’75ನೇ ವರ್ಷಕ್ಕೆ ನಿವೃತ್ತಿ’; ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆಗೂ ಮೋದಿಗೂ ಇದೆಯಾ ಸಂಬಂಧ?
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಾಯಕರು 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿದ್ದಾರೆ. ಈ ಹೇಳಿಕೆಗೂ ಪ್ರಧಾನಿ ನರೇಂದ್ರ ಮೋದಿಯವರ ನಿವೃತ್ತಿಗೂ ಸಂಬಂಧವಿದೆಯೇ ಎಂಬ ಚರ್ಚೆಗಳು ನಡೆಯುತ್ತಿದ್ದಂತೆ ತಮ್ಮ ಹೇಳಿಕೆಗಳು ಮೊರೊಪಂತ್ ಪಿಂಗಲೆ ಅವರನ್ನು ಮಾತ್ರ ಉಲ್ಲೇಖಿಸಿವೆ, ಅದು ಬೇರೆ ಯಾರಿಗೂ ಸಂಬಂಧಿಸಿಲ್ಲ ಎಂದು ಆರ್‌ಎಸ್‌ಎಸ್ ಸ್ಪಷ್ಟಪಡಿಸಿದೆ.

ನಾಗ್ಪುರ, ಜುಲೈ 11: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಇಂದು ನೀಡಿರುವ ಹೇಳಿಕೆಯೊಂದು ರಾಜಕೀಯ ಚರ್ಚೆಗಳನ್ನು ಹುಟ್ಟುಹಾಕಿದೆ. 75ನೇ ವಯಸ್ಸಿನಲ್ಲಿ ನಾಯಕರು ಹಿಂದೆ ಸರಿಯಬೇಕು ಎಂಬ ಮೋಹನ್ ಭಾಗವತ್ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 75 ವರ್ಷ ತುಂಬುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮೋದಿಯನ್ನು ಉದ್ದೇಶಿಸಿರಬಹುದೇ ಎಂಬ ಚರ್ಚೆಗಳು ಶುರುವಾಗಿವೆ.
ಆದರೆ, ಆರ್‌ಎಸ್‌ಎಸ್ ಮುಖ್ಯಸ್ಥರ ಹೇಳಿಕೆಗಳು ಆರ್‌ಎಸ್‌ಎಸ್ ಸಿದ್ಧಾಂತವಾದಿ ಮೊರೊಪಂತ್ ಪಿಂಗಲೆ ಅವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವುದಾಗಿ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆಗಳು ಮೊರೊಪಂತ್ ಪಿಂಗಲೆ ಅವರನ್ನು ಮಾತ್ರ ಉಲ್ಲೇಖಿಸಿವೆ ಮತ್ತು ಬೇರೆ ಯಾರಿಗೂ ಸಂಬಂಧಿಸಿಲ್ಲ ಎಂದು ಆರ್‌ಎಸ್‌ಎಸ್ ಸ್ಪಷ್ಟಪಡಿಸಿದೆ.
VIDEO | Speaking at a book release function in Nagpur, Rashtriya Swayamsevak Sangh (RSS) chief Mohan Bhagwat said:
“When you turn 75, it means you should stop now and make way for others.”#RSS #Nagpur
(Full video available on PTI Videos – https://t.co/n147TvrpG7) pic.twitter.com/yIfzL3Z56t
— Press Trust of India (@PTI_News) July 11, 2025
ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದೇನು?:
ಎರಡು ದಿನಗಳ ಹಿಂದೆ ಇಂಗ್ಲಿಷ್‌ನಲ್ಲಿ ‘ಮೊರೊಪಂತ್ ಪಿಂಗಲೆ: ದಿ ಆರ್ಕಿಟೆಕ್ಟ್ ಆಫ್ ಹಿಂದೂ ರಿಸರ್ಜೆನ್ಸ್’ ಪುಸ್ತಕದ ಅಧಿಕೃತ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮೋಹನ್ ಭಾಗವತ್, 75 ವರ್ಷ ತುಂಬಿದ ಸಂದರ್ಭದಲ್ಲಿ ಹಿರಿಯ ಪ್ರಚಾರಕ ಒಮ್ಮೆ ಹೇಳಿದ್ದ ಹೇಳಿಕೆಯನ್ನು ನೆನಪಿಸಿಕೊಂಡರು. “75 ವರ್ಷಗಳ ಶಾಲನ್ನು ನಿಮ್ಮ ಮೇಲೆ ಹೊದಿಸಿದರೆ ನೀವು ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ್ದೀರಿ ಎಂದು ಅರ್ಥ. ಆಗ ನೀವು ಪಕ್ಕಕ್ಕೆ ಸರಿದು ಇತರರು ಕೆಲಸ ಮಾಡಲು ಬಿಡಬೇಕು ಎಂದು ಪಿಂಗಲೆ ಒಮ್ಮೆ ಹೇಳಿದ್ದರು” ಎಂದು ಮೋಹನ್ ಭಾಗವತ್ ನಾಗ್ಪುರದ ವನಮತಿ ಸಭಾಂಗಣದಲ್ಲಿ ಮಾಡಿದ ಭಾಷಣದ ವೇಳೆ ಹೇಳಿದ್ದರು.
ಇದನ್ನೂ ಓದಿ: ತುರ್ತು ಪರಿಸ್ಥಿತಿ ವೇಳೆ ಜೈಲುಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಚಿತ್ರಹಿಂಸೆ, ಕನಿಷ್ಠ 100 ಸಾವು; ಸುನಿಲ್ ಅಂಬೇಕರ್
“ವೃಂದಾವನ ಭೇಟಿಯ ಸಂದರ್ಭದಲ್ಲಿ ತಮ್ಮ 75ನೇ ಹುಟ್ಟುಹಬ್ಬದಂದು ಶಾಲು ಹೊದಿಸಿ ಸನ್ಮಾನಿಸಿದ ನಂತರ ಪಿಂಗಲೆ ಈ ಹೇಳಿಕೆ ನೀಡಿದ್ದರು. ಶಾಲು ಗೌರವವನ್ನು ಸಂಕೇತಿಸುತ್ತದೆ, ಆದರೆ ಪಿಂಗಲೆ ಅದರ ಆಳವಾದ ಅರ್ಥವನ್ನು ಅರ್ಥಮಾಡಿಕೊಂಡರು. ಇದು ಒಂದು ಪೀಳಿಗೆಯ ಬದಲಾವಣೆಯನ್ನು ಮತ್ತು ಕಿರಿಯ ನಾಯಕರಿಗೆ ದಾರಿ ಮಾಡಿಕೊಡಲು ಪಕ್ಕಕ್ಕೆ ಸರಿಯಲು ಸಮಯವೆಂಬುದನ್ನು ಸೂಚಿಸುತ್ತದೆ ಎಂದು ಅವರು ಭಾವಿಸಿದ್ದರು” ಎಂದು ಮೋಹನ್ ಭಾಗವತ್ ಹೇಳಿದ್ದರು.
ಆದರೆ, ಪ್ರತಿಪಕ್ಷಗಳು ಈ ಹೇಳಿಕೆಯನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಸ್ಪಷ್ಟ ಘರ್ಷಣೆಯ ಪ್ರತಿಬಿಂಬವಾಗಿ ಬಿಂಬಿಸುತ್ತಿವೆ. ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಇದು “ಸ್ಪಷ್ಟ ಸಂದೇಶ”. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವೆ ಏನು ನಡೆಯುತ್ತಿದೆ ಎಂಬುದು ಮೋಹನ್ ಭಾಗವತ್ ಅವರ ಹೇಳಿಕೆಗಳಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಭಿನ್ನಮತಕ್ಕೆ ಮದ್ದರೆದ ಆರ್‌ಎಸ್‌ಎಸ್! ಆಂತರಿಕ ಸಭೆಯಲ್ಲಿ ಏನೇನಾಯ್ತು? ಇಲ್ಲಿದೆ ವಿವರ
“2014ರಲ್ಲಿ ಬಿಜೆಪಿ ಸರ್ಕಾರ ರಚಿಸಿದಾಗ ಅವರು 75 ವರ್ಷಕ್ಕಿಂತ ಮೇಲ್ಪಟ್ಟ ತಮ್ಮ ನಾಯಕರನ್ನು ‘ಮಾರ್ಗದರ್ಶಕ ಮಂಡಳಿ’ಯಲ್ಲಿ ಇರಿಸಿದ್ದರು. ಈಗ, ಆರ್‌ಎಸ್‌ಎಸ್ 11 ವರ್ಷಗಳ ನಂತರ ಬಿಜೆಪಿಗೆ ತಾನು ನೀಡಿದ ಭರವಸೆಗಳ ಬಗ್ಗೆ ನೆನಪಿಸುತ್ತಿದೆ. ಆಂತರಿಕ ಸಂಘರ್ಷಗಳು ಈಗ ಸಾರ್ವಜನಿಕವಾಗಿವೆ. ಈ ಸಂಘರ್ಷದ ಪರಿಣಾಮ ಏನಾಗಬಹುದು ಎಂಬುದು ಯಾರಿಗೂ ತಿಳಿದಿಲ್ಲ” ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:41 pm, Fri, 11 July 25




