AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಂಡತಿಯಿಂದ ಪ್ರಾಣ ಉಳೀತು, ಅಂದು ಏರ್​ ಇಂಡಿಯಾ ಹತ್ತಿದ್ರೆ ನಾನೇ ಇರ್ತಿರ್ಲಿಲ್ಲ: ಡಾ.ಉಮಂಗ್ ಪಟೇಲ್

ಗುಜರಾತ್​​ನಿಂದ ಲಂಡನ್​​ಗೆ ಹೊರಡಬೇಕಿದ್ದ ಡಾ. ಉಮಂಗ್ ಅಂದು ಪತ್ನಿಯ ಒತ್ತಾಯದ ಮೇರೆಗೆ ಉಳಿದುಕೊಂಡಿದ್ದರು. ಜೂನ್ 12ರಂದು ಅದೇ ಏರ್ ಇಂಡಿಯಾ ವಿಮಾನವನ್ನು ಅವರು ಏರಬೇಕಿತ್ತು. ಅಂದು ತನ್ನನ್ನು ಹೋಗದಂತೆ ತಡೆದ ಪತ್ನಿಗೆ ಧನ್ಯವಾದ ತಿಳಿಸಿದ್ದಾರೆ. ಉಮಂಗ್ ಪಟೇಲ್ ವೃತ್ತಿಯಲ್ಲಿ ವೈದ್ಯ.ಅವರು ಕಳೆದ ಐದು ವರ್ಷಗಳಿಂದ ಲಂಡನ್​​ನ ನಾರ್ಥಾಂಪ್ಟನ್​ನಲ್ಲಿ ವಾಸವಿದ್ದಾರೆ. ಉಮಂಗ್ ಅವರ ತಂದೆ ಕೂಡ ವೈದ್ಯರೇ ಆದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕಾರಣ ಅನಿವಾರ್ಯವಾಗಿ ಭಾರತಕ್ಕೆ ಮರಳಬೇಕಾಗಿತ್ತು.

ಹೆಂಡತಿಯಿಂದ ಪ್ರಾಣ ಉಳೀತು, ಅಂದು ಏರ್​ ಇಂಡಿಯಾ ಹತ್ತಿದ್ರೆ ನಾನೇ ಇರ್ತಿರ್ಲಿಲ್ಲ: ಡಾ.ಉಮಂಗ್ ಪಟೇಲ್
ಉಮಂಗ್
ನಯನಾ ರಾಜೀವ್
|

Updated on:Jun 16, 2025 | 12:54 PM

Share

ನವದೆಹಲಿ, ಜೂನ್ 16: ‘‘ಹೆಂಡತಿಯಿಂದ ಇಂದು ನಾನು ಜೀವಂತವಾಗಿದ್ದೇನೆ ಆಕೆಗೆ ಎಷ್ಟು ಧನ್ಯವಾದ ಹೇಳಿದ್ರೂ ಸಾಲ್ದು’’ ಎಂದು ಡಾ. ಉಮಂಗ್ ಪಟೇಲ್ ಹೇಳಿದ್ದಾರೆ. ಉಮಂಗ್ ಪಟೇಲ್ ವೃತ್ತಿಯಲ್ಲಿ ವೈದ್ಯ.ಅವರು ಕಳೆದ ಐದು ವರ್ಷಗಳಿಂದ ಲಂಡನ್​​ನ ನಾರ್ಥಾಂಪ್ಟನ್​ನಲ್ಲಿ ವಾಸವಿದ್ದಾರೆ. ಉಮಂಗ್ ಅವರ ತಂದೆ ಕೂಡ ವೈದ್ಯರೇ ಆದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕಾರಣ ಅನಿವಾರ್ಯವಾಗಿ ಭಾರತಕ್ಕೆ ಮರಳಬೇಕಾಗಿತ್ತು.

ಮೇ 24ರಂದು ಅವರು ಲಂಡನ್​​ನಿಂದ ತಮ್ಮ ಪತ್ನಿಯೊಂದಿಗೆ ಲಂಡನ್​ನಿಂದ ಬಂದಿದ್ದರು. ಜೂನ್ 12ರಂದು ಪತ್ನಿಯನ್ನು ಇಲ್ಲೇ ಬಿಟ್ಟು ಲಂಡನ್​​ಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದರು. ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್‌ ಬುಕ್ ಮಾಡಿದ್ದರು. ಅದು ಟೇಕ್ ಆಫ್ ಆದ ತಕ್ಷಣ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿತು, ವಿಮಾನದಲ್ಲಿ 241 ಜನರು ಹಾಗೂ ಉಳಿದವರು ಸೇರಿ 270 ಮಂದಿ ಸಾವನ್ನಪ್ಪಿದ್ದರು.

ಡಾ. ಉಮಂಗ್ ಯುಕೆಯಿಂದ ತಮ್ಮ ಪತ್ನಿ, ಪುತ್ರರು ಹಾಗೂ ಅಜ್ಜಿಯೊಂದಿಗೆ ಬಂದಿದ್ದರು. ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಕೊಯ್ಡಮ್ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಗೆ ಬಂದಿದ್ದರು.ಜೂನ್ 9ರಂದು ತಮ್ಮ ಪತ್ನಿಯನ್ನು ಅವರ ತಾಯಿಯ ಮನೆಗೆ ಬಿಟ್ಟು ತಾವೊಬ್ಬರೇ ಹೊರಡುವ ನಿರ್ಧಾರ ಮಾಡಿದ್ದರು. ಟಿಕೆಟ್ ಬುಕ್ ಕೂಡ ಆಗಿತ್ತು. ಆದರೆ ಅತ್ತೆಯ ಮನೆಗೆ ಹೋಗುವಷ್ಟರ ಹೊತ್ತಿಗೆ ತೀವ್ರ ಜ್ವರವಿತ್ತು, ನಡೆದಾಡುವುದೂ ಕಷ್ಟವಾಗಿತ್ತು.

ಇದನ್ನೂ ಓದಿ
Image
ಅಹಮದಾಬಾದ್ ವಿಮಾನ ದುರಂತ: ಮೃತರ ಸಂಖ್ಯೆ 274ಕ್ಕೆ ಏರಿಕೆ
Image
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
Image
ಅಪಘಾತ ನಡೆದ ಹಾಸ್ಟೆಲ್ ಮೇಲ್ಭಾಗದಲ್ಲಿ ವಿಮಾನದ 1 ಬ್ಲಾಕ್ ಬಾಕ್ಸ್ ಪತ್ತೆ
Image
ಬದುಕುಳಿದ ಏಕೈಕ ಪ್ರಯಾಣಿಕ ಮೋದಿ ಬಳಿ ಹೇಳಿದ್ದೇನು? ಇಲ್ಲಿದೆ ವಿವರ

ಮತ್ತಷ್ಟು ಓದಿ: ಏರ್​ ಇಂಡಿಯಾ ವಿಮಾನ ಬಿದ್ದ ರಭಸಕ್ಕೆ ಅಹಮದಾಬಾದ್ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ

ಹೀಗಾಗಿ ಜೂನ್ 12ರಂದು ನೀವು ಯುಕೆಗೆ ಹೋಗುವುದು ಬೇಡ ಟಿಕೆಟ್ ಕ್ಯಾನ್ಸಲ್ ಮಾಡಿಬಿಡಿ ಎಂದು ಪತ್ನಿ ತುಂಬಾ ಒತ್ತಾಯ ಮಾಡಿದ್ದರು. ಕೊನೆಗೂ ಉಮಂಗ್ ಅದಕ್ಕೆ ಒಪ್ಪಿ ಅಂದು ಲಂಡನ್​​ಗೆ ಪ್ರಯಾಣ ಬೆಳೆಸಿರಲಿಲ್ಲ. ಹೀಗಾಗಿ ಅವರು ಜೀವಂತವಾಗಿದ್ದಾರೆ. ತಾನು ಜೂನ್ 12 ರ ಟಿಕೆಟ್ ಅನ್ನು ರದ್ದುಗೊಳಿಸಿ, ಜೂನ್ 15 ಕ್ಕೆ ಇನ್ನೊಂದು ಟಿಕೆಟ್ ಬುಕ್ ಮಾಡಿದ್ದೆ, ಅದಾದ ಬಳಿಕ ವಿಮಾನ ಅಪಘಾತದ ಸುದ್ದಿ ಕೇಳಿದೆ. ದೇವರೇ ಹೆಂಡತಿಯ ರೂಪದಲ್ಲಿ ಬಂದು ನನ್ನನ್ನು ರಕ್ಷಿಸಿದ್ದಾನೆ ಎಂದು ಉಮಂಗ್ ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Mon, 16 June 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ