- Kannada News Photo gallery Aishwarya shindhogi cried In Bigg Boss Kannada house Entertainment News In Kannada
‘ಬ್ರೇಕಪ್ ಆಗಿ ಆರು ತಿಂಗಳಾಯ್ತು’; ಕಣ್ಣೀರು ಹಾಕಿದ ಐಶ್ವರ್ಯಾ
ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಕಣ್ಣೀರು ಹಾಕಿದ್ದಾರೆ. ಅವರು ದೊಡ್ಮನೆ ಒಳಗೆ ಹಲವು ವಿಚಾರಕ್ಕೆ ಅತ್ತಿದ್ದು ಇದೆ. ಈಗಿನ ಅಳುವಿಗೆ ಕಾರಣ ಏನು ಎಂಬುದನ್ನು ಮೊದಲು ಹೇಳಿಕೊಂಡಿರಲಿಲ್ಲ. ಆ ಬಳಿಕ ಶಿಶಿರ್ ಬಳಿ ಈ ವಿಚಾರ ರಿವೀಲ್ ಮಾಡಿದರು.
Updated on: Oct 29, 2024 | 7:59 AM

ಐಶ್ವರ್ಯಾ ಅವರು ತಂದೆ-ತಾಯಿ ಇಲ್ಲದೆ ಬೆಳೆದವರು. ಅವರು ಸಣ್ಣ ವಯಸ್ಸಲ್ಲೇ ಪಾಲಕರನ್ನು ಕಳೆದುಕೊಂಡರು. ಈ ದುಃಖ ಅವರನ್ನು ಸದಾ ಕಾಡುತ್ತದೆ. ಇದರ ಜೊತೆಗೆ ಬ್ರೇಕಪ್ ವಿಚಾರವೂ ಅವರಿಗೆ ಸಾಕಷ್ಟು ನೋವು ಮಾಡಿದೆ.

ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಕಣ್ಣೀರು ಹಾಕಿದ್ದಾರೆ. ಅವರು ದೊಡ್ಮನೆ ಒಳಗೆ ಹಲವು ವಿಚಾರಕ್ಕೆ ಅತ್ತಿದ್ದು ಇದೆ. ಈಗಿನ ಅಳುವಿಗೆ ಕಾರಣ ಏನು ಎಂಬುದನ್ನು ಮೊದಲು ಹೇಳಿಕೊಂಡಿರಲಿಲ್ಲ. ಆ ಬಳಿಕ ಶಿಶಿರ್ ಬಳಿ ಈ ವಿಚಾರ ರಿವೀಲ್ ಮಾಡಿದರು.

‘ನನ್ನ ಹಳೆಯ ಬಾಯ್ಫ್ರೆಂಡ್ ನೆನಪಿಗೆ ಬಂದ. ಬ್ರೇಕಪ್ ಆಗಿ ಆರು ತಿಂಗಳು ಕಳೆದಿವೆ’ ಎಂದು ಐಶ್ವರ್ಯಾ ಅವರು ಹೇಳಿದರು. ಆ ಬಳಿಕ ಶಿಶಿರ್ ಅವರು ಐಶ್ವರ್ಯಾ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅವರು ಸಮಾಧಾನ ಆಗಲಿಲ್ಲ.

‘ನಿಮಗೆಲ್ಲ ಮನೆಯಿಂದ ಡ್ರೆಸ್ ಕಳಿಸುತ್ತಾರೆ. ಆಗ ನನಗೆ ಒಂಥರಾ ಆಗುತ್ತದೆ’ ಎನ್ನುತ್ತಾ ಮತ್ತೆ ಕಣ್ಣೀರು ಹಾಕಿದರು. ಐಶ್ವರ್ಯಾ ಅವರಿಗೆ ಡ್ರೆಸ್ ಕಳಿಸೋದು ಗೆಳೆಯರು ಹಾಗೂ ಸಂಬಂಧಿಕರು. ಅವರಿಗೆ ಮನೆಯಲ್ಲಿ ಯಾರೂ ಇಲ್ಲ.

ಆ ಬಳಿಕ ಶಿಶಿರ್ ಅವರು ಸಮಾಧಾನ ಮಾಡಿದರು. ‘ನಾನು ಹೊರಕ್ಕೆ ಹೋಗಿ ನಿನಗೆ ಬಟ್ಟೆ ಕಳುಹಿಸಲೇ’ ಎಂದು ಕೇಳಿದರು ಶಿಶಿರ್. ಇದಕ್ಕೆ ಬೇಡ ಎಂಬ ಉತ್ತರ ಐಶ್ವರ್ಯಾ ಕಡೆಯಿಂದ ಬಂತು.