ಭರ್ಜರಿ ಟ್ರಾನ್ಸ್ಫಾರ್ಮೇಷನ್ನೊಂದಿಗೆ ಬಂದ ಸ್ಟಾರ್ ನಟ; ಯಾರೆಂದು ಗುರುತಿಸಿ
ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಜಿಮ್ ಫೋಟೋಗಳನ್ನು ಹಂಚಿಕೊಳ್ಳೋಕೆ ಸೆಲೆಬ್ರಿಟಿಗಳು ಹೆಚ್ಚು ಆದ್ಯತೆ ನೀಡುತ್ತಾರೆ. ಈಗ ಸ್ಟಾರ್ ನಟನ ಟ್ರಾನ್ಸ್ಫಾರ್ಮೇಷನ್ ವೈರಲ್ ಆಗಿದೆ.
Updated on: Mar 19, 2024 | 2:14 PM

ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅದರಲ್ಲೂ ಜಿಮ್ ಫೋಟೋಗಳನ್ನು ಹಂಚಿಕೊಳ್ಳೋಕೆ ಸೆಲೆಬ್ರಿಟಿಗಳು ಹೆಚ್ಚು ಆದ್ಯತೆ ನೀಡುತ್ತಾರೆ. ಈಗ ಸ್ಟಾರ್ ನಟನ ಟ್ರಾನ್ಸ್ಫಾರ್ಮೇಷನ್ ವೈರಲ್ ಆಗಿದೆ.

ಈ ರೀತಿ ಗಮನ ಸೆಳೆದ ಸ್ಟಾರ್ ನಟ ಬೇರಾರೂ ಅಲ್ಲ ತಮಿಳು ನಟ ಆರ್ಯ. ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡು ತಮ್ಮ ದೇಹದ ಬದಲಾವಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ಏಪ್ರಿಲ್ 2023ರಲ್ಲಿ ಆರ್ಯ ಅವರ ದೇಹ ಸಾಮಾನ್ಯವಾಗಿಯೇ ಇತ್ತು. ನಂತರ ವರ್ಕೌಟ್ ಆರಂಭಿಸಿದರು. ನಿಧಾನವಾಗಿ ಅವರ ದೇಹದಲ್ಲಿ ಬದಲಾವಣೆ ಕಾಣೋಕೆ ಶುರುವಾಯಿತು. ಅವರ ಬದಲಾವಣೆ ಕಂಡು ಅನೇಕರಿಗೆ ಅಚ್ಚರಿ ಆಗಿದೆ.

ಒಂದು ವರ್ಷದಲ್ಲಿ ಆರ್ಯ ಅವರ ದೇಹ ಸಖತ್ ಮಾಸ್ ಆಗಿದೆ. ಅವರ ದೇಹಕ್ಕೆ ಒಳ್ಳೆಯ ಶೇಪ್ ಬಂದಿದೆ. ಅವರ ಉದ್ದ ಕೂದಲು ಕೂಡ ಗಮನ ಸೆಳೆದಿದೆ. ಆರ್ಯ ಅವರು ‘ಮಿಸ್ಟರ್ ಎಕ್ಸ್’ ಚಿತ್ರಕ್ಕಾಗಿ ಈ ಅವತಾರ ತಾಳಿದ್ದಾರೆ. ಈ ಸಿನಿಮಾನ ಮನು ಆನಂದ್ ನಿರ್ದೇಶನ ಮಾಡುತ್ತಿದ್ದಾರೆ.

ಆರ್ಯ ಅವರು ಮಾರ್ಚ್ 2023ರಲ್ಲಿ ಸ್ಕ್ರಿಪ್ಟ್ ಫೈನಲ್ ಮಾಡಿದರು. ಏಪ್ರಿಲ್ನಿಂದ ಲುಕ್ಗಾಗಿ ಶ್ರಮಿಸಲು ಆರಂಭಿಸಿದರು. ಈಗ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಅವರ ಟ್ರಾನ್ಸ್ಫಾರ್ಮೇಷನ್ ಫ್ಯಾನ್ಸ್ಗೆ ಇಷ್ಟ ಆಗಿದೆ.