ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಸೈನಿಕರು ಕಳೆದ 14 ದಿನಗಳಿಂದ ನಾಪತ್ತೆ
ಅರುಣಾಚಲ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಇಬ್ಬರು ಭಾರತೀಯ ಸೇನಾ ಯೋಧರು ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ (Arunachal Pradesh) ನಿಯೋಜನೆಗೊಂಡಿದ್ದ ಇಬ್ಬರು ಭಾರತೀಯ ಯೋಧರು (Indian Army) ಕಳೆದ 14 ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಇಬ್ಬರು ಯೋಧರು ಉತ್ತರಾಖಂಡದವರಾಗಿದ್ದು (Uttarakhand) , 7 ನೇ ಗರ್ವಾಲ್ ರೈಫಲ್ಸ್ಗೆ ಸೇರಿದ ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಮೇ 28 ರಂದು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಇಂಡಿಯಾ ಟುಡೇ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ ಪ್ರಕಾಶ್ ಸಿಂಗ್ ರಾಣಾ ಅವರ ಪತ್ನಿ ಮಮತಾ ರಾಣಾ, ಮೇ 29 ರಂದು ಸೇನಾ ಅಧಿಕಾರಿಗಳು ತನಗೆ ಕರೆ ಮಾಡಿ ಪತಿ ಮೇ 28 ರಂದು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ಹೇಳಿದರು.
ಜೂನ್ 9 ರಂದು ಎರಡನೇ ಫೋನ್ ಕರೆ ಬಂದಿತು ಮತ್ತು ಇಬ್ಬರೂ ಸೈನಿಕರು ನದಿಯಲ್ಲಿ ಮುಳುಗಿದ್ದಾರೆ ಎಂದು ನಂಬಲಾಗಿದೆ ಎಂದು ಅವರು ನನಗೆ ಹೇಳಿದರು ಎಂದು ಮಮತಾ ಹೇಳಿದರು. ಮಮತಾ ಮತ್ತು ಪ್ರಕಾಶ್ ಸಿಂಗ್ ರಾಣಾ ದಂಪತಿಗೆ ಇಬ್ಬರು ಅಪ್ರಾಪ್ತ ಮಕ್ಕಳಾದ ಅನುಜ್ (10) ಮತ್ತು ಅನಾಮಿಕಾ (7) ಪ್ರಕಾಶ್ ಇದ್ದಾರೆ.
ಇದನ್ನು ಓದಿ: ರಾಷ್ಟ್ರಪತಿ ಚುನಾವಣೆಗಾಗಿ ಮತ್ತೆ ಪ್ರತಿಪಕ್ಷಗಳ ಒಗ್ಗಟ್ಟು; ಜೂನ್ 15ಕ್ಕೆ ದೆಹಲಿಯಲ್ಲಿ ಮುಹೂರ್ತ ಫಿಕ್ಸ್
ಹರೇಂದ್ರ ನೇಗಿ ಅವರ ಪತ್ನಿ ಪೂನಂ ನೇಗಿ ಮಾತನಾಡಿದ್ದು, ಏನಾಯಿತು ಎಂಬುದನ್ನು ಸೇನೆಯು ವಿವರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಹರೇಂದ್ರ ನೇಗಿ ಮತ್ತು ಅವರ ಪತ್ನಿ ಪೂನಂ ನೇಗಿ ಅವರಿಗೆ ಒಂದು ವರ್ಷದ ಮಗುವಿದ್ದು, ಮದುವೆಯಾಗಿ ಕೇವಲ ಮೂರು ವರ್ಷಗಳಾಗಿವೆ.
ಇದನ್ನು ಓದಿ: ಪ್ರವಾದಿ ಮೊಹ್ಮದರ ವಿರುದ್ಧ ನೂಪುರ್ ಶರ್ಮಾ ಹೇಳಿಕೆ: ನೂಪುರ್ ಶರ್ಮಾಗೆ ಸಮನ್ಸ್ ನೀಡಿದ ಮುಂಬೈ ಪೊಲೀಸ್
ಈ ನಡುವೆ ಸಹಸ್‌ಪುರದ ಬಿಜೆಪಿ ಶಾಸಕ ಸಹದೇವ್ ಸಿಂಗ್ ಪುಂಡೀರ್ ಶುಕ್ರವಾರ ಪ್ರಕಾಶ್ ಸಿಂಗ್ ರಾಣಾ ಅವರ ಕುಟುಂಬವನ್ನು ಅವರ ಸೈನಿಕ ಕಾಲೋನಿ ನಿವಾಸದಲ್ಲಿ ಭೇಟಿಯಾದರು. “ನಾನು ಈ ಬಗ್ಗೆ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಏನಾದರೂ ಮಾಡಲಾಗುವುದು ಎಂದು ಅವರು ನನಗೆ ಭರವಸೆ ನೀಡಿದ್ದಾರೆ” ಎಂದು ಪುಂಡೀರ್ ಪಿಟಿಐಗೆ ತಿಳಿಸಿದರು. ನಾಪತ್ತೆಯಾಗಿರುವ ಯೋಧರ ವಿವರಗಳನ್ನು ಕೇಂದ್ರ ಸಚಿವರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 pm, Sat, 11 June 22