ನವದೆಹಲಿ, ಜೂನ್ 26: ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಒಬ್ಬರ ಲಾಗಿನ್ನಲ್ಲಿ ಬೇರೆಯವರಿಗೆ ಟಿಕೆಟ್ ಬುಕ್ (train ticket booking) ಮಾಡಲು ನಿರ್ಬಂಧ ಇದೆ ಎನ್ನುವಂತಹ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬುತ್ತಿದೆ. ಐಆರ್ಸಿಟಿಸಿ ಸಂಸ್ಥೆ (IRCTC) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಹೇಳಿದೆ. ರೈಲ್ವೆ ಮಂಡಳಿ ಮಾರ್ಗಸೂಚಿ (Railway board guidelines) ಪ್ರಕಾರ ಐಆರ್ಸಿಟಿಸಿ ವೆಬ್ಸೈಟ್ನಿಂದ ಟಿಕೆಟ್ಗಳನ್ನು ಬುಕ್ ಮಾಡಬಹುದು ಎಂದು ಅದು ಹೇಳಿದೆ.
ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ರೈಲು ಟಿಕೆಟ್ ಬುಕ್ ಮಾಡಬೇಕೆಂದರೆ ಲಾಗಿನ್ ಆಗಬೇಕು. ಒಬ್ಬರ ಯೂಸರ್ ಐಡಿಯಿಂದ ತಮ್ಮ ಕುಟುಂಬವಲ್ಲದ ಬೇರೆ ಸ್ನೇಹಿತರು ಮತ್ತು ಸಂಬಂಧಿಕರಿಗೆ ಟಿಕೆಟ್ ಬುಕ್ ಮಾಡುವಂತಿಲ್ಲ. ಹಾಗೊಂದು ವೇಳೆ ಟಿಕೆಟ್ ಬುಕ್ ಮಾಡಿದರೆ ಅಪರಾಧವಾಗುತ್ತದೆ. ರೈಲ್ವೆ ಕಾನೂನಿನ ಸೆಕ್ಷನ್ 143 ಪ್ರಕಾರ ಮಾನ್ಯತೆ ಪಡೆದ ವ್ಯಕ್ತಿ ಮಾತ್ರವೇ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಬಹುದು ಎಂದು ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸೊಳ್ಳೆ ಕಾಟ ಬಿಟ್ರೆ… ಬೆಂಗಳೂರನ್ನು ಅಮೆರಿಕದ ಸಿಲಿಕಾನ್ ವ್ಯಾಲಿಗೆ ಹೋಲಿಸಿದ ಯುಎಸ್ ರಿಟರ್ನ್ಡ್ ಉದ್ಯಮಿ
ಸಾಮಾನ್ಯ ಐಆರ್ಸಿಟಿಸಿ ಬಳಕೆದಾರ ತನ್ನ ಐಡಿ ಬಳಸಿ ಬೇರೆಯವರಿಗೆ ರೈಲು ಟಿಕೆಟ್ ಬುಕ್ ಮಾಡಿದರೆ 10,000 ರೂ ದಂಡ ಹಾಗೂ 3 ವರ್ಷದವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಇದು ಸುಳ್ಳು ಎಂದು ಐಆರ್ಸಿಟಿಸಿ ಹೇಳಿದೆ. ಪರ್ಸನಲ್ ಯೂಸರ್ ಐಡಿಯಿಂದ ಬುಕ್ ಮಾಡಲಾದ ಟಿಕೆಟ್ಗಳನ್ನು ವಾಣಿಜ್ಯಾತ್ಮಕ ಮಾರಾಟಕ್ಕೆ ಬಳಸುವಂತಿಲ್ಲ. ಹಾಗೆ ಮಾಡಿದರೆ 1989ರ ರೈಲ್ವೆ ಇಲಾಖೆಯ ಸೆಕ್ಷನ್ 143 ಪ್ರಕಾರ ಅಪರಾಧ ಎನಿಸುತ್ತದೆ. ಇದು ಅಧಿಕೃತವಾಗಿ ಇರುವ ಕಾನೂನು.
ರೈಲು ಟಿಕೆಟ್ ಬುಕ್ ಮಾಡುತ್ತಿರುವ ವ್ಯಕ್ತಿ ತನ್ನ ಉಪನಾಮ ಹೊಂದಿರುವ ಜನರಿಗೆ ಮಾತ್ರವೇ ಟಿಕೆಟ್ ಬುಕ್ ಮಾಡಲು ಅವಕಾಶ ಇರುತ್ತದೆ ಎಂದೂ ಈ ವೈರಲ್ ಪೋಸ್ಟ್ನಲ್ಲಿ ತಿಳಿಸಲಾಗಿದೆ. ಇದೂ ಕೂಡ ಸುಳ್ಳು ಸುದ್ದಿಯೇ ಆಗಿದೆ. ಯಾರು ಬೇಕಾದರೂ ತಮ್ಮ ವೈಯಕ್ತಿಕ ಯೂಸರ್ ಐಡಿ ಬಳಸಿ ತಮ್ಮ ಸ್ನೇಹಿತರು, ಕುಟುಂಬ ಮತ್ತು ಸಂಬಂಧಿಕರಿಗೆ ರೈಲು ಟಿಕೆಟ್ ಕಾಯ್ದಿರಿಸಬಹುದು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: 5ಜಿ ಸ್ಪೆಕ್ಟ್ರಂ ಎಂದರೇನು? 900 ಮೆಗಾಹರ್ಟ್ಜ್ ಇತ್ಯಾದಿ ಬ್ಯಾಂಡ್ವಿಡ್ತ್ಗಳ ಉಪಯೋಗ ಏನು? ಇಲ್ಲಿದೆ ಡೀಟೇಲ್ಸ್
ಆಧಾರ್ ದೃಢೀಕರಣ ಹೊಂದಿರುವ ಬಳಕೆದಾರರು ತಿಂಗಳಿಗೆ 24 ಟಿಕೆಟ್ಗಳನ್ನು ಬುಕ್ ಮಾಡಲು ಅವಕಾಶ ಇದೆ. ಆಧಾರ್ ಅಥೆಂಟಿಕೇಶನ್ ಮಾಡದ ಬಳಕೆದಾರರು ತಿಂಗಳಿಗೆ 12 ಟಿಕೆಟ್ ಬುಕಿಂಗ್ ಮಾಡಬಹುದು ಎಂದು ಐಆರ್ಸಿಟಿಸಿ ಹೇಳಿದೆ.
ಟಿಕೆಟ್ ಅನ್ನು ವಾಣಿಜ್ಯಾತ್ಮಕವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ತಡೆಯಲು ಈ ಕ್ರಮ ತೆಗೆದುಕೊಂಡಿರಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ