ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್ನಿಂದ ಬಯಲಾಯ್ತು ಮಹಿಳೆಯ ಸಾವಿನ ರಹಸ್ಯ
ಉತ್ತರ ಪ್ರದೇಶದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಸಾಯುವ ಮುನ್ನ ತನ್ನ ಮಕ್ಕಳಿಗೆ ಬರೆದ ಪತ್ರದಲ್ಲಿ "ನಿಮ್ಮ ಅಮ್ಮ ನಿಮ್ಮನ್ನು ಬಿಟ್ಟು ಹೋಗಲೇಬೇಕಾಗಿದೆ. ಕ್ಷಮಿಸಿ ಮಕ್ಕಳೇ" ಎಂದು ಬರೆದಿದ್ದರು. ಆದರೆ ಆಕೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಆಕೆಯ ಫೋನ್ ರಿಂಗಣಿಸಿತು. ಇದು ಉತ್ತರ ಪ್ರದೇಶದ ಬಿಜ್ನೋರ್‌ನಿಂದ ಆ ಮಹಿಳೆಯ ಡಿಜಿಟಲ್ ಬಂಧನದ ರಹಸ್ಯವನ್ನು ಬಹಿರಂಗಪಡಿಸಿದೆ. ಏನಿದು ಪ್ರಕರಣ? ಇಲ್ಲಿದೆ ಪೂರ್ತಿ ಮಾಹಿತಿ.

ನೊಯ್ಡಾ, ಮೇ 1: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 28 ವರ್ಷದ ಮಹಿಳೆಯನ್ನು ಕಿರುಕುಳ, ಬ್ಲ್ಯಾಕ್‌ಮೇಲ್ ಮತ್ತು ಡಿಜಿಟಲ್ ಬಂಧನದ (digital arrest) ಬೆದರಿಕೆ ಹಾಕಿದ್ದರು. ಆಕೆ ಇದಾದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಅಂತ್ಯಕ್ರಿಯೆಯ ಸಿದ್ಧತೆಗಳ ಸಮಯದಲ್ಲಿ ಅವರ ಫೋನ್‌ಗೆ ಪದೇ ಪದೇ ವಾಟ್ಸಾಪ್ ಕರೆಗಳು ಬಂದಾಗ ಈ ವಂಚನೆ ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.
ಫರೀದ್‌ಪುರ ಭೋಗಿ ಗ್ರಾಮದ ನಿವಾಸಿ ಮೋನಿಕಾ ದೇವಿ ಸೋಮವಾರ ರಾತ್ರಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದು, 9 ಮತ್ತು 11 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಅವರ ಹತ್ತಿರದಲ್ಲಿಯೇ ಮಲಗಿದ್ದರು. ಮರುದಿನ ಅವರು ಎದ್ದಾಗ ಅಮ್ಮ ನೇಣು ಹಾಕಿಕೊಂಡಿರುವುದನ್ನು ನೋಡಿ ಮಕ್ಕಳು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದರು.
ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಸೈಬರ್ ಅಪರಾಧದ ಈ ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲಿ ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗಲೂ ಆಕೆಯ ಫೋನ್ ರಿಂಗಣಿಸುತ್ತಲೇ ಇತ್ತು. ಮೋನಿಕಾ ಪ್ರಕರಣವು ಬೆದರಿಕೆ, ಕಿರುಕುಳ, ಆನ್‌ಲೈನ್ ವಂಚನೆ ಮತ್ತು ತಿಂಗಳುಗಳ ಡಿಜಿಟಲ್ ಬಂಧನದ ಗೊಂದಲದ ಹಾದಿಯನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: 2-3 ಗಂಟೆಗಳಲ್ಲಿ ಸಿಮ್ ಕಾರ್ಡ್ ಬ್ಲಾಕ್, ಡಿಜಿಟಲ್ ಅರೆಸ್ಟ್ ತಡೆಯಲು ಸಂಪೂರ್ಣ ಸಿದ್ಧತೆ, ವಾಟ್ಸ್ಆ್ಯಪ್ನಿಂದಲೂ ಕ್ರಮ
ಏಪ್ರಿಲ್ 27 ಮತ್ತು 28ರ ಮಧ್ಯರಾತ್ರಿ ಮೋನಿಕಾ ಆತ್ಮಹತ್ಯೆ ಮಾಡಿಕೊಂಡರು. 8 ಮತ್ತು 11 ವರ್ಷ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳು ಪಕ್ಕದಲ್ಲಿ ಮಲಗಿದ್ದಾಗ ಅವರು ತಮ್ಮ ಮನೆಯ ಕೋಣೆಯಲ್ಲಿ ದುಪಟ್ಟಾ ಬಳಸಿ ನೇಣು ಬಿಗಿದುಕೊಂಡಿದ್ದರು. ಮರುದಿನ ಬೆಳಿಗ್ಗೆ, ಅವರ ಮಕ್ಕಳು ಎಚ್ಚರವಾದಾಗ ಅವರ ತಾಯಿ ನೇಣು ಬಿಗಿದುಕೊಂಡಿರುವುದನ್ನು ಕಂಡರು. ಆದರೆ, ಬಿಜ್ನೋರ್‌ನ ಫರೀದ್‌ಪುರ ಭೋಗಿ ಗ್ರಾಮದಲ್ಲಿ 28 ವರ್ಷದ ಮಹಿಳೆಯ ಆತ್ಮಹತ್ಯೆಯನ್ನು ಪೊಲೀಸರಿಗೆ ತಿಳಿಸಿರಲಿಲ್ಲ.
ಆಕೆಯ ಅಂತ್ಯಕ್ರಿಯೆಯ ಸಮಯದಲ್ಲಿ ಮೋನಿಕಾ ಅವರ ಫೋನ್ ರಿಂಗ್ ಆಗಿತ್ತು. ಇದಾದ ನಂತರ ಅವರ ಕುಟುಂಬದ ಸದಸ್ಯರಿಗೆ ಮೋನಿಕಾ ಅವರನ್ನು ಬಲವಂತವಾಗಿ ಸಾಯಿಸಲಾಗಿದೆ ಮತ್ತು ಮಹಿಳೆಗೆ ಕರೆ ಮಾಡುತ್ತಲೇ ಇದ್ದ ವ್ಯಕ್ತಿಯೊಬ್ಬರು ಅವರನ್ನು ಡಿಜಿಟಲ್ ರೂಪದಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!
ಮೋನಿಕಾ ಆತ್ಮಹತ್ಯೆಯ ನಂತರ, ಅವರ ಕುಟುಂಬವು ಏನೋ ಅಸಾಮಾನ್ಯವಾದುದನ್ನು ಅನುಮಾನಿಸಿತ್ತು. ಆದರೂ ಅದನ್ನು ಎಲ್ಲೂ ಹೇಳಲಾಗದೆ ಕುಟುಂಬವು ಮೋನಿಕಾ ಅವರ ಅಂತ್ಯಕ್ರಿಯೆಯೊಂದಿಗೆ ಮುಂದಾಯಿತು. ಪೊಲೀಸರಿಗೆ ಸಹ ಮಾಹಿತಿ ನೀಡಿರಲಿಲ್ಲ. ಆದರೆ, ಅಂತ್ಯಕ್ರಿಯೆಯ ಸಮಯದಲ್ಲಿ ಮೋನಿಕಾ ಅವರ ಮೊಬೈಲ್ ಫೋನ್ ಪದೇ ಪದೇ ರಿಂಗ್ ಆದ ನಂತರ ಹೊಸ ನಿಗೂಢ ವಿವರಗಳು ಹೊರಬಿದ್ದವು.
ಮೋನಿಕಾ ಸಾವಿನ ಬಳಿಕವೂ ವಾಟ್ಸಾಪ್ನಲ್ಲಿ ಫೋನ್ ಬಂದ ನಂತರ ಮೋನಿಕಾ ಅವರ ಸೋದರಳಿಯ ಸನ್ಯೋಗ್ ಒಂದು ಕಾಲ್ ಎತ್ತಿದ್ದರು. ಆಗ ಪೊಲೀಸ್ ಯೂನಿಫಾರಂ ಧರಿಸಿದ ಒಬ್ಬ ವ್ಯಕ್ತಿ ವಿಡಿಯೋ ಕಾಲ್ ಮಾಡಿದ್ದ. ಆತ ತಾನು ಕ್ರೈಮ್ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಂಡು, ಮೋನಿಕಾ ಅವರೊಂದಿಗೆ ಮಾತನಾಡಬೇಕು ಎಂದಿದ್ದ. ಆಕೆ ಇಲ್ಲ ಎಂದು ಹೇಳಿದಾಗ ಬೆದರಿಕೆ ಹಾಕಿದ್ದ. ಮೋನಿಕಾ ಸಾವನ್ನಪ್ಪಿದ್ದಾಳೆ ಎಂದು ಆ ವ್ಯಕ್ತಿಗೆ ತಿಳಿಸಿದ ನಂತರ ನಂತರ, ಆ ವ್ಯಕ್ತಿ ಮೋನಿಕಾ ಅವರ ಪತಿಗೆ ಬೆದರಿಕೆ ಹಾಕಿದ್ದ. ಇದು ಅನುಮಾನ ಹುಟ್ಟುಹಾಕಿತ್ತು. ಬಳಿಕ ಪೊಲೀಸರು ತನಿಖೆ ನಡೆಸತೊಡಗಿದರು.
ಆಗ ಮೋನಿಕಾ ತಮ್ಮ ಡೈರಿಯಲ್ಲಿ ಬರೆದ ಸೂಸೈಡ್ ನೋಟ್ನಲ್ಲಿ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮತ್ತು ಬೆದರಿಕೆ ಹಾಕುತ್ತಿದ್ದ ಅಪರಿಚಿತರಿಂದ ಆಗುತ್ತಿದ್ದ ನಿರಂತರ ಕಿರುಕುಳದ ಬಗ್ಗೆ ಮೋನಿಕಾ ಬರೆದಿದ್ದರು. ಆ ಕುಟುಂಬವು ಮೋನಿಕಾಳ ಫೋನ್ ಅನ್ನು ಸ್ಕ್ಯಾನ್ ಮಾಡಿದಾಗ ಹಲವಾರು ವಾಟ್ಸಾಪ್ ಕರೆಗಳು, ಮೆಸೇಜ್ಗಳು ಮತ್ತು ಆಡಿಯೊ ಕ್ಲಿಪ್‌ಗಳು ಹೊರಬಂದವು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




