ಯುದ್ಧ ಗೆಲ್ಲಬೇಕು, ಭಯೋತ್ಪಾದಕರನ್ನು ತೊಡೆದುಹಾಕಬೇಕು, ಜತೆಗೆ ಜನರ ಹೃದಯ ಗೆಲ್ಲಬೇಕು: ರಾಜನಾಥ್ ಸಿಂಗ್
ನಾಲ್ಕು ಸೈನಿಕರ ಸಾವಿನ ನಂತರ ತನಿಖೆಗಾಗಿ ರಾಜೌರಿಯ ನಾಗರಿಕರನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೇನೆ ತನಿಖೆಯನ್ನು ನಡೆಸುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ಅಮಾಯಕ ನಾಗರಿಕರ ಮೇಲಿನ ಹಿಂಸಾಚಾರವನ್ನು ಸಹಿಸುವುದಿಲ್ಲ. ನೀವು ದೇಶದ ರಕ್ಷಕರು. ಆದರೆ ದೇಶದ ಭದ್ರತೆ ಮಾಡುವುದರ ಜತೆಗೆ ಇಲ್ಲಿನ ಜನರ ಹೃದಯವನ್ನು ಗೆಲ್ಲುವ ಜವಾಬ್ದಾರಿಯೂ ನಿಮ್ಮ ಮೇಲಿದೆ.
ರಾಜೌರಿ, ಡಿ.27: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರು ಇಂದು ಜಮ್ಮುವಿನ ರಾಜೌರಿಗೆ ಭೇಟಿ ನೀಡಿದ್ದು, ಸೇನೆಗಳ ಜತೆಗೆ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಎರಡು ಸೈನ್ಯ ವಾಹನವನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ನಾಲ್ವರು ಭಾರತೀಯ ಸೈನಿಕರು ಹುತ್ಮಾತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಲ್ಲಿ ನಾಗರಿಕರನ್ನು ಸೇನೆ ವಿಚಾರಣೆಗಾಗಿ ಬಂಧಿಸಿದ್ದಾರೆ. ಇನ್ನು ಅಲ್ಲಿನ ಪರಿಸ್ಥಿತಿಯನ್ನು ತಿಳಿಯಲು ಖುದ್ದು ರಕ್ಷಣೆ ಸಚಿವರೇ ಆಗಮಿಸಿದ್ದಾರೆ. ಇದೀಗ ಭಾರತೀಯ ಸೈನಿಕರ ಜತೆಗೆ ಕೆಲವು ಹೊತ್ತು ಮಾತುಕತೆ ನಡೆಸಿದ್ದಾರೆ. ಭಾರತೀಯ ನಾಗರಿಕರನ್ನು ಯಾವುದೇ ಕಾರಣಕ್ಕೂ ನೋಯಿಸಬೇಡಿ ಎಂದು ಹೇಳಿದ್ದಾರೆ.
ನಾಲ್ಕು ಸೈನಿಕರ ಸಾವಿನ ನಂತರ ತನಿಖೆಗಾಗಿ ರಾಜೌರಿಯ ನಾಗರಿಕರನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ನಾಗರಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಸೇನೆ ತನಿಖೆಯನ್ನು ನಡೆಸುತ್ತಿದೆ. ಇನ್ನು ಈ ಬಗ್ಗೆ ಮಾತನಾಡಿದ ರಾಜನಾಥ್ ಸಿಂಗ್ ಅಮಾಯಕ ನಾಗರಿಕರ ಮೇಲಿನ ಹಿಂಸಾಚಾರವನ್ನು ಸಹಿಸುವುದಿಲ್ಲ. ನೀವು ದೇಶದ ರಕ್ಷಕರು. ಆದರೆ ದೇಶದ ಭದ್ರತೆ ಮಾಡುವುದರ ಜತೆಗೆ ಇಲ್ಲಿನ ಜನರ ಹೃದಯವನ್ನು ಗೆಲ್ಲುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಭಾರತೀಯನನ್ನು ನೋಯಿಸುವ ಯಾವುದೇ ತಪ್ಪು ಮಾಡಬೇಡಿ ಎಂದು ಹೇಳಿದ್ದಾರೆ.
ಸೇನೆ ಇಲ್ಲಿನ ಜನರ ಜತೆಗೆ ನಿಕಟವಾದ ಸಂಬಂಧವನ್ನು ಹೊಂದಬೇಕು. ನಾವು ಯುದ್ಧಗಳನ್ನು ಗೆಲ್ಲಬೇಕು, ಭಯೋತ್ಪಾದಕರನ್ನು ತೊಡೆದುಹಾಕಬೇಕು, ಆದರೆ ಜನರ ಹೃದಯವನ್ನು ಗೆಲ್ಲುವುದು ಪ್ರಮುಖವಾಗಿದೆ. ಆದರೆ ನಾವು ಜನರ ಹೃದಯಗಳನ್ನು ಸಹ ಗೆಲ್ಲಬೇಕು. ಮತ್ತು ಇದನ್ನು ಮಾಡಲು ನೀವು ನಿಮ್ಮ ಕೈಲಾದಷ್ಟು ಪ್ರಯತ್ನಿಸುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದರು.
#WATCH | Defence Minister Rajnath Singh departs from Delhi.
Defence Minister will visit Jammu and Rajouri today. pic.twitter.com/WKrGIGi0Zs
— ANI (@ANI) December 27, 2023
ಪ್ರತಿಯೊಬ್ಬ ಸೈನಿಕನು ಭಾರತ ನಾಗರಿಕರಿಗೆ ಕುಟುಂಬ ಸದಸ್ಯನಂತೆ. ಅವರು ನಿಮ್ಮ ಮೇಲೆ (ಸೈನಿಕರ) ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಪ್ರತಿಯೊಬ್ಬ ಭಾರತೀಯನು ಈ ಬಗ್ಗೆ ಯೋಚನೆ ಮಾಡುತ್ತಾಳೆ. ನಿಮ್ಮನ್ನು ವಿರೋಧಿಸುವವರನ್ನು ನಾವು ಎಂದು ಸಹಿಸುವುದಿಲ್ಲ. ಇನ್ನು ಇಂತಹ ದಾಳಿಗಳಲ್ಲಿ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಪ್ರತಿದಿನವು ನಿಮ್ಮ ಸೇವೆಗೆ ಮತ್ತು ರಕ್ಷಣೆಗೆ ನಾವು ಸಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಉಗ್ರರು ಹತ; ರಜೌರಿಗೆ ರಾಜನಾಥ್ ಸಿಂಗ್ ಭೇಟಿ
ನೀವು ಇಲ್ಲಿ ಜಾಗರೂಕರಾಗಿದ್ದೀರಿ ಎಂದು ಭಾವಿಸುತ್ತೇನೆ. ಅದರೂ ಹೆಚ್ಚು ಎಚ್ಚರಿಕೆಯಿಂದ ಇರಬೇಕು ನೀವು. ಇಲ್ಲಿಯವರೆಗೆ ನೀವು ಮಾಡಿ ಎಲ್ಲ ಕೆಲಸಕ್ಕೂ ನಾವು ಬೆಂಬಲವಾಗಿ ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ. ನಿಮ್ಮ ಶೌರ್ಯ ನಮಗೆ ಗೌರವ ತಂದಿದೆ ಎಂದು ಹೇಳಿದರು. ಭಾರತೀಯ ಸೇನೆಯೂ ಮೊದಲಿಗಿಂತ ಹೆಚ್ಚು ಬಲಶಾಲಿಯಾಗಿದೆ ಮತ್ತು ಸುಸಜ್ಜಿತವಾಗಿದೆ ಎಂದು ಹೇಳಿದರು.
ಇದರ ಜತೆಗೆ ರಾಜನಾಥ್ ಸಿಂಗ್ ಸ್ಥಳೀಯರ ಜತೆಗೆ ಮಾತನಾಡಿದರು. ಹಾಗೂ ಸಾವನ್ನಪ್ಪಿರುವ ಮೂವರು ನಾಗರಿಕರ ಕುಟುಂಬವನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೀಗ ಅವರು ಜಮ್ಮುವಿನ ರಾಜಭವನದಲ್ಲಿ ಉನ್ನತ ಮಟ್ಟದ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ರಕ್ಷಣಾ ಸಚಿವ ಭೇಟಿ ಹಿನ್ನಲೆಯಲ್ಲಿ ಜಮ್ಮುವಿನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇದಕ್ಕೂ ಮುನ್ನ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ