AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ; ಇಕೋಲ್ಯಾಬ್ ಜೊತೆ ಸರ್ಕಾರ ಒಪ್ಪಂದ

ಕೇಂದ್ರ ಎಲೆಕ್ಟ್ರಾನಿಕ್ಸ್, ಐಟಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುವ ಸೆಮಿಕಂಡಕ್ಟರ್‌ಗಳಿಗೆ ಬೇಡಿಕೆ ಬರಲಿದೆ ಎಂದರು. ಸೆಮಿಕಂಡಕ್ಟರ್ ತಯಾರಿಕಾ ವಲಯದಲ್ಲಿ ಶುದ್ಧ ನೀರಿನ ಅವಶ್ಯಕತೆ ಇದೆ ಎಂದು ಹೇಳಿದರು.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ; ಇಕೋಲ್ಯಾಬ್ ಜೊತೆ ಸರ್ಕಾರ ಒಪ್ಪಂದ
ಅಶ್ವಿನಿ ವೈಷ್ಣವ್
ಸುಷ್ಮಾ ಚಕ್ರೆ
|

Updated on: Aug 24, 2024 | 3:51 PM

Share

ನವದೆಹಲಿ: ಸೆಮಿಕಂಡಕ್ಟರ್ ತಯಾರಿಕೆಗೆ ಅತಿ ಶುದ್ಧ ನೀರು ಬೇಕಾಗುತ್ತದೆ. ಇಕೋಲ್ಯಾಬ್ ತಂಡವು ಎಲ್ಲಾ ಪ್ರಮುಖ ಸೆಮಿಕಂಡಕ್ಟರ್ ತಯಾರಕರೊಂದಿಗೆ ಕೆಲಸ ಮಾಡುತ್ತದೆ. ನಮ್ಮ ಸೆಮಿಕಂಡಕ್ಟರ್ ಉದ್ಯಮದ ಅಗತ್ಯಗಳನ್ನು ಪೂರೈಸುವ ಕುರಿತು ನಾವು ಇಂದು ಮಾತುಕತೆ ನಡೆಸಿದ್ದೇವೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಕೇಂದ್ರ ಎಲೆಕ್ಟ್ರಾನಿಕ್ಸ್, ಐಟಿ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸುವ ಸೆಮಿಕಂಡಕ್ಟರ್‌ಗಳಿಗೆ ಬೇಡಿಕೆ ಬರಲಿದೆ ಎಂದರು. ಸೆಮಿಕಂಡಕ್ಟರ್ ತಯಾರಿಕಾ ವಲಯದಲ್ಲಿ ಶುದ್ಧ ನೀರಿನ ಅವಶ್ಯಕತೆ ಇದೆ ಎಂದರು. ಈ ನಿಟ್ಟಿನಲ್ಲಿ ಇಕೋಲ್ಯಾಬ್ ತಂಡವು ಎಲ್ಲಾ ಪ್ರಮುಖ ಸೆಮಿಕಂಡಕ್ಟರ್ ತಯಾರಕರೊಂದಿಗೆ ಕೆಲಸ ಮಾಡುತ್ತದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Bangladesh Floods: ಪ್ರವಾಹಕ್ಕೆ ಭಾರತವೇ ಕಾರಣವೆಂದ ಬಾಂಗ್ಲಾದೇಶ; ತಪ್ಪು ಮಾಹಿತಿ ಹರಡಬೇಡಿ ಎಂದು ಮೋದಿ ಸರ್ಕಾರ ಎಚ್ಚರಿಕೆ

ಈ ನಿಟ್ಟಿನಲ್ಲಿ, ಕೇಂದ್ರ ಸಚಿವರು ಮಿನ್ನೇಸೋಟದ ಸೇಂಟ್ ಪಾಲ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೇರಿಕನ್ ಕಾರ್ಪೊರೇಶನ್ ಇಕೋಲಾಬ್ ಇಂಕ್ ಜೊತೆಗೆ ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಿದರು. Ecolab ವ್ಯಾಪಕ ಶ್ರೇಣಿಯ ಅಪ್ಲಿಕೇಶನ್‌ಗಳಲ್ಲಿ ನೀರಿನ ಶುದ್ಧೀಕರಣ, ಶುಚಿಗೊಳಿಸುವಿಕೆ ಮತ್ತು ನೈರ್ಮಲ್ಯದಲ್ಲಿ ಪರಿಣತಿ ಹೊಂದಿರುವ ಸೇವೆಗಳನ್ನು ಒದಗಿಸುತ್ತದೆ. ಶುದ್ಧ ನೀರನ್ನು ಒದಗಿಸಲು ತಂತ್ರಜ್ಞಾನ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಸೆಮಿಕಂಡಕ್ಟರ್ ವಲಯವನ್ನು ವೇಗಗೊಳಿಸುವ ಭಾಗವಾಗಿ ಇಕೋಲ್ಯಾಬ್ ಮುಂದುವರೆಯುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಡಿಸೆಂಬರ್ 2021ರಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ಪ್ರಸ್ತಾಪಿಸಿದೆ. ಅದರ ಮೊದಲ ಹಂತದ ಭಾಗವಾಗಿ ಹೊರಗುತ್ತಿಗೆ ಅಸೆಂಬ್ಲಿ ಮತ್ತು ಪರೀಕ್ಷೆ (OSAT), ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (APMP) ಕಂಪನಿಗಳಿಗೆ ಪ್ರೋತ್ಸಾಹವನ್ನು ನೀಡಲಾಯಿತು. ಈ ಕಂಪನಿಗಳು ಕೆಲವೇ ತಿಂಗಳಲ್ಲಿ ಸೆಮಿಕಂಡಕ್ಟರ್‌ಗಳನ್ನು ಉತ್ಪಾದಿಸಲು ಸಿದ್ಧವಾಗಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Modi in Ukraine: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥವಾಗಿರಲಿಲ್ಲ, ಸದಾ ಶಾಂತಿಯ ಪರ; ಮೋದಿ

ಭಾರತವು ತನ್ನದೇ ಆದ AI ಚಿಪ್‌ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಸುಮಾರು 10,372 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆಯೊಂದಿಗೆ ಸಮಗ್ರ ರಾಷ್ಟ್ರೀಯ ಮಟ್ಟದ ಭಾರತೀಯ AI ಮಿಷನ್ ಅನ್ನು ಅನುಮೋದಿಸಲಾಗಿದೆ. ಸಮಗ್ರ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ