ಮುಂಬೈಗೆ ತೆರಳಿ ಆಲಿಯಾಗೆ ಶುಭ ಹಾರೈಸಲಿದೆ ‘ಆರ್ಆರ್ಆರ್’ ತಂಡ; ಬುಕ್ ಆಯ್ತು ವಿಶೇಷ ವಿಮಾನ
ಮದುವೆ ಮುಗಿದ ನಾಲ್ಕು ದಿನಗಳ ಬಳಿಕ ತಾಜ್ ಹೋಟೆಲ್ನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲು ಆಲಿಯಾ ಹಾಗೂ ರಣಬೀರ್ ಕಪೂರ್ ನಿರ್ಧರಿಸಿದ್ದಾರೆ. ಈ ಪಾರ್ಟಿಗೆ ಆಲಿಯಾ ‘ಆರ್ಆರ್ಆರ್’ನ ಪ್ರಮುಖರನ್ನು ಆಹ್ವಾನಿಸಿದ್ದಾರೆ.
Updated on: Apr 12, 2022 | 6:59 PM

ಆಲಿಯಾ ಭಟ್ ಮದುವೆ ಏಪ್ರಿಲ್ 14ರಂದು ನಡೆಯಲಿದೆ ಎಂದು ವರದಿ ಆಗಿದೆ. ಈ ಮದುವೆ ಕಾರ್ಯಕ್ರಮವನ್ನು ತುಂಬಾನೇ ಗುಟ್ಟಾಗಿ ನಡೆಸಲು ಪ್ಲ್ಯಾನ್ ರೂಪಿಸಲಾಗಿದೆ. ವಿವಾಹ ಕಾರ್ಯಕ್ರಮದ ಬಗ್ಗೆ ಯಾರೊಬ್ಬರೂ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಮದುವೆ ವಿಚಾರದ ಬಗ್ಗೆ ನಿತ್ಯ ಹೊಸಹೊಸ ಅಪ್ಡೇಟ್ಗಳು ಕೇಳಿ ಬರುತ್ತಲೇ ಇವೆ. ಮದುವೆಗೆ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ. ಅಚ್ಚರಿ ಎಂದರೆ ‘ಆರ್ಆರ್ಆರ್’ ಟೀಂನ ಪ್ರಮುಖರು ಮುಂಬೈಗೆ ತೆರಳಿ ಆಲಿಯಾಗೆ ಶುಭ ಹಾರೈಸಲಿದ್ದಾರೆ ಎಂದು ವರದಿ ಆಗಿದೆ.

ಮದುವೆ ಮುಗಿದ ನಾಲ್ಕು ದಿನಗಳ ಬಳಿಕ ತಾಜ್ ಹೋಟೆಲ್ನಲ್ಲಿ ಆರತಕ್ಷತೆ ಹಮ್ಮಿಕೊಳ್ಳಲು ಆಲಿಯಾ ಹಾಗೂ ರಣಬೀರ್ ಕಪೂರ್ ನಿರ್ಧರಿಸಿದ್ದಾರೆ. ಈ ಪಾರ್ಟಿಗೆ ಆಲಿಯಾ ‘ಆರ್ಆರ್ಆರ್’ನ ಪ್ರಮುಖರನ್ನು ಆಹ್ವಾನಿಸಿದ್ದಾರೆ.

ಮೂಲಗಳ ಪ್ರಕಾರ ‘ಆರ್ಆರ್ಆರ್’ ಚಿತ್ರದ ನಿರ್ದೇಶಕ ರಾಜಮೌಳಿ, ಪ್ರಮುಖರಾದ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ಅವರು ವಿಶೇಷ ವಿಮಾನ ಬುಕ್ ಮಾಡಿದ್ದಾರೆ. ಹೈದರಾಬಾದ್ನಿಂದ ಮುಂಬೈಗೆ ಇದೇ ವಿಮಾನದಲ್ಲಿ ತೆರಳಲಿದ್ದಾರೆ.

ಸದ್ಯ, ಈ ಜೋಡಿ ಹಕ್ಕಿಯಿಂದ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇನ್ನು, ಮದುವೆ ದಿನಾಂಕದ ಬಗ್ಗೆಯೂ ಹಲವು ಕಡೆಗಳಲ್ಲಿ ಹಲವು ವರದಿಗಳು ಪ್ರಕಟಗೊಳ್ಳುತ್ತಿವೆ.

TV9 Kannada
Read More




