AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಮ್ಮಗನೊಂದಿಗೆ ಓಡಿ ಹೋಗಿ ಮದುವೆಯಾದ ಮಹಿಳೆ, ಗಂಡ, ಮಕ್ಕಳನ್ನು ಕೊಲ್ಲಲು ಸಂಚು

ಮೊಮ್ಮಗನೊಂದಿಗೆ ಮಹಿಳೆಯೊಬ್ಬಳು ಓಡಿ ಹೋಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಮ50 ವರ್ಷದ ಮಹಿಳೆ 30 ವರ್ಷದ ಮೊಮ್ಮಗನೊಂದಿಗೆ ಮದವೆಯಾಗಿದ್ದಾಳೆ. ಇಂದ್ರಾವತಿ ಎಂಬ ಮಹಿಳೆಗೆ ನಾಲ್ಕು ಮಕ್ಕಳಿದ್ದಾರೆ - ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಈ ಘಟನೆ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. ಮ50 ವರ್ಷದ ಮಹಿಳೆ 30 ವರ್ಷದ ಮೊಮ್ಮಗನೊಂದಿಗೆ ಮದವೆಯಾಗಿದ್ದಾಳೆ. ಇಂದ್ರಾವತಿ ಎಂಬ ಮಹಿಳೆಗೆ ನಾಲ್ಕು ಮಕ್ಕಳಿದ್ದಾರೆ - ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು.

ಮೊಮ್ಮಗನೊಂದಿಗೆ ಓಡಿ ಹೋಗಿ ಮದುವೆಯಾದ ಮಹಿಳೆ, ಗಂಡ, ಮಕ್ಕಳನ್ನು ಕೊಲ್ಲಲು ಸಂಚು
ಮದುವೆ
ನಯನಾ ರಾಜೀವ್
|

Updated on:Apr 29, 2025 | 12:33 PM

Share

ಉತ್ತರ ಪ್ರದೇಶ, ಏಪ್ರಿಲ್ 29: ಮಹಿಳೆಯೊಬ್ಬಳು ತನ್ನ ಮೊಮ್ಮಗನೊಂದಿಗೆ ಓಡಿ ಹೋಗಿ ಮದುವೆ(Marriage)ಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಎಲ್ಲರನ್ನೂ ಆತಂಕಕ್ಕೀಡು ಮಾಡಿದೆ. 50 ವರ್ಷದ ಮಹಿಳೆ 30 ವರ್ಷದ ಮೊಮ್ಮಗನನ್ನು ಮದವೆಯಾಗಿದ್ದಾಳೆ. ಇಂದ್ರಾವತಿ ಎಂಬ ಮಹಿಳೆಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ತಮ್ಮ ಮೊಮ್ಮಗ ಆಜಾದ್ ಅವರನ್ನು ಮದುವೆಯಾಗಲು ತಮ್ಮ ಇಡೀ ಕುಟುಂಬವನ್ನು ಬಿಟ್ಟು ಓಡಿ ಹೋಗಿದ್ದಾಳೆ. ಇಬ್ಬರೂ ಗೋವಿಂದ್ ಸಾಹಿಬ್ ದೇವಸ್ಥಾನಕ್ಕೆ ಹೋಗಿ, ಮಾಲೆ ಬದಲಿಸಿಕೊಂಡು, ಸಿಂಧೂರ ಹಚ್ಚುವ ಮೂಲಕ ಮದುವೆಯಾಗಿದ್ದಾರೆ. ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಇಬ್ಬರೂ ಅಂಬೇಡ್ಕರ್​ ನಗರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇಂದ್ರಾವತಿ ಮತ್ತು ಅವರ ಮೊಮ್ಮಗ ಆಜಾದ್ ಸ್ವಲ್ಪ ಸಮಯದವರೆಗೆ ಸಂಬಂಧ ಹೊಂದಿದ್ದರು.

ಆಗಾಗ ಭೇಟಿಯಾಗುತ್ತಿದ್ದರು. ಆದರೆ ಅವರ ನಡುವಿನ ಕೌಟುಂಬಿಕ ಬಾಂಧವ್ಯದಿಂದಾಗಿ ಯಾರಿಗೂ ಅನುಮಾನ ಬಂದಿರಲಿಲ್ಲ. ಅವರು ಓಡಿಹೋಗುವ ನಾಲ್ಕು ದಿನಗಳ ಮೊದಲು, ಇಂದ್ರಾವತಿಯ ಪತಿ ಚಂದ್ರಶೇಖರ್ ಅವರು ಪತ್ನಿ  ರಹಸ್ಯವಾಗಿ ಮಾತನಾಡುತ್ತಿರುವುದನ್ನು ಗಮನಿಸಿ ಅನುಮಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ
Image
ಎರಡೇ ವಾರಕ್ಕೆ ಮುರಿದು ಬಿತ್ತು ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೇಮ ವಿವಾಹ!
Image
ವರ್ಷದ ಈ ತಿಂಗಳಿನಲ್ಲಿ ಮದುವೆ ಮಾಡಿಕೊಳ್ಳಲ್ಲ… ಏಕೆ ಗೊತ್ತಾ?
Image
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
Image
ಅನ್ಯಕೋಮಿನವನೊಂದಿಗೆ ಹಿಂದೂ ಯುವತಿ ಮದುವೆ: ವಿವಾಹ ಮಾಡಿಸಿದ್ದವನಿಗೆ ಬೆದರಿಕೆ

ಮತ್ತಷ್ಟು ಓದಿ: ಭಾವಿ ಅಳಿಯನ ಅತ್ತೆ ಪರಾರಿ ಪ್ರಕರಣ, ಎಲ್ಲವೂ ಸರಿ ಇದ್ದಿದ್ರೆ ಇಂದು ಶಿವಾನಿ ಮದುವೆ ನಡೀತಿತ್ತು

ಅವರ ಸಂಬಂಧದ ಬಗ್ಗೆ ತಿಳಿದಾಗ, ಅವರು  ಬಲವಾಗಿ ವಿರೋಧಿಸಿದರು ಮತ್ತು  ಬೇರೆಯಾಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಮಹಿಳೆ ಮತ್ತು ಆಕೆಯ ಪ್ರೇಮಿ ಕೇಳಲು ನಿರಾಕರಿಸಿ ತಮ್ಮದೇ ಅಂತಿಮ ನಿರ್ಧಾರ ಎಂದು ಹೇಳಿದ್ದರು.

ಪೊಲೀಸರಿಗೂ ಕೂಡ ಚಂದ್ರಶೇಖರ್ ಮಾಹಿತಿ ನೀಡಿದ್ದರು. ಆದರೆ, ಇಂದ್ರಾವತಿ ಮತ್ತು ಆಜಾದ್ ಇಬ್ಬರೂ ವಯಸ್ಕರಾಗಿದ್ದರಿಂದ ಮತ್ತು ಅವರ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದರಿಂದ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು.

ಇಂದ್ರಾವತಿ ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ಆಜಾದ್ ಜತೆ ಸೇರಿ ವಿಷ ಹಾಕಲು ಸಂಚು ರೂಪಿಸಿದ್ದಳು. ಇಂದ್ರಾವತಿ ತನ್ನ ಎರಡನೇ ಪತ್ನಿ ಮತ್ತು ಅವರು ಆಗಾಗ್ಗೆ ಕೆಲಸಕ್ಕೆ ಸಂಬಂಧಿಸಿದ ಮನೆಯಿಂದ ದೂರ ಹೋಗುತ್ತಿದ್ದರಿಂದ ಇಂದ್ರಾವತಿ ಮತ್ತು ಆಜಾದ್ ನಡುವಿನ ಸಂಬಂಧ ಬೆಳೆಯಲು ಅವಕಾಶ ಮಾಡಿಕೊಟ್ಟಿತು ಎಂದು ಚಂದ್ರಶೇಖರ್ ಹೇಳಿದ್ದಾರೆ. ತನ್ನ ಹೆಂಡತಿ ಸತ್ತಿದ್ದಾಳೆಂದು ಘೋಷಿಸಿ ಪಿಂಡ ಬಿಟ್ಟಿದ್ದಾರೆ.

ಇತ್ತೀಚೆಗಷ್ಟೇ ಮಗಳು ಮದುವೆಯಾಗಬೇಕಿದ್ದ ಭಾವಿ ಅಳಿಯನ ಜತೆ ಅತ್ತೆ ಪರಾರಿಯಾಗಿದ್ದಳು. ಅತ್ತೆಯೇ ಇಬ್ಬರ ಮದುವೆ ನಿಶ್ಚಯಿಸಿದ್ದಳು. ಆದರೆ ಮದುವೆ 10 ದಿನ ಇದ್ದಾಗ ಇಬ್ಬರೂ ಒಡವೆ, ಹಣದ ಜತೆ ಪರಾರಿಯಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:29 pm, Tue, 29 April 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ