- Kannada News Photo gallery Anikha Surendran explain the first Experience of Lip Lock Scene in Oh My Darling Movie
Anikha Surendran: ಮೊದಲ ಲಿಪ್ ಲಾಕ್ ಬಗ್ಗೆ ಅನಿಕಾ ಸುರೇಂದ್ರನ್ಗೆ ಬಂತು ಪ್ರಶ್ನೆ; ಮುಚ್ಚುಮರೆ ಇಲ್ಲದೆ ಮಾತಾಡಿದ ನಟಿ
ಈ ಚಿತ್ರ ಕಳೆದ ವಾರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅನಿಕಾ ಲಿಪ್ ಲಾಕ್ ಕೂಡ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಲಿಪ್ ಲಾಕ್ ಬಗ್ಗೆ ನಟಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಇದಕ್ಕೆ ಅವರು ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ.
Updated on: Feb 27, 2023 | 3:25 PM

ನಟಿ ಅನಿಕಾ ಸುರೇಂದ್ರನ್ ಅವರು ಬಾಲ ಕಲಾವಿದೆಯಾಗಿ ಗುರುತಿಸಿಕೊಂಡವರು. ಅಜಿತ್ ನಟನೆಯ ‘ವಿಶ್ವಾಸಂ’ ಸಿನಿಮಾ ಅನಿಕಾ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಈಗ ಅವರು ‘ಓ ಮೈ ಡಾರ್ಲಿಂಗ್’ ಹೆಸರಿನ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ.

ಈ ಚಿತ್ರ ಕಳೆದ ವಾರ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅನಿಕಾ ಲಿಪ್ ಲಾಕ್ ಕೂಡ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಲಿಪ್ ಲಾಕ್ ಬಗ್ಗೆ ನಟಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಇದಕ್ಕೆ ಅವರು ಉತ್ತರಿಸುವ ಕೆಲಸ ಮಾಡುತ್ತಿದ್ದಾರೆ.

‘ನಾನು ಸಿನಿಮಾ ಕಥೆ ಕೇಳುವಾಗ ನಿರ್ದೇಶಕರು ಕಿಸ್ಸಿಂಗ್ ಸೀನ್ ಬಗ್ಗೆ ಹೇಳಿದ್ದರು. ಆ ದೃಶ್ಯಕ್ಕೆ ಜನರು ಇಷ್ಟರಮಟ್ಟಿಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದು ನನಗೆ ಗೊತ್ತಿರಲಿಲ್ಲ’ ಎಂದು ಅನಿಕಾ ಹೇಳಿದ್ದಾರೆ.

‘ಶೂಟಿಂಗ್ ವೇಳೆ ಕಿಸ್ ಮಾಡುವಾಗ ನನಗೆ ಮುಜುಗರ ಆಗಲಿಲ್ಲ. ಕಿಸ್ಸಿಂಗ್ ದೃಶ್ಯದಲ್ಲಿ ನಟಿಸೋದು ದೊಡ್ಡ ವಿಚಾರ ಅಲ್ಲ. ಆದರೆ, ಜನರು ಅದನ್ನು ದೊಡ್ಡದಾಗಿ ಮಾಡುತ್ತಾರೆ. ಇದು ಮುಜುಗರ ತರುತ್ತದೆ’ ಎಂದು ಅವರು ಹೇಳಿದ್ದಾರೆ.

ಅನಿಕಾ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು 20 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ.