AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajmer Sharif Dargah: ದರ್ಗಾದಲ್ಲಿ ಡ್ಯಾನ್ಸ್​ ಮಾಡಿ ಆಕ್ರೋಶಕ್ಕೆ ಕಾರಣವಾದ ಮಹಿಳೆ

ರಾಜಸ್ಥಾನ ಅಜ್ಮೇರ್​ನ ಷರೀಫ್ ದರ್ಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ನೃತ್ಯ ಮಾಡುವುದನ್ನು ನೀವು ನೋಡಬಹುದು.

Ajmer Sharif Dargah: ದರ್ಗಾದಲ್ಲಿ ಡ್ಯಾನ್ಸ್​ ಮಾಡಿ ಆಕ್ರೋಶಕ್ಕೆ ಕಾರಣವಾದ ಮಹಿಳೆ
ನೃತ್ಯ
ನಯನಾ ರಾಜೀವ್
|

Updated on:Jun 28, 2023 | 3:12 PM

Share

ದರ್ಗಾದಲ್ಲಿ ಮಹಿಳೆಯೊಬ್ಬಳು ನೃತ್ಯ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.  ರಾಜಸ್ಥಾನ ಅಜ್ಮೇರ್​ನ ಷರೀಫ್ ದರ್ಗಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ನೃತ್ಯ ಮಾಡುವುದನ್ನು ನೀವು ನೋಡಬಹುದು. ಮಹಿಳೆಯ ಕಿವಿಯಲ್ಲಿ ಇಯರ್​ಫೋನ್​ ಇದ್ದು, ಹಾಡು ಕೇಳುತ್ತಾ ಆಕೆ ಓಡಾಡುವುದನ್ನು ಕಾಣಬಹುದು, ಇದ್ದಕ್ಕಿದ್ದಂತೆ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಈ ವಿಡಿಯೋ ವೈರಲ್ ಆದ ಬಳಿಕ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಜ್ಮೇರ್​ನ ಖ್ವಾಜಾ ಮೊಯಿನುದ್ದೀನ್ ಚಿಶ್ತಿಯಾ ದರ್ಗಾದಲ್ಲಿ ಈ ಘಟನೆ ನಡೆದಿದೆ. ದರ್ಗಾ ಆವರಣದಲ್ಲಿರುವ ಝಲ್ರಾ ದಲನ್​ನಲ್ಲಿ ಮಹಿಳೆ ಡ್ಯಾನ್ಸ್ ಮಾಡಿದ್ದಾರೆ.

ಮತ್ತಷ್ಟು ಓದಿ: ಕೇರಳದ ಕೂಡಲಮಾಣಿಕ್ಯಂ ದೇಗುಲದಲ್ಲಿ ನೃತ್ಯ ಪ್ರದರ್ಶನಕ್ಕೆ ನನಗೂ ಅವಕಾಶ ಕೊಡಲಿಲ್ಲ; ಮತ್ತೊಬ್ಬ ಭರತನಾಟ್ಯ ಕಲಾವಿದೆಯಿಂದ ಆರೋಪ

ದರ್ಗಾದಲ್ಲಿ ಭದ್ರತಾ ಸಿಬ್ಬಂದಿಗಳಿದ್ದಾರೆ ಆದರೆ ಯಾರೂ ಕೂಡ ಈ ಮಹಿಳೆಯನ್ನು ನೋಡಿಲ್ಲ, ಧಾಮಿಧಕ ಸ್ಥಳದಲ್ಲಿ ಆ ಮಹಿಳೆಗೆ ಹೇಗಿರಬೇಕೆಂಬುದು ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ದೇಶದ ಅತ್ಯಂತ ಪೂಜ್ಯ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಅಜ್ಮೀರ್ ದೇಗುಲಕ್ಕೆ ಹಲವಾರು ಸಮುದಾಯಗಳ ಸದಸ್ಯರು ಭೇಟಿ ನೀಡುತ್ತಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉಜ್ಜಯಿನಿಯ ಮಹಾಕಾಲ್ ದೇವಸ್ಥಾನದ ಆವರಣದಲ್ಲಿ ಇನ್‌ಸ್ಟಾಗ್ರಾಮರ್‌ಗಳು ಡ್ಯಾನ್ಸ್ ವಿಡಿಯೋಗಳನ್ನು ರೆಕಾರ್ಡ್ ಮಾಡಿ ವಿವಾದಕ್ಕೆ ಕಾರಣರಾಗಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:11 pm, Wed, 28 June 23