- Kannada News Photo gallery Anirudh Jatkar Talks about Jothe Jotheyali Aryavardhan Character turn in to negative shade
‘ಟ್ವಿಸ್ಟ್ ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ’; ಆರ್ಯವರ್ಧನ್ ಕ್ಯಾರೆಕ್ಟರ್ ಬದಲಾದ ಬಗ್ಗೆ ನಟ ಅನಿರುದ್ಧ ಮಾತು
ನಟ ಅನಿರುದ್ಧ ನಿರ್ವಹಿಸುತ್ತಿರುವ ಆರ್ಯವರ್ಧನ್ ಪಾತ್ರ ನಿಧಾನವಾಗಿ ನೆಗೆಟಿವ್ ಶೇಡ್ಗೆ ತಿರುಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ‘ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಒಂದು ವರ್ಗದವರು ಕಮೆಂಟ್ ಮಾಡುತ್ತಿದ್ದಾರೆ.
Updated on: Jan 06, 2022 | 6:58 PM

ತೆರೆ ಮೇಲೆ ಹೀರೋ ಆಗಿ ನೋಡುತ್ತಿದ್ದವರನ್ನು ವಿಲನ್ ಆಗಿ ನೋಡೋಕೆ ಯಾರೂ ಇಷ್ಟಪಡುವುದಿಲ್ಲ. ಅದಕ್ಕೆ ಬೇಗ ಒಗ್ಗಿಕೊಳ್ಳೋಕೆ ಅಭಿಮಾನಿಗಳಿಗೆ ಸಾಧ್ಯವಾಗುವುದಿಲ್ಲ. ಈಗ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲೂ ಅದೇ ಆಗಿದೆ.

ಈ ಧಾರಾವಾಹಿಯಲ್ಲಿ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ ನಿರ್ವಹಿಸುತ್ತಿರುವ ಆರ್ಯವರ್ಧನ್ ಪಾತ್ರ ನಿಧಾನವಾಗಿ ನೆಗೆಟಿವ್ ಶೇಡ್ಗೆ ತಿರುಗುತ್ತಿದೆ. ಇದು ಅಭಿಮಾನಿಗಳಿಗೆ ಬೇಸರ ತರಿಸಿದೆ. ‘ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಒಂದು ವರ್ಗದವರು ಕಮೆಂಟ್ ಮಾಡುತ್ತಿದ್ದಾರೆ.

ಈ ಬಗ್ಗೆ ಅನಿರುದ್ಧ ಅವರು ‘ಟಿವಿ9 ಕನ್ನಡ ಡಿಜಿಟಲ್’ ಜತೆ ಮಾತನಾಡಿದ್ದಾರೆ. ‘ಓರ್ವ ಕಲಾವಿದನಾಗಿ ಈ ಪಾತ್ರವನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದೇನೆ’ ಎಂದಿದ್ದಾರೆ ಅವರು.

ಈ ಮೊದಲು ಕೂಡ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್ಗಳು ಬಂದಿದ್ದವು. ಈಗ ಸಿಕ್ಕಿರುವ ತಿರುವನ್ನು ಯಾರೂ ಊಹಿಸಿರಲಿಲ್ಲ. ಆರ್ಯವರ್ಧನ್ ವಿಲನ್ ಎಂಬುದನ್ನು ಯಾರಿಂದಲೂ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಈ ಬಗ್ಗೆ ಅನಿರುದ್ಧ ಮಾತನಾಡಿದ್ದಾರೆ.

‘ತಿರುವುಗಳು ಇಲ್ಲದೆ ‘ಜೊತೆ ಜೊತೆಯಲಿ’ ಧಾರಾವಾಹಿ ಇಲ್ಲ. ನಾವು ಮೊದಲಿನಿಂದಲೂ ಟ್ವಿಸ್ಟ್ಗಳನ್ನು ನೀಡುತ್ತಲೇ ಬಂದಿದ್ದೇವೆ. ಆರ್ಯವರ್ಧನ್ ಪಾತ್ರಕ್ಕೆ ಸಾಕಷ್ಟು ಆಯಾಮಗಳಿವೆ. ಎಲ್ಲ ತರಹದ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ನನಗೆ ಈ ಪಾತ್ರದ ಮೂಲಕ ಸಿಕ್ಕಿದೆ. ನನ್ನ ಪಾತ್ರ ನೆಗೆಟಿವ್ ಶೇಡ್ ಪಡೆದುಕೊಂಡಿದೆ. ಒಂದು ರೀತಿಯಲ್ಲಿ ವಿಲನ್ ಎಂದೇ ಹೇಳಬಹುದು. ಕಥೆಯಲ್ಲಿ ಮುಂದೆ ಹೋಗುತ್ತಾ ಏನಾಗುತ್ತದೆ ಎಂಬುದು ನನಗೂ ಗೊತ್ತಿಲ್ಲ’ ಎಂದಿದ್ದಾರೆ ಅನಿರುದ್ಧ.

ಗುರಿ ತಲುಪೋದು ಇದ್ದೇ ಇದೆ. ಪ್ರವಾಸದ ಪ್ರತಿ ಹಂತವನ್ನೂ ನಾವು ಆನಂದಿಸಬೇಕು. ಹೀರೋನೆ ವಿಲನ್ ಆಗಿರೋದು ಕನ್ನಡ ಕಿರುತೆರೆ ಲೋಕದಲ್ಲಿ ಇದೇ ಮೊದಲು. ಈ ಹಂತವನ್ನೂ ಆನಂದಿಸೋಣ. ಈ ರೀತಿ ನಟಿಸೋಕೆ ಕಲಾವಿದನಾಗಿ ನನಗೆ ನಿಜಕ್ಕೂ ಖುಷಿ ಇದೆ. ಸಿನಿಮಾದಲ್ಲಿ ಈ ರೀತಿಯ ಪಾತ್ರ ಸಿಕ್ಕಿಲ್ಲ. ಆದರೆ, ಇಲ್ಲಿ ಸಿಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಅವರು.

‘ಇದು ಆರಂಭವಾದ್ದರಿಂದ ವೀಕ್ಷಕರಿಗೆ ಇದನ್ನು ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಆದರೆ, ಮುಂದೆ ಹೋಗುತ್ತಾ ಗೊತ್ತಾಗುತ್ತದೆ. ಓರ್ವ ಕಲಾವಿದನಾಗಿ ಈ ಪಾತ್ರವನ್ನು ನಾನು ಹೇಗೆ ಎಂಜಾಯ್ ಮಾಡುತ್ತಿದ್ದೇನೋ, ಅದೇ ರೀತಿ ವೀಕ್ಷಕರಾಗಿ ಅವರು ಈ ಪಾತ್ರವನ್ನು ನೋಡಿ ಸಂತೋಷ ಪಡಬೇಕು’ ಎಂದು ಅನಿರುದ್ಧ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಜೊತೆ ಜೊತೆಯಲಿ’ ನೀಡಿದ ದೊಡ್ಡ ಟ್ವಿಸ್ಟ್ ಬಗ್ಗೆ ವೀಕ್ಷಕರ ವಲಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡುತ್ತಿದೆ. ನಾವು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಒಂದು ವರ್ಗದವರು ಕಮೆಂಟ್




