Updated on: Dec 03, 2023 | 8:49 PM
ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾ ಬಿಡುಗಡೆ ಆಗಿದ್ದು ಸಖತ್ ಹಿಟ್ ಆಗಿದೆ.
ಸಿನಿಮಾದಲ್ಲಿ ರಣ್ಬೀರ್ ಕಪೂರ್ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೊಸ ವಿಷಯವೆಂದರೆ ‘ಅನಿಮಲ್’ ಸಿನಿಮಾದ ಮುಂದಿನ ಭಾಗವೊಂದು ಸಹ ಬರಲಿದೆ.
ಈ ಕುರಿತು ‘ಅನಿಮಲ್’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿಯೇ ಸುಳಿವು ಇದೆ.
‘ಅನಿಮಲ್’ ಸಿನಿಮಾದ ಮುಂದಿನ ಭಾಗಕ್ಕೆ ‘ಅನಿಮಲ್ ಪಾರ್ಕ್’ ಎಂಬ ಹೆಸರು ಈಗಲೇ ನಿಶ್ಚಯ ಮಾಡಲಾಗಿದೆ.
ಈ ಸಿನಿಮಾದಲ್ಲಿ ರಣ್ಬೀರ್ ಒಬ್ಬರೇ ‘ಅನಿಮಲ್’ ಮುಂದಿನ ಭಾಗದಲ್ಲಿ ರಣ್ಬೀರ್ರಂತಹಾ ಇನ್ನೂ ಕೆಲವು ಅನಿಮಲ್ಗಳು ಇರಲಿದ್ದಾರೆ.
ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾದ ಬಳಿಕ ಪ್ರಭಾಸ್ರ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.