- Kannada News Photo gallery Alia Bhatt and Ranbir Kapoor mehendi ceremony pics goes viral Ranbir holds his late father Rishi Kapoor photo in hand while dancing
Alia- Ranbir Mehendi Ceremony: ಆಲಿಯಾ- ರಣಬೀರ್ ಮೆಹಂದಿ ಶಾಸ್ತ್ರದಲ್ಲಿ ಹಲವು ವಿಶೇಷ ಕ್ಷಣಗಳು; ಫೋಟೋಗಳು ವೈರಲ್
Alia Bhatt- Ranbir Kapoor wedding: ಬಾಲಿವುಡ್ನ ತಾರಾ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಏಪ್ರಿಲ್ 14ರಂದು ವಿವಾಹವಾಗಿದ್ದರು. ಇದೀಗ ಈ ತಾರಾ ಜೋಡಿ ಮೆಹಂದಿ ಶಾಸ್ತ್ರದ ಸಂದರ್ಭದ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಪ್ತರು ಬಂಧುಗಳು ಭಾಗಿಯಾಗಿದ್ದ ಈ ಖಾಸಗಿ ಕಾರ್ಯಕ್ರಮದಲ್ಲಿ ರಣಬೀರ್ ತಮ್ಮ ತಂದೆ ದಿ.ರಿಷಿ ಕಪೂರ್ ಭಾವಚಿತ್ರದೊಂದಿಗೆ ನೃತ್ಯ ಮಾಡಿದ್ದಾರೆ. ಈ ಕಾರ್ಯಕ್ರಮದ ಫೋಟೋಗಳು ವೈರಲ್ ಆಗಿವೆ.
Updated on: Apr 16, 2022 | 2:47 PM

ಬಹುಭಾಷಾ ನಟಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಏಪ್ರಿಲ್ 14ರ ಗುರುವಾರದಂದು ತಮ್ಮ ನಿವಾಸದಲ್ಲಿ ಆಲಿಯಾ ಹಾಗೂ ರಣಬೀರ್ ವಿವಾಹ ಬಂಧನಕ್ಕೆ ಒಳಗಾಗಿದ್ದರು.

ಮದುವೆಯ ನಂತರ ಫೋಟೋ ಹಂಚಿಕೊಂಡು ಅಧಿಕೃತವಾಗಿ ಹೇಳಿಕೊಂಡಿದ್ದ ಈ ಜೋಡಿ, ಅದಕ್ಕೂ ಮುನ್ನ ವಿಷಯವನ್ನು ಆದಷ್ಟು ಗೌಪ್ಯವಾಗಿಟ್ಟಿದ್ದರು.

ಆಲಿಯಾ ಹಾಗೂ ರಣಬೀರ್ ವಿವಾಹದ ಫೋಟೋಗಳನ್ನು ಹಂಚಿಕೊಂಡ ನಂತರ ಇದೀಗ ಮೆಹಂದಿ ಶಾಸ್ತ್ರದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಆಪ್ತರೊಂದಿಗೆ ಸಂಭ್ರಮಿಸುತ್ತಿರುವ ವಿಶೇಷ ಫೋಟೋಗಳನ್ನು ಹಂಚಿಕೊಂಡಿರುವ ತಾರಾ ಜೋಡಿ, ಜೀವನದ ಅತ್ಯಂತ ಸಂಭ್ರಮದ ಕ್ಷಣಗಳಿವು ಎಂದು ಬಣ್ಣಿಸಿದ್ದಾರೆ.

ಮೆಹಂದಿ ಕಾರ್ಯಕ್ರಮದಲ್ಲಿ ರಣಬೀರ್ ಕಪೂರ್ ತಮ್ಮ ತಂದೆ ದಿ.ರಿಷಿ ಕಪೂರ್ ಅವರ ಭಾವಚಿತ್ರದೊಂದಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದಲ್ಲಿ ಆಲಿಯಾ ಆಪ್ತರು ಹಾಜರಿದ್ದು, ನಟಿಯ ಸಂಭ್ರಮವನ್ನು ಹೆಚ್ಚಿಸಿದರು.

ಆಲಿಯಾ- ರಣಬೀರ್ ಮೆಹಂದಿ ಶಾಸ್ತ್ರದ ಚಿತ್ರಗಳೀಗ ವೈರಲ್ ಆಗಿದ್ದು, ಜನರ ಮನಗೆದ್ದಿದೆ.

ಈ ಹಿಂದೆ ಆಲಿಯಾ- ರಣಬೀರ್ ವಿವಾಹ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದರು.

ಪಂಜಾಬಿ ಶೈಲಿಯಲ್ಲಿ ವಿವಾಹವಾಗಿದ್ದ ಈ ಜೋಡಿಯನ್ನು ನೋಡಿ ಅಭಿಮಾನಿಗಳು ಸಂತಸಗೊಂಡಿದ್ದರು.

ಆಲಿಯಾ ಭಟ್- ರಣಬೀರ್ ಕಪೂರ್

ಆಲಿಯಾ ಭಟ್- ರಣಬೀರ್ ಕಪೂರ್

ಆಲಿಯಾ ಭಟ್- ರಣಬೀರ್ ಕಪೂರ್




