ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲು

Lakhimpur Kheri violence: ಘಟನೆ ನಡೆದಾಗ ನಾನು ಲಖಿಂಪುರ ಖೇರಿಯಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಬನ್ಬೀರ್​ಪುರದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. ಬೆಳಗ್ಗೆ 9ಗಂಟೆಯಿಂದಲೂ ನಾನು ಅಲ್ಲಿಯೇ ಇದ್ದೆ ಎಂದು ಆಶೀಶ್​ ಮಿಶ್ರಾ ಹೇಳಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್​ ಮಿಶ್ರಾ ಪುತ್ರನ ವಿರುದ್ಧ ಕೊಲೆ ಪ್ರಕರಣ ದಾಖಲು
ಆಶೀಶ್​ ಮಿಶ್ರಾ
Follow us
TV9 Web
| Updated By: Lakshmi Hegde

Updated on:Oct 04, 2021 | 10:25 AM

ಲಖನೌ: ನಿನ್ನೆ ಉತ್ತರಪ್ರದೇಶದ ಲಖಿಂಪುರ ಖೇರಿ (Lakhimpur Kheri violence)ಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ ಆರೋಪದ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್​ ಕುಮಾರ್​ ಮಿಶ್ರಾ ಅವರ ಪುತ್ರ ಆಶೀಶ್​ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆಶೀಶ್​ ಮಿಶ್ರಾ ಸೇರಿ ಹಲವರ ಹೆಸರು ಎಫ್ಐಆರ್​​ನಲ್ಲಿದೆ. ನಿನ್ನೆ ಹಲವು ರೈತರು ಉತ್ತರಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಕೇಂದ್ರ ಸಚಿವ ಅಜಯ್​ ಮಿಶ್ರಾ ಭೇಟಿ ವಿರೋಧಿಸಿ  ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರ ಮೇಲೆ ಎರಡು ಕಾರುಗಳು ಹರಿದಿದ್ದವು. ಅದು ಅಜಯ್​ ಮಿಶ್ರಾ ಬೆಂಗಾವಲು ಪಡೆಯ ವಾಹನ ಮತ್ತು ಆಶೀಶ್​ ಮಿಶ್ರಾರ ಕಾರು ಎಂದೂ ವರದಿಯಾಗಿತ್ತು. ಕಾರು ಹರಿದು ಇಬ್ಬರು ರೈತರು ಮೃತಪಟ್ಟ ಬೆನ್ನಲ್ಲೇ ಸ್ಥಳದಲ್ಲಿ ಹಿಂಸಾಚಾರ ಭುಗಿಲೆದ್ದು, ಒಬ್ಬ ಪತ್ರಕರ್ತ, ನಾಲ್ವರು ರೈತರು ಸೇರಿ ಎಂಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಈಗ ಕೂಡ ಲಖಿಂಪುರ ಖೇರಿಯಲ್ಲಿ ಉದ್ವಿಗ ಪರಿಸ್ಥಿತಿ ಇದ್ದು, ಪೊಲೀಸ್​ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರೈತ ಒಕ್ಕೂಟದ ಮುಖಂಡ ಡಾ. ದರ್ಶನ್​ ಪಾಲ್​, ರೈತರ ಮೇಲೆ ಹರಿದ ಕಾರಿನಲ್ಲಿ ಅಜಯ್​ ಮಿಶ್ರಾ ಪುತ್ರ ಆಶೀಶ್​ ಮಿಶ್ರಾ ಇದ್ದಿದ್ದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.  ನಾವು ಪ್ರತಿಭಟನೆ ನಡೆಸುವ ಸ್ಥಳಕ್ಕೆ ಆಗಮಿಸಲು ಮುಂದಾಗಿದ್ದ ಸಚಿವರ ಭೇಟಿ ವಿರೋಧಿಸಿದ್ದೆವು. ಹೆಲಿಪ್ಯಾಡ್​​ಗೆ ಘೇರಾವ್​ ಹಾಕುವ ಪ್ರಯತ್ನ ನಮ್ಮದಾಗಿತ್ತು. ಈ ಪ್ರತಿಭಟನೆ ಮುಗಿಸಿ ರೈತರೆಲ್ಲ ವಾಪಸ್​ ಹೋಗುವ ವೇಳೆ ಒಟ್ಟು ಮೂರು ಕಾರುಗಳು ರೈತರ ಕಡೆಗೆ ಬಂದವು. ಒಬ್ಬ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸಲಿಲ್ಲ ಎಂದು ಹೇಳಿದ್ದಾರೆ.

ಆದರೆ ಅಜಯ್​ ಮಿಶ್ರಾ ಇದರಲ್ಲಿ ತನ್ನ ಮಗನ ತಪ್ಪಿಲ್ಲ ಎಂದು ಹೇಳಿದ್ದಾರೆ. ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದ ಸಂದರ್ಭದಲ್ಲಿ ಅಲ್ಲಿ ನನ್ನ ಪುತ್ರ ಇರಲಿಲ್ಲ. ಕಾರು ಹರಿದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಅದೆಷ್ಟು ಕೆಟ್ಟಪರಿಸ್ಥಿತಿ ಇತ್ತು. ದುಷ್ಕರ್ಮಿಗಳು ಖಡ್ಗ, ಬಡಿಗೆಗಳನ್ನು ಹಿಡಿದು ಅಲ್ಲಿದ್ದವರಿಗೆಲ್ಲ ಥಳಿಸುತ್ತಿದ್ದರು. ಹಾಗೊಮ್ಮ ಆ ಸಂದರ್ಭದಲ್ಲಿ ನನ್ನ ಪುತ್ರ ಅಲ್ಲಿದ್ದಿದ್ದರೆ, ಅವನೂ ಕೂಡ ಜೀವಂತ ಬರುತ್ತಿರಲಿಲ್ಲ ಎಂದಿದ್ದಾರೆ.

ಆಶೀಶ್​ ಮಿಶ್ರಾ ಹೇಳಿದ್ದೇನು? ಘಟನೆ ನಡೆದಾಗ ನಾನು ಲಖಿಂಪುರ ಖೇರಿಯಲ್ಲಿ ಇರಲಿಲ್ಲ. ಆ ಸಂದರ್ಭದಲ್ಲಿ ಬನ್ಬೀರ್​ಪುರದಲ್ಲಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದೆ. ಬೆಳಗ್ಗೆ 9ಗಂಟೆಯಿಂದಲೂ ನಾನು ಅಲ್ಲಿಯೇ ಇದ್ದೆ. ನನ್ನ ವಿರುದ್ಧ ಮಾಡಲಾದ ಆರೋಪಗಳು ಆಧಾರ ರಹಿತವಾಗಿವೆ.  ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಅಷ್ಟಕ್ಕೂ ಅಲ್ಲಿದ್ದ ಕೆಲವರೇ ನಮ್ಮ ಕಾರ್ಯಕರ್ತರಿಗೆ ಥಳಿಸಿದ್ದಾರೆ. ಹತ್ಯೆ ಮಾಡಿದ್ದಾರೆ ಎಂದು ಆಶೀಶ್​ ಮಿಶ್ರಾ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ.

ಇದನ್ನೂ ಓದಿ: ಆರ್ಯನ್​ ಖಾನ್​ಗೆ ಜಾಮೀನು ಅಥವಾ ಜೈಲು? ಮತ್ತೆ ಕೋರ್ಟ್​ ಮುಂದೆ ಬರಲಿರುವ ಶಾರುಖ್​ ಪುತ್ರ

Cyclone Shaheen: ಓಮನ್, ಇರಾನ್​ನಲ್ಲಿ ಶಾಹೀನ್ ಚಂಡಮಾರುತದಿಂದ 9ಕ್ಕೂ ಹೆಚ್ಚು ಜನ ಸಾವು

Published On - 10:16 am, Mon, 4 October 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ