- Kannada News Photo gallery Anushka Sharma Raise temperature in Orange swimsuit in Maldives with Virat Kohli
ಆರೆಂಜ್ ಸ್ವಿಮ್ಸೂಟ್ನಲ್ಲಿ ಮಿಂಚಿದ ಅನುಷ್ಕಾ ಶರ್ಮಾ; ಇಲ್ಲಿವೆ ಫೋಟೋಗಳು
ಸದ್ಯ, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಆಡುತ್ತಿದೆ. ಭಾರತದಲ್ಲೇ ಈ ಪಂದ್ಯಗಳು ನಡೆಯುತ್ತಿವೆ. ಈ ಸರಣಿಯಿಂದ ವಿರಾಟ್ಗೆ ವಿಶ್ರಾಂತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಅವರು ಮಾಲ್ಡೀವ್ಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ.
Updated on: Jun 12, 2022 | 1:35 PM

ನಟಿ ಅನುಷ್ಕಾ ಶರ್ಮಾ ಅವರು ವೆಕೇಶನ್ ಮೂಡ್ನಲ್ಲಿದ್ದಾರೆ. ಪತಿ ವಿರಾಟ್ ಕೊಹ್ಲಿ ಅವರ ಜತೆ ಮಾಲ್ಡೀವ್ಸ್ನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಅನುಷ್ಕಾ ಶರ್ಮಾ ಅವರು ಈ ಮೊದಲೇ ಅಪ್ಡೇಟ್ ನೀಡಿದ್ದರು. ಈಗ ಅವರು ಸ್ವಿಮ್ಸೂಟ್ನಲ್ಲಿ ಮಿಂಚಿದ್ದಾರೆ.

ಸದ್ಯ, ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ ಆಡುತ್ತಿದೆ. ಭಾರತದಲ್ಲೇ ಈ ಪಂದ್ಯಗಳು ನಡೆಯುತ್ತಿವೆ. ಈ ಸರಣಿಯಿಂದ ವಿರಾಟ್ಗೆ ವಿಶ್ರಾಂತಿ ನೀಡಲಾಗಿದೆ. ಈ ಸಂದರ್ಭದಲ್ಲಿ ಅವರು ಮಾಲ್ಡೀವ್ಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ.

ಅನುಷ್ಕಾ ಅವರು ಶೇರ್ ಮಾಡಿಕೊಂಡಿರುವ ಫೋಟೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಫೋಟೋದ ಹಾಟ್ನೆಸ್ ಬಗ್ಗೆ ಅನೇಕರು ಕಮೆಂಟ್ ಮಾಡಿದ್ದಾರೆ.

ಕೆಲವರು ‘ಕ್ಯೂಟಿ’ ಎಂದು ಹೊಗಳಿದ್ದಾರೆ. ಇನ್ನೂ ಕೆಲವರು, ಡ್ಯಾಮ್ ಹಾಟ್ ಎಂದು ಕಮೆಂಟ್ ಹಾಕಿದ್ದಾರೆ. ಸೆಲೆಬ್ರಿಟಿಗಳು ಕೂಡ ಈ ಫೋಟೋಗೆ ಕಮೆಂಟ್ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಜತೆ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅನುಷ್ಕಾ ಶರ್ಮಾ ಅವರು ಈ ಮೊದಲು ಹಂಚಿಕೊಂಡಿದ್ದರು. ಈ ಫೋಟೋ ಫ್ಯಾನ್ಸ್ ವಲಯದಲ್ಲಿ ವೈರಲ್ ಆಗಿತ್ತು.