National Defence: ಕ್ಷಿಪಣಿ ನಿರೋಧಕ ವ್ಯವಸ್ಥೆ: ರಷ್ಯಾದ ಎಸ್-400 vs ಅಮೆರಿಕದ ಥಾಡ್- ಭಾರತಕ್ಕೆ ಯಾವುದು ಹಿತ?

ಅಮೆರಿಕದ ಥಾಡ್​ ವ್ಯವಸ್ಥೆಗಿಂತಲೂ ಸುಧಾರಿತ ತಂತ್ರಜ್ಞಾನವನ್ನು ಎಸ್-400 ವ್ಯವಸ್ಥೆಯಲ್ಲಿ ಬಳಸಲಾಗುತ್ತದೆ. ಈ ಎರಡೂ ಕ್ಷಿಪಣಿ ನಿರೋಧಕ ವ್ಯವಸ್ಥೆ ಬಗ್ಗೆ ಈ ಲೇಖನದಲ್ಲಿ ವಿವರಣೆ ಇದೆ.

National Defence: ಕ್ಷಿಪಣಿ ನಿರೋಧಕ ವ್ಯವಸ್ಥೆ: ರಷ್ಯಾದ ಎಸ್-400 vs ಅಮೆರಿಕದ ಥಾಡ್- ಭಾರತಕ್ಕೆ ಯಾವುದು ಹಿತ?
ರಷ್ಯಾ ನಿರ್ಮಿತ ಎಸ್​ 400 ಮತ್ತು ಅಮೆರಿಕ ನಿರ್ಮಿತ ಥಾಡ್ ವಾಯು ರಕ್ಷಣಾ ವ್ಯವಸ್ಥೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 22, 2021 | 5:03 PM

ಭಾರತಕ್ಕೆ ಇದೀಗ ರಷ್ಯಾ ನಿರ್ಮಾಣದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಪೂರೈಕೆ ಆರಂಭವಾಗಿದೆ. ಅಮೆರಿಕ ತಾನು ರೂಪಿಸಿರುವ ಥಾಡ್ (Terminal High Altitude Area Defence – THAAD) ಕ್ಷಿಪಣಿ ನಿರೋಧ ವ್ಯವಸ್ಥೆಗೆ ಭಾರತ ಗ್ರಾಹಕನಾಗಬೇಕು ಎಂದು ನಿರೀಕ್ಷಿಸಿತ್ತು. ಅದನ್ನು ಮೀರಲು ಭಾರತ ಸರ್ಕಾರಕ್ಕೆ ಹಲವು ಕಾರಣಗಳಿದ್ದವು. ಅದರಲ್ಲಿ ಮುಖ್ಯವಾದ ಅಂಶವೆಂದರೆ ಎಸ್​-400 ವ್ಯವಸ್ಥೆಯ ಅತ್ಯುತ್ತಮ ಸಾಮರ್ಥ್ಯ. ಇಂದು ಜಗತ್ತಿನಲ್ಲಿ ಲಭ್ಯವಿರುವ ಶ್ರೇಷ್ಠ ಕ್ಷಿಪಣಿ ನಿರೋಧಕ ತಂತ್ರಜ್ಞಾನವನ್ನು ಎಸ್-400 ಹೊಂದಿದೆ. ಅಮೆರಿಕದ ಥಾಡ್​ ವ್ಯವಸ್ಥೆಗಿಂತಲೂ ಸುಧಾರಿತ ತಂತ್ರಜ್ಞಾನ ಎಸ್-400 ವ್ಯವಸ್ಥೆಯಲ್ಲಿ ಬಳಕೆಯಾಗುತ್ತದೆ. ಈ ಎರಡೂ ಕ್ಷಿಪಣಿ ನಿರೋಧಕ ವ್ಯವಸ್ಥೆ ಬಗ್ಗೆ ವಿವರಿಸಿದ್ದಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.

ಭೂಮಿಯಿಂದ ಆಗಸಕ್ಕೆ ಚಿಮ್ಮುವ ಎಸ್-400 ಕ್ಷಿಪಣಿ ವ್ಯವಸ್ಥೆಗಳ ವಿತರಣೆ ಈಗಾಗಲೇ ಪ್ರಾರಂಭವಾಗಿದೆ. ಇದು ಸುಧಾರಿತ, ದೂರಗಾಮಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ‘ವಿತರಣೆಗಳು ಯೋಜಿಸಿದಂತೆ ನಡೆಯುತ್ತಿವೆ. ಭಾರತಕ್ಕೆ S-400 ವಾಯು ರಕ್ಷಣಾ ವ್ಯವಸ್ಥೆಯ ಸರಬರಾಜು ಪ್ರಾರಂಭವಾಗಿದೆ ಮತ್ತು ನಿಗದಿತ ಸಮಯಕ್ಕೆ ಈ ಘಟಕಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗುವುದು’ ಎಂದು ರಷ್ಯಾ ಸರ್ಕಾರದ ಮಿಲಿಟರಿ-ತಾಂತ್ರಿಕ ಸೇವೆಯ ನಿರ್ದೇಶಕ ಡಿಮಿಟ್ರಿ ಶುಗೇವ್ ಹೇಳಿದ್ದಾರೆ.

ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತವು 2019ರಲ್ಲಿ ರಷ್ಯಾಕ್ಕೆ ಮೊದಲ ಹಂತವಾಗಿ ಸುಮಾರು 80 ಕೋಟಿ ಡಾಲರ್ ಪಾವತಿಸಿದೆ. ಟ್ರಯಂಫ್ಸ್ ಎಸ್-400ರ ಮೊದಲ ತುಕಡಿ ನಿರ್ವಹಿಸಲು ರಷ್ಯಾ ಈಗಾಗಲೇ ಭಾರತೀಯ ಸಿಬ್ಬಂದಿಯ ಗುಂಪಿಗೆ ತರಬೇತಿ ನೀಡಿದೆ. 2022ರ ಜನವರಿಯ ಆರಂಭದಲ್ಲಿ ರಷ್ಯಾದ ತಜ್ಞರು ಭಾರತಕ್ಕೆ ಭೇಟಿ ನೀಡಲಿದ್ದು, ಶಸ್ತ್ರಾಸ್ತ್ರಗಳು ನೆಲೆಗೊಂಡಿರುವ ಸ್ಥಳಗಳಲ್ಲಿ ಅವುಗಳ ಸ್ಥಾಪನೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. 2022ರ ಅಂತ್ಯದ ವೇಳೆಗೆ ಕ್ಷಿಪಣಿ ವ್ಯವಸ್ಥೆಗಳ ಸಾಗಣೆ ಪೂರ್ಣಗೊಳ್ಳಲಿದೆ ಎಂದು ರಷ್ಯಾದ ಸರ್ಕಾರಿ ಮಿಲಿಟರಿ ಸಂಸ್ಥೆ ರೊಸೊಬೊರೊನೆಕ್ಸ್‌ಪೋರ್ಟ್‌ನ ಮುಖ್ಯಸ್ಥ ಅಲೆಕ್ಸಾಂಡರ್ ಮಿಖೇವ್ ಹೇಳಿದ್ದಾರೆ.

ಒಪ್ಪಂದದೊಂದಿಗೆ ಮುಂದುವರಿಯುವುದು ಅಮೆರಿಕದ ನಿರ್ಬಂಧಗಳನ್ನು ಆಹ್ವಾನಿಸಬಹುದು ಎಂದು ಅಮೆರಿಕ ಭಾರತಕ್ಕೆ ಎಚ್ಚರಿಸಿತ್ತು. ಅಕ್ಟೋಬರ್ 2018ರಲ್ಲಿ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು ಭಾರತವು ರಷ್ಯಾದೊಂದಿಗೆ 5 ಶತಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಮೆರಿಕ ಎಚ್ಚರಿಕೆಯನ್ನು ನಿರ್ಲಕ್ಷಸಿರುವುದರ ಪರಿಣಾಮ ಏನಾಗಬಹುದು ಎಂಬ ಬಗ್ಗೆ ಇನ್ನೂ ಅಸ್ಪಷ್ಟತೆ ಮಂದುವರಿದಿದೆ. ತನ್ನ ವಿರೋಧಿಗಳನ್ನು ಮಟ್ಟಹಾಕಲು ಅಮೆರಿಕ ಸಾಮಾನ್ಯವಾಗಿ ಬಳಸುವ ಕಾಟ್ಸಾ

S-400 ಕ್ಷಿಪಣಿ ವ್ಯವಸ್ಥೆಗಳನ್ನು ಖರೀದಿಸಲು ಅಮೆರಿಕ ತನ್ನ ವಿರೋಧಿಗಳನ್ನು ಹಣಿಯಲೆಂದೇ ನಿರ್ಬಂಧಗಳನ್ನು ವಿಧಿಸಲು ಅವಕಾಶ ಮಾಡಿಕೊಡುವ ಕಾಟ್ಸಾ ಮೂಲಕ (Countering America’s Adversaries Through Sanctions Act – CAATSA) ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆಯೇ ಎಂದು ಹಾಲಿ ಅಧ್ಯಕ್ಷ ಜೋ ಬಿಡೆನ್ ಇನ್ನೂ ಸ್ಪಷ್ಟಪಡಿಸಿಲ್ಲ. 2017ರಲ್ಲಿ ಜಾರಿಗೆ ತರಲಾದ CAATSA, ರಷ್ಯಾದ ರಕ್ಷಣಾ ಮತ್ತು ಗುಪ್ತಚರ ಕ್ಷೇತ್ರಗಳೊಂದಿಗೆ ವಹಿವಾಟುಗಳಲ್ಲಿ ತೊಡಗಿರುವ ಯಾವುದೇ ದೇಶದ ವಿರುದ್ಧ ದಂಡನಾತ್ಮಕ ಕ್ರಮಗಳಿಗೆ ಅವಕಾಶ ಒದಗಿಸುತ್ತದೆ.

ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ವ್ಯವಸ್ಥೆ ಖರೀದಿಸಿದ್ದಕ್ಕಾಗಿ CAATSA ಅಡಿಯಲ್ಲಿ ಅಮೆರಿಕವು ಈಗಾಗಲೇ ಟರ್ಕಿಯ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಅಂತಹ ಭೀತಿಯ ಕಾರ್ಮೋಡ ಭಾರತದ ಮೇಲೂ ಬೃಹತ್ತಾಗಿ ಆವರಿಸಿದೆ. ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ವೆಂಡಿ ಶೆರ್ಮನ್, ಯಾವುದೇ ದೇಶವು S-400 ಕ್ಷಿಪಣಿಗಳನ್ನು ಬಳಸಲು ನಿರ್ಧರಿಸುವುದು ಅಪಾಯಕಾರಿ. ಅದು ಯಾರ ಸುರಕ್ಷತೆಯ ಹಿತಾಸಕ್ತಿಯನ್ನೂ ಹೊಂದಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಅಮೆರಿಕ ಆಡಳಿತದ ಚಿಂತನೆಯನ್ನು ಅರ್ಥೈಸಲಾಗುತ್ತಿದೆ. ಶಸ್ತ್ರಾಸ್ತ್ರ ಖರೀದಿ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಮೂಡಿರುವ ಭಿನ್ನಾಭಿಪ್ರಾಯಗಳನ್ನು ಮಾತುಕತೆಯಿಂದ ಪರಿಹರಿಸಿಕೊಳ್ಳಬಹುದಾಗಿದೆ ಎಂದು ವೆಂಡಿ ಶೆರ್ಮನ್ ಸಲಹೆ ಮಾಡಿದ್ದರು.

ತಾಂತ್ರಿಕವಾಗಿ ಅಮೆರಿಕದ ಥಾಡ್​ಗಿಂತಲೂ ಎಸ್-400 ಸಮರ್ಥವಾಗಿರುವುದು ಮಾತ್ರವಲ್ಲ, ಭಾರತೀಯ ಸಶಸ್ತ್ರಪಡೆಗಳಿಗೆ ಹಲವು ವರ್ಷಗಳಿಂದ ರಷ್ಯಾ ನಿಯಮಿತವಾಗಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಸರಬರಾಜು ಮಾಡುತ್ತಿದೆ. ಈ ಹಂತದಲ್ಲಿ ಅಮೆರಿಕದ ಒತ್ತಡಕ್ಕೆ ಮಣಿದರೆ ಅದರಿಂದ ಹಲವು ಅನಪೇಕ್ಷಿತ ಬೆಳವಣಿಗೆಗಳೂ ಕಾರಣವಾಗಬಹುದು ಎಂಬ ಮಾತುಗಳು ಕೇಳಿಬಂದಿವೆ. ರಷ್ಯಾದ ಎಸ್-400 ಮತ್ತು ಅಮೆರಿಕದ ಥಾಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ಪರಿಶೀಲಿಸಿದರೆ ಭಾರತದ ಅಗತ್ಯಗಳಿಗೆ ಎಸ್​-400 ಸೂಕ್ತ ಎಂಬ ಅಂಶ ಮನವರಿಕೆಯಾಗುತ್ತದೆ.

ಇದನ್ನೂ ಓದಿ: National Defence: ಸುಖೋಯ್ ಯುದ್ಧ ವಿಮಾನ: ಭಾರತೀಯ ವಾಯುಪಡೆಯ ಸುದೀರ್ಘ ಭರವಸೆ

S-400

ರಷ್ಯಾ ನಿರ್ಮಿತ ಎಸ್​-400 ವಾಯು ರಕ್ಷಣಾ ವ್ಯವಸ್ಥೆ

ಎಸ್-400 ಟ್ರಯಂಫ್ ವಾಯುರಕ್ಷಣಾ ವ್ಯವಸ್ಥೆ ಎಂದರೇನು? ಮಾಸ್ಕೋ ಮೂಲದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋದಿಂದ ತಯಾರಾದ SA-21ನ ನ್ಯಾಟೊ ಪದನಾಮವನ್ನು ಹೊಂದಿರುವ ವಾಯುರಕ್ಷಣಾ ವ್ಯವಸ್ಥೆಗೆ ಎಸ್​-400 ಎಂದು ಕರೆಯುತ್ತಾರೆ. ರಷ್ಯಾದ ಶಸ್ತ್ರಾಗಾರದಲ್ಲಿ ರಫ್ತು ಉದ್ದೇಶದಿಂದಲೇ ತಯಾರಾದ ಘಟಕ ಇದು. ಪೂರ್ವ ನಿರ್ಧರಿತ ಗಡಿಯೊಳಗೆ ಬರಬಹುದಾದ ಶತ್ರು ವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು 400 ಕಿಮೀ ವ್ಯಾಪ್ತಿಯೊಳಗೆ ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಸುಮಾರು 600 ಕಿಮೀ ಅಂತರದ ಟ್ರ್ಯಾಕಿಂಗ್ ಸಾಮರ್ಥ್ಯವನ್ನು ಹೊಂದಿದೆ. ಸುಮಾರು 400 ಕಿಮೀ ದೂರದಲ್ಲಿರುವ ಸ್ಟೆಲ್ತ್ ತಂತ್ರಜ್ಞಾನಗಳನ್ನು (ಪತ್ತೆಯಾಗದಂತೆ ಹಾರುವ) ಒಳಗೊಂಡಂತೆ ಯಾವುದೇ ಹಾರುವ ಗುರಿಗಳನ್ನು ಹೊಡೆದುರುಳಿಸಲು ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಸಿಡಿತಲೆ ಕ್ಷಿಪಣಿಗಳು ಮತ್ತು ಶಬ್ದಾತೀತ ವೇಗದಲ್ಲಿ ಹಾರಿಬರುವ ಗುರಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಮೊದಲು ರಷ್ಯಾ ಎಸ್-300 ರಕ್ಷಣಾ ವ್ಯವಸ್ಥೆ ಅಭಿವೃದ್ಧಿಪಡಿಸಿತ್ತು. ಇದೀಗ ಬಳಕೆಗೆ ಬಂದಿರುವ ಎಸ್-400 ಆವೃತ್ತಿಯು ಎಸ್-300ಗಿಂತಲೂ ಎರಡೂವರೆಪಟ್ಟು ಹೆಚ್ಚು ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಪರಿಪಕ್ವ ರೇಡಾರ್, ಕಮಾಂಡ್ ಪೋಸ್ಟ್ ವೆಹಿಕಲ್, ಟಾರ್ಗೆಟ್ ಅಕ್ವಿಸಿಷನ್ ರೇಡಾರ್ ಮತ್ತು ಎರಡು ಬೆಟಾಲಿಯನ್ ಲಾಂಚರ್‌ಗಳನ್ನು ಒಳಗೊಂಡಿದೆ (ಪ್ರತಿ ಬೆಟಾಲಿಯನ್ ಎಂಟು ಸಿಬ್ಬಂದಿಯನ್ನು ಹೊಂದಿದೆ). ಪ್ರತಿ ಲಾಂಚರ್ ನಾಲ್ಕು ಟ್ಯೂಬ್‌ಗಳನ್ನು ಹೊಂದಿರುತ್ತದೆ. ಎಸ್-400 ಅನ್ನು 400 ಕಿ.ಮೀ., 250 ಕಿ.ಮೀ., 120 ಕಿ.ಮೀ. ಮತ್ತು 40 ಕಿ.ಮೀ. ವ್ಯಾಪ್ತಿಯ ನಾಲ್ಕು ವಿಭಿನ್ನ ರೀತಿಯ ಕ್ಷಿಪಣಿಗಳೊಂದಿಗೆ ಸಜ್ಜಿತಗೊಳಿಸಬಹುದು. ದೀರ್ಘ-ಶ್ರೇಣಿಯ ಒಂದು ರಾಡಾರ್ ಎಕಕಾಲಕ್ಕೆ 12 ಗುರಿಗಳನ್ನು ಎಂಗೇಜ್ ಮಾಡುವುದರೊಂದಿಗೆ, ಏಕಕಾಲದಲ್ಲಿ 100ಕ್ಕೂ ಹೆಚ್ಚು ಹಾರುವ ವಸ್ತುಗಳನ್ನು ಟ್ರ್ಯಾಕ್ ಮಾಡಬಲ್ಲದು.

Girish-Linganna

ಅಮೆರಿಕ ರೂಪಿಸಿರುವ ಥಾಡ್ ರಕ್ಷಣಾ ವ್ಯವಸ್ಥೆ. (ಒಳಚಿತ್ರ: ಲೇಖಕ ಗಿರೀಶ್ ಲಿಂಗಣ್ಣ)

ಥಾಡ್ ಹೀಗಿದೆ ಎಸ್​-400 ವ್ಯವಸ್ಥೆಗೆ ಹೋಲಿಸಿದರೆ ಅಮೆರಿಕ ನಿರ್ಮಿತ ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಅಥವಾ THAAD ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ವ್ಯಾಪ್ತಿ ಕಡಿಮೆ. ಕ್ಷಿತಿಜವನ್ನು ಮೀರಿ ಗುರಿಗಳನ್ನು ತಡೆಯುವ ಸಾಮರ್ಥ್ಯ ಈ ವ್ಯವಸ್ಥೆಗೆ ಇಲ್ಲ. ಅಂದರೆ ಹೆಚ್ಚು ದೂರದ ಗುರಿಗಳನ್ನು ಇದು ತಡೆಯಲಾರದು. ಇದು ಕೇವಲ ಸಿಡಿತಲೆ ವಿರೋಧಿ ಕ್ಷಿಪಣಿ ವ್ಯವಸ್ಥೆಯಾಗಿರುವುದರಿಂದ ಇತರ ವೈಮಾನಿಕ ಗುರಿಗಳನ್ನು ಎದುರಿಸುವ ಸಾಮರ್ಥ್ಯವೂ ಇಲ್ಲ. ಎಸ್​-400 ವ್ಯವಸ್ಥೆಗೆ ಇರುವ ಮತ್ತೊಂದು ಸುವಿಖ್ಯಾತ ಸಾಮರ್ಥ್ಯವೆಂದರೆ ಅದರ ಅದರ ‘ಉಡಾಯಿಸಿ ಮರೆತುಬಿಡಬಹುದಾದ ಸಾಮರ್ಥ್ಯ’ (fire-and-forget capability). ಆಂದರೆ ಎಸ್​-400 ಕ್ಷಿಪಣಿಗಳೊಂದಿಗೆ ಹೋಮಿಂಗ್ ಸಾಧನವನ್ನು ಅಳವಡಿಸಲಾಗಿದ್ದು, ಅದು ಗುರಿಯನ್ನು ಲಾಕ್ ಮಾಡಿಕೊಂಡು ಬೆನ್ನಟ್ಟಿ ನಾಶಪಡಿಸುತ್ತದೆ. ಈ ವಿಚಾರದಲ್ಲಿ ಥಾಡ್ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳಿವೆ.

ಕಾರ್ಯನಿರ್ವಹಿಸಬಹುದಾದ ವ್ಯಾಪ್ತಿ ಮತ್ತು ಎತ್ತರ ಎರಡರಲ್ಲೂ ಅಮೆರಿಕದ ಥಾಡ್ ತಂತ್ರಜ್ಞಾನಕ್ಕಿಂತ ಎಸ್-400 ಉತ್ತಮವಾಗಿದೆ. ಇದು 400 ಕಿಮೀ ದೂರದ ಗುರಿಗಳತ್ತ ಕ್ಷಿಪಣಿಗಳನ್ನು ಉಡಾಯಿಸುವ ಜತೆಗೆ 27 ಕಿಮೀ ಎತ್ತರದಲ್ಲಿರುವ ಬೆದರಿಕೆಗಳನ್ನು ತಡೆಯುತ್ತದೆ. ಗರಿಷ್ಠ ಗುರಿ ವಿನಾಶದ ಶ್ರೇಣಿಯ ವಿಷಯದಲ್ಲಿ S-400 ಅದರ ಪ್ರತಿಸ್ಪರ್ಧಿಗಳಿಗಿಂತ ದುಪ್ಪಟ್ಟು ಸಾಮರ್ಥ್ಯ ಹೊಂದಿದೆ. 10 ಮೀಟರ್ ಎತ್ತರದಲ್ಲಿ ಕ್ರೂಸ್ ಕ್ಷಿಪಣಿ ಅಥವಾ ಯಾವುದೇ ಶತ್ರು ವಿಮಾನವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. 10 ಮೀಟರ್​ಗಿಂತ ಕೆಳಗೆ ಯಾವುದೂ ಹಾರಲಾರದು. ಸಮೀಪದ ಪ್ರತಿಸ್ಪರ್ಧಿಗಳು ಈ ಸೂಚಕದಲ್ಲಿ ನಮ್ಮ ವ್ಯವಸ್ಥೆಗಿಂತಲೂ ಹಿಂದುಳಿದಿದ್ದಾರೆ’ ಎಂದು ರಷ್ಯಾದ ತಜ್ಞರನ್ನು ಉಲ್ಲೇಖಿಸಿ globalsecurity.org ಹೇಳಿದೆ.

ಇದನ್ನೂ ಓದಿ: National Defence: ಬಸವನಹುಳುವನ್ನು ನಾಚಿಸುತ್ತಿದೆ ಪ್ರಗತಿಯವೇಗ: ಗುಬ್ಬಿಯಲ್ಲಿ ಎಚ್​ಎಎಲ್ ಘಟಕ ಆರಂಭವಾಗುವುದು ಎಂದು? ಇದನ್ನೂ ಓದಿ: National Defence: ಅರಬ್ಬಿ ಸಮುದ್ರ ಮತ್ತು ಪಾಕಿಸ್ತಾನದ ಸುಳ್ಳು: ಕರಾಚಿ ಸಮೀಪ ಭಾರತದ ಜಲಾಂತರ್ಗಾಮಿ ಸಂಚರಿಸಿದ್ದು ನಿಜವೇ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ