ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಈಗ ಸುದ್ದಿಯಲ್ಲಿರುವ ಕೇರಳದ ರೆಹಾನಾ ಫಾತಿಮಾ ಯಾರು?

ಕೇರಳದಲ್ಲಿ ಮಹಿಳಾ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹಿಳೆ ರೆಹನಾ ಫಾತಿಮಾ. ಈಕೆ ಧಾರ್ಮಿಕ ಸ್ವಾತಂತ್ರ್ಯ, ದೇಹದ ಸಕಾರಾತ್ಮಕತೆ ಮತ್ತು LGBTQ+ ಹಕ್ಕುಗಳಂತಹ  ವಿಷಯಗಳಲ್ಲಿ ದನಿಯೆತ್ತಿದ್ದಾರೆ

ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಈಗ ಸುದ್ದಿಯಲ್ಲಿರುವ ಕೇರಳದ ರೆಹಾನಾ ಫಾತಿಮಾ ಯಾರು?
ರೆಹಾನಾ ಫಾತಿಮಾImage Credit source: Facebook
Follow us
ರಶ್ಮಿ ಕಲ್ಲಕಟ್ಟ
|

Updated on: Jun 06, 2023 | 6:16 PM

ಮಹಿಳಾ ಹಕ್ಕುಗಳ ಕಾರ್ಯಕರ್ತೆ,ಕೇರಳ ಮೂಲದ ರೆಹಾನಾ ಫಾತಿಮಾ (Rehana Fathima) ವಿರುದ್ಧದ ಪೋಕ್ಸೊ ಪ್ರಕರಣವನ್ನು(POCSO case)  ಕೇರಳ ಹೈಕೋರ್ಟ್ (Kerala High Court) ವಜಾ ಮಾಡಿದೆ. ಮಹಿಳೆ ತನ್ನ ದೇಹದ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಶಕ್ತಳು. ಅದು ಆಕೆಯ ಸಮಾನತೆ ಹಾಗೂ ಖಾಸಗಿತನದ ಮೂಲಭೂತ ಹಕ್ಕು. ನಗ್ನತೆ ಹಾಗೂ ಲೈಂಗಿಕತೆಯನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿ ನ್ಯಾಯಾಲಯ ಮೊಕದ್ದಮೆಯನ್ನು ವಜಾಗೊಳಿಸಿದೆ. 37ರ ಹರೆಯದ ಫಾತಿಮಾಳ ಅರೆ ನಗ್ನ ದೇಹದ ಮೇಲೆ ಆಕೆಯ ಅಪ್ರಾಪ್ತ ಮಕ್ಕಳು ಚಿತ್ರ ಬಿಡಿಸುತ್ತಿರುವ ವಿಡಿಯೊ 2020 ರಲ್ಲಿ ವೈರಲ್ ಆದ ನಂತರ ಆಕೆ ಮೇಲೆ ಕೇಸು ದಾಖಲಿಸಿ ಬಂಧಿಸಲಾಯಿತು.ಆಕೆಯ ಜಾಮೀನು ಅರ್ಜಿಗಳನ್ನು ನಿರಾಕರಿಸಲಾಯಿತು.

ಕೇರಳ ಹೈಕೋರ್ಟ್ ನ್ಯಾಯಾಧೀಶರು ಈ ಕೃತ್ಯವನ್ನು “ಮುಗ್ಧ ಕಲಾತ್ಮಕ ಅಭಿವ್ಯಕ್ತಿ” ಎಂದು ಹೇಳಿದ್ದು ಈ ಕೃತ್ಯವು ಲೈಂಗಿಕ ರೀತಿಯದ್ದು ಎಂಬ ಆರೋಪವನ್ನು ತಳ್ಳಿಹಾಕಿದರು. ಮಕ್ಕಳನ್ನು ಅಶ್ಲೀಲತೆಗೆ ಬಳಸಲಾಗಿದೆ ಎಂದು ತೋರಿಸಲು ಏನೂ ಇಲ್ಲ. ವಿಡಿಯೊದಲ್ಲಿ ಲೈಂಗಿಕತೆಯ ಯಾವುದೇ ಸುಳಿವು ಇಲ್ಲ. ವ್ಯಕ್ತಿಯ ಬೆತ್ತಲೆ ದೇಹದ ಮೇಲೆ ಚಿತ್ರಿಸುವುದು, ಪುರುಷ ಅಥವಾ ಮಹಿಳೆಯಾಗಿದ್ದರೂ, ಅದು ಲೈಂಗಿಕತೆಗೆ ಸಂಬಂಧಿಸಿದ್ದು ಎಂದು ಹೇಳಲಾಗುವುದಿಲ್ಲ ಎಂದಿದೆ ನ್ಯಾಯಾಲಯ.

ರೆಹಾನಾ ಫಾತಿಮಾ ಯಾರು?

ಕೇರಳದಲ್ಲಿ ಮಹಿಳಾ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹಿಳೆ ರೆಹನಾ ಫಾತಿಮಾ. ಈಕೆ ಧಾರ್ಮಿಕ ಸ್ವಾತಂತ್ರ್ಯ, ದೇಹದ ಸಕಾರಾತ್ಮಕತೆ ಮತ್ತು LGBTQ+ ಹಕ್ಕುಗಳಂತಹ  ವಿಷಯಗಳಲ್ಲಿ ದನಿಯೆತ್ತಿದ್ದಾರೆ. ಸಾಮಾಜಿಕ ಬದಲಾವಣೆಯನ್ನು ತರಲು ನಡೆಸುವ ಹೋರಾಟಗಳಲ್ಲಿ ಈಕೆ ಭಾಗಿಯಾಗುತ್ತಿರುತ್ತಾರೆ.

ಶಬರಿಮಲೆ ದೇಗುಲ ವಿವಾದ

2018 ರಲ್ಲಿ ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಪ್ರಯತ್ನಿದಾಗ ಫಾತಿಮಾ ಹೆಸರು ಸುದ್ದಿಯಾಗಿತ್ತು.  ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು, ಮುಟ್ಟು ನಿಂತ ಮಹಿಳೆಯರಿಗೆ ಮಾತ್ರ ಪ್ರವೇಶ ಎಂಬ ನಿಬಂಧನೆಯನ್ನು ಸುಪ್ರೀಂಕೋರ್ಟ್ ತೆಗೆದುಹಾಕಿದಾಗ, ಕೆಲವು ಮಹಿಳೆಯರು ಶಬರಿಮಲೆಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಆದಾಗ್ಯೂ, ಆಕೆಯ ನಡೆ ಸಮಾಜದ ಕೆಲವು ವರ್ಗಗಳಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿತು. ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಆರೋಪದ ಮೇಲೆ ಆಕೆಯ ಬಂಧನಕ್ಕೆ ಕಾರಣವಾಯಿತು.

ಇದನ್ನೂ ಓದಿ: ನಗ್ನತೆಯನ್ನು ಲೈಂಗಿಕತೆಗೆ ಹೋಲಿಕೆ ಮಾಡುವುದು ಸರಿಯಲ್ಲ: ರೆಹಾನಾ ಫಾತಿಮಾ ವಿರುದ್ಧದ ಮೊಕದ್ದಮೆ ವಜಾಗೊಳಿಸಿದ ಕೇರಳ ಹೈಕೋರ್ಟ್

ಬಂಧನದ ನಂತರ ಫಾತಿಮಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ, ಬೆದರಿಕೆ ಸುರಿಮಳೆಯಾಗಿತ್ತು. ಆಕೆ ಪೊಲೀಸ್ ರಕ್ಷಣೆ ಪಡೆದಿದ್ದಳು. ಇದರ ನಡುವೆಯೇ ಆಕೆಯ ಮನೆ ಧ್ವಂಸವಾಗಿತ್ತು. ಕಪ್ಪು ಬಟ್ಟೆ ಧರಿಸಿ, ಹಣೆಗೆ ಶ್ರೀಗಂಧ ಲೇಪಿಸಿ ಅಯ್ಯಪ್ಪನ ಭಂಗಿಯಲ್ಲಿ ಕುಳಿತ   ಫೋಟೊವೊಂದನ್ನು ಫಾತಿಮಾ ಪೋಸ್ಟ್ ಮಾಡಿದ್ದು ಅದಕ್ಕೂ ಭಾರೀ ಟೀಕೆ ವ್ಯಕ್ತವಾಗಿತ್ತು.

ಅಂದಹಾಗೆ ಫಾತಿಮಾ LGBTQ+ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಉಪಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಮಾಡೆಲ್ ಕೂಡಾ ಆಗಿರುವ ಫಾತಿಮಾ ಇಂಟರ್‌ಸೆಕ್ಸ್ ಜನರ ಹೋರಾಟದ ಕುರಿತ ಮಲಯಾಳಂ ಚಿತ್ರ ‘ಏಕಾ’ದಲ್ಲಿ ನಟಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ