- Kannada News Photo gallery Aditi Prabhudeva starring in more than 11 Kannada films Andondittu Kaala Thothapuri Alexa actress cute photos
Aditi Prabhudeva: 11ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಅದಿತಿ ಪ್ರಭುದೇವ; ಸ್ಯಾಂಡಲ್ವುಡ್ ಬೆಡಗಿಯ ಕ್ಯೂಟ್ ಫೋಟೋಗಳು ಇಲ್ಲಿವೆ
Aditi Prabhudeva Photos: ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ 11ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವುಗಳಲ್ಲಿ ಕೆಲವು ಚಿತ್ರಗಳು ಶೂಟಿಂಗ್ ಮುಗಿಸಿ ರಿಲೀಸ್ ಸಿದ್ಧತೆಯಲ್ಲಿದ್ದರೆ, ಮತ್ತೆ ಕೆಲವು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಆಗಿರುವ ಚಂದನವನದ ಬಹುಬೇಡಿಕೆಯ ನಟಿಯ ಫೋಟೋಗಳು ಇಲ್ಲಿವೆ.
Updated on: May 28, 2022 | 2:51 PM

ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಸದ್ಯ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ನಟಿ.

ಪ್ರಸ್ತುತ ಅದಿತಿ 11ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅವುಗಳಲ್ಲಿ ಕೆಲವು ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದರೆ, ಮತ್ತೆ ಕೆಲವು ಚಿತ್ರಗಳ ಕೆಲಸಗಳು ಮುಗಿದು ತೆರೆಗೆ ಬರಲು ಸಿದ್ಧವಾಗಿದೆ.

2022ರಲ್ಲಿ ಅದಿತಿ ನಟಿಸಿರುವ ‘ಓಲ್ಡ್ ಮಾಂಕ್’ ಹಾಗೂ ‘ಒಂಬತ್ತನೇ ದಿಕ್ಕು’ ಚಿತ್ರಗಳು ಈಗಾಗಲೇ ರಿಲೀಸ್ ಆಗಿವೆ. ಉಳಿದ 11 ಚಿತ್ರಗಳು ಈ ವರ್ಷವೇ ತೆರೆಕಾಣುವ ನಿರೀಕ್ಷೆ ಇದೆ.

ಜಗ್ಗೇಶ್ ಜತೆ ನಟಿಸುತ್ತಿರುವ ‘ತೋತಾಪುರಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ‘ತೋತಾಪುರಿ 2’ ಚಿತ್ರಕ್ಕೂ ಅದಿತಿ ನಾಯಕಿಯಾಗಿದ್ದಾರೆ.

‘ಗಜಾನನ & ಗ್ಯಾಂಗ್’, ‘ದಿಲ್ಮಾರ್’ ಚಿತ್ರಗಳಿಗೂ ಅದಿತಿ ನಾಯಕಿಯಾಗಿದ್ದಾರೆ.

‘ಚಾಂಪಿಯನ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಅದಿತಿ, ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

‘5ಡಿ’ ಚಿತ್ರದಲ್ಲೂ ಅದಿತಿ ಬಣ್ಣಹಚ್ಚಿದ್ದಾರೆ. ಧನಂಜಯ್ ನಟನೆಯ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ದಲ್ಲೂ ಅದಿತಿ ಕಾಣಿಸಿಕೊಳ್ಳುತ್ತಿದ್ದು, ಸೆಪ್ಟೆಂಬರ್ 9ರಂದು ಚಿತ್ರ ರಿಲೀಸ್ ಆಗಲಿದೆ.

‘ಅಂದೊಂದಿತ್ತು ಕಾಲ’ದಲ್ಲಿ ವಿನಯ್ ರಾಜ್ಕುಮಾರ್ಗೆ ನಾಯಕಿಯಾಗಿ ಅದಿತಿ ಬಣ್ಣಹಚ್ಚುತ್ತಿದ್ಧಾರೆ. ಆ ಚಿತ್ರದ ಟೀಸರ್ ಈಗಾಗಲೇ ಎಲ್ಲರ ಮನಗೆದ್ದಿದೆ.

‘ಮಾಫಿಯಾ’ ಚಿತ್ರದಲ್ಲೂ ಅದಿತಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಸ್ತುತ ಅದಿತಿ ‘ಅಲೆಕ್ಸಾ’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲಿ ಆಕ್ಷನ್ ದೃಶ್ಯಗಳಲ್ಲೂ ನಟಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಅದಿತಿ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಅದಿತಿ ಅಭಿಮಾನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ನಟಿಯ ಮುಂದಿನ ಚಿತ್ರಗಳಿಗೆ ಫ್ಯಾನ್ಸ್ ಕಾದಿದ್ದಾರೆ.




