ಹೈದರಾಬಾದ್ನಲ್ಲಿ ‘ಜಿಗ್ರಾ’ ತಂಡ, ಮಿಂಚು ಹರಿಸಿದ ಆಲಿಯಾ ಭಟ್
Alia Bhatt Jigra Movie: ಆಲಿಯಾ ಭಟ್ ನಟಿಸಿ, ನಿರ್ಮಾಣ ಮಾಡಿರುವ ‘ಜಿಗ್ರಾ’ ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದ್ದು, ತೆಲುಗು ಪ್ರೇಕ್ಷಕರಿಗಾಗಿ ವಿಶೇಷವಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ಕೆಲ ಸುಂದರ ಚಿತ್ರಗಳು ಇಲ್ಲಿವೆ.
Updated on: Oct 09, 2024 | 2:49 PM

ಆಲಿಯಾ ಭಟ್ ನಟಿಸಿ, ನಿರ್ಮಾಣ ಮಾಡಿರುವ ‘ಜಿಗ್ರಾ’ ಸಿನಿಮಾ ಬಿಡುಗಡೆ ಆಗಲಿದ್ದು ಸಿನಿಮಾ ತೆಲುಗಿನಲ್ಲಿಯೂ ಬಿಡುಗಡೆ ಆಗಲಿದೆ.

ಆಲಿಯಾ ಭಟ್ ಈಗಾಗಲೇ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರ ಆಗಿರುವ ಕಾರಣದಿಂದ ‘ಜಿಗ್ರಾ’ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಲಾಗಿದೆ.

ಆಲಿಯಾ ಭಟ್ ‘ಜಿಗ್ರಾ’ ಸಿನಿಮಾದ ತೆಲುಗು ಪ್ರೀ ರಿಲೀಸ್ ಇವೆಂಟ್ ಅನ್ನು ಹೈದರಾಬಾದ್ನಲ್ಲಿ ಆಯೋಜನೆ ಮಾಡಿದ್ದರು. ಕಾರ್ಯಕ್ರಮಕ್ಕೆ ಸಮಂತಾ ಮುಖ್ಯ ಅತಿಥಿ.

‘ಜಿಗ್ರಾ’ ಪ್ರೀ ರಿಲೀಸ್ಗೆ ಕೇವಲ ಸಮಂತಾ ಮಾತ್ರವಲ್ಲದೆ, ನಟ ರಾಣಾ ದಗ್ಗುಬಾಟಿ, ನಿರ್ದೇಶಕ ತ್ರಿವಿಕ್ರಮ್ ಸಹ ಅತಿಥಿಗಳಾಗಿ ಆಗಮಿಸಿದ್ದರು.

ರಾಣಾ ದಗ್ಗುಬಾಟಿ ತಮ್ಮ ಸುರೇಶ್ ಪ್ರೊಡಕ್ಷನ್ ಮೂಲಕ ‘ಜಿಗ್ರಾ’ ಸಿನಿಮಾದ ತೆಲುಗು ಆವೃತ್ತಿಯನ್ನು ಆಂಧ್ರ, ತೆಲಂಗಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಆಲಿಯಾ ಭಟ್ ನಟಿಸಿ, ನಿರ್ಮಾಣ ಮಾಡಿರುವ ‘ಜಿಗ್ರಾ’ ಸಿನಿಮಾವನ್ನು ವಾಸನ್ ಬಾಲಾ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಕೆಲ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ.

ಆಲಿಯಾ ಭಟ್ ‘ಜಿಗ್ರಾ’ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಹಾಡು ಹಾಡಿ, ‘ನಾಟು-ನಾಟು’ ಸ್ಟೆಪ್ ಹಾಕಿ, ತೆಲುಗು ಡೈಲಾಗ್ಗಳನ್ನು ಸಹ ಹೇಳಿ ಜನರನ್ನು ರಂಜಿಸಿದ್ದಾರೆ.

ಆಲಿಯಾ ಭಟ್ ನಟನೆಯ ‘ಜಿಗ್ರಾ’ ಸಿನಿಮಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಅಕ್ಕ-ತಮ್ಮನ ಬಾಂಧವ್ಯ ತೋರಿಸಲಾಗಿದೆ. ಸಿನಿಮಾ ಅಕ್ಟೋಬರ್ 11 ಕ್ಕೆ ಬಿಡುಗಡೆ ಆಗಲಿದೆ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More




