ್ಲಾದೇಶಿಯರು ಎಂದು ನಾಚಿಕೆಯಿಲ್ಲದೆ ಹೇಳುತ್ತಾರೆ. ನಾನು ಆಗಲೂ ಹೇಳಿದ್ದೆ ಮತ್ತು ಇಂದು ಹೇಳುತ್ತಿದ್ದೇನೆ ನಾನು ಇದನ್ನು ಮತ್ತೆ ನಿಮ್ಮಿಂದ ಕೇಳಿದರೆ, ನಿಮ್ಮ ಬಾಯೊಳಗೆ ಆ್ಯಸಿಡ್ ಸುರಿದು ನಿಮ್ಮ ಧ್ವನಿಯೇ ಹೊರ ಬರದ ಹಾಗೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಧ್ವಜಗಳನ್ನು ಹರಿದು ಹಾಕಬೇಕು ಮತ್ತು ಪಕ್ಷವನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕೆಂದು ಅವರು ಜನರನ್ನು ಒತ್ತಾಯಿಸಿದರು. ಈ ಹೇಳಿಕೆಗಳು ಬಿಜೆಪಿಯಿಂದ ತಕ್ಷಣವೇ ಖಂಡನೆಗೆ ಗುರಿಯಾಯಿತು, ಆಡಳಿತ ಪಕ್ಷವು ಬೆದರಿಕೆ ಮತ್ತು ಹಿಂಸೆಯ ಸಂಸ್ಕೃತಿಯನ್ನು ಬೆಳೆಸುತ್ತಿದೆ ಎಂದು ಅದು ಆರೋಪಿಸಿತು. ಮಾಲ್ಡಾ ಉತ್ತರದ ಬಿಜೆಪಿ ಸಂಸದ ಖಗೆನ್ ಮುರ್ಮು, ಇಂತಹ ಬೆದರಿಕೆಗಳು ರಾಜ್ಯ ಚುನಾವಣೆಗೆ ಮುನ್ನ ಆಡಳಿತ ಪಕ್ಷದ ಹತಾಶೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಮತ್ತಷ್ಟು ಓದಿ:
ಬಂಗಾಳಿ ವಲಸಿಗರು ರೋಹಿಂಗ್ಯಾಗಳೆಂದು ಸಾಬೀತುಪಡಿಸಿ; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು
ಇದು ತೃಣಮೂಲ ಕಾಂಗ್ರೆಸ್‌ನ ಸಂಸ್ಕೃತಿ. ಜನರನ್ನು ಬೆದರಿಸುವುದು ಅವರ ಕೆಲಸ. ಮಾಲ್ಡಾದಲ್ಲಿ ಈಗ ಇಂತಹ ಹೇಳಿಕೆಗಳು ನಿರಂತರವಾಗಿ ನಡೆಯುತ್ತಿವೆ. ಟಿಎಂಸಿ ಜಿಲ್ಲಾಧ್ಯಕ್ಷರು ಸುದ್ದಿಯಲ್ಲಿರಲು ಆಗಾಗ ಇಂತಹ ವಿಷಯಗಳನ್ನು ಹೇಳುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋಲುತ್ತದೆ ಎಂಬ ಭಯದಲ್ಲಿ ಇಂಥಾ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಮುರ್ಮು ಹೇಳಿದರು.
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಸದಸ್ಯರಿಗೆ ಅವಹೇಳನಕಾರಿ ಅಥವಾ ಪ್ರಚೋದನಕಾರಿ ಭಾಷೆಯನ್ನು ಬಳಸದಂತೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದಾರೆ ಅದರ ಹೊರತಾಗಿಯೂ ಈ ಹೇಳಿಕೆ ಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




