ಸಿಬ್ಬಂದಿ ಸೆ.​ 30ರೊಳಗೆ ಆಸ್ತಿ ಘೋಷಿಸದಿದ್ದರೆ ಸಂಬಳವಿಲ್ಲ, ಯುಪಿ ಸರ್ಕಾರ ಆದೇಶ

ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 30ರೊಳಗೆ ತಮ್ಮ ಚರ ಹಾಗೂ ಸ್ಥಿರ ಆಸ್ತಿಗಳನ್ನು ಬಹಿರಂಗಪಡಿಸದಿದ್ದರೆ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಚೇರಿImage Credit source: The Hindu
Follow us
|

Updated on: Sep 24, 2024 | 11:31 AM

ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರವು ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 30ರೊಳಗೆ ತಮ್ಮ ಚರ ಹಾಗೂ ಸ್ಥಿರ ಆಸ್ತಿಗಳನ್ನು ಬಹಿರಂಗಪಡಿಸದಿದ್ದರೆ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಹೊರಡಿಸಿದ ಆದೇಶದಲ್ಲಿ, ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಇಲಾಖೆಗಳ ಮುಖ್ಯಸ್ಥರು ತಮ್ಮ ಆಸ್ತಿ ವಿವರಗಳನ್ನು ಮಾನವ್ ಸಂಪದ ಪೋರ್ಟಲ್​ನಲ್ಲಿ ಸೆಪ್ಟೆಂಬರ್ 30 ರೊಳಗೆ ಘೋಷಿಸಬೇಕು.

ಆದೇಶವನ್ನು ಪಾಲಿಸುತ್ತಿರುವ ನೌಕರರನ್ನು ಸಕಾಲದಲ್ಲಿ ಪರಿಶೀಲಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರವು ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ (ಡಿಡಿಒ) ಅವರಿಗೆ ವಹಿಸಿದೆ.

ಮತ್ತಷ್ಟು ಓದಿ: 2.44 ಲಕ್ಷ ಸರ್ಕಾರಿ ಉದ್ಯೋಗಿಗಳ ವೇತನ ತಡೆ ಹಿಡಿದ ಉತ್ತರ ಪ್ರದೇಶ ಸರ್ಕಾರ, ಕಾರಣವೇನು?

ಪೋರ್ಟಲ್‌ನಲ್ಲಿ ತಮ್ಮ ಆಸ್ತಿ ವಿವರಗಳನ್ನು ಒದಗಿಸುವ ಉದ್ಯೋಗಿಗಳಿಗೆ ಮಾತ್ರ ಸೆಪ್ಟೆಂಬರ್ ಸಂಬಳವನ್ನು ನೀಡಲಾಗುತ್ತದೆ. ಮೂಲಗಳ ಪ್ರಕಾರ ಶೇ.90ರಷ್ಟು ರಾಜ್ಯ ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರ ನೀಡಿದ್ದಾರೆ. ಅಂದರೆ ಒಟ್ಟು 8.44 ಲಕ್ಷ ಉದ್ಯೋಗಿಗಳ ಪೈಕಿ 7.19 ಲಕ್ಷ ಮಂದಿ ತಮ್ಮ ಆಸ್ತಿಯ ಮೂಲವನ್ನು ಪೋರ್ಟಲ್‌ನಲ್ಲಿ ನಮೂದಿಸಿದ್ದಾರೆ.

ಈ ಮೊದಲು, ನೌಕರರು ತಮ್ಮ ಆಸ್ತಿ ವಿವರಗಳನ್ನು ಆಗಸ್ಟ್ 31 ರೊಳಗೆ ಬಹಿರಂಗಪಡಿಸಬೇಕಾಗಿತ್ತು, ಆದರೆ ಕೆಲವು ನೌಕರರು ಹೆಚ್ಚಿನ ಸಮಯ ಕೋರಿದ ನಂತರ ರಾಜ್ಯ ಸರ್ಕಾರ ಸೆಪ್ಟೆಂಬರ್ 30 ರವರೆಗೆ ಗಡುವನ್ನು ವಿಸ್ತರಿಸಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು

ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ

Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು

‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್

Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ

Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ

‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?

ಆಂಧ್ರಪ್ರದೇಶದ ಗದ್ದೆಯಲ್ಲೆದ್ದ ಸುಂಟರಗಾಳಿಯ ವಿಡಿಯೋ ವೈರಲ್

ಮರೆಯಲಾಗದ ಕ್ಷಣ; ಮೋದಿ ನ್ಯೂಯಾರ್ಕ್​ ಭೇಟಿಯ ಹೈಲೈಟ್ಸ್ ಇಲ್ಲಿದೆ

‘ಬಿಗ್ ಬಾಸ್ ಕನ್ನಡ 11’ ಶೋ ಆರಂಭಕ್ಕೂ ಮೊದಲೇ ತಿಳಿಯುತ್ತೆ ಸ್ಪರ್ಧಿಗಳ ಹೆಸರು