AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ವರುಣನ ಅಬ್ಬರ: ರಸ್ತೆಗಳು ಜಲಾವೃತ; ಅಲ್ಲಲ್ಲಿ ಸಂಚಾರ ದಟ್ಟಣೆ

ಬೆಂಗಳೂರಿನಲ್ಲಿ ಮತ್ತೆ ಮಳೆ ಅಬ್ಬರಿಸಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿದೆ. ವಾಹನ ಸವಾರರು ಪರದಾಡಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮತ್ತು ಜಾಗರೂಕರಾಗಿ ಸಂಚರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಗಂಗಾಧರ​ ಬ. ಸಾಬೋಜಿ
|

Updated on:Jun 20, 2026 | 6:44 PM

Share
ಬೆಂಗಳೂರಿನಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ನಗರದ ಹಲವು ಕಡೆಗಳಲ್ಲಿ ಧಾರಾಕಾರ ಮಳೆ ಆಗಿದೆ. ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡಿದರು.

1 / 7
ಭಾರೀ ಮಳೆಯಿಂದಾಗಿ, ವೈಟ್‌ಫೀಲ್ಡ್ ನೆಕ್ಸಸ್ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಹಾಗಾಗಿ ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. (image credit blrcitytraffic)

2 / 7
ಸಾಗರ ಮೆಟ್ರೊ ಜಂಕ್ಷನ್‌ನಲ್ಲಿ ಮಳೆ ನೀರು ನಿಂತಿರುವುದರಿಂದ ಡೈರಿ ಸರ್ಕಲ್‌ ಕಡೆಗೆ ನಿಧಾನಗತಿಯ ಸಂಚಾರವಿದೆ. ಇನ್ನು ಸಿದ್ಧಾಪುರದಿಂದ ತೂಬರಹಳ್ಳಿ ಕಡೆಗೆ ಹೋಗುವ ರಸ್ತೆ ಜಲಾವೃತವಾಗಿದೆ. ವಾಹನ ಸವಾರರು ಜಾಗರೂಕರಾಗಿರಿ ಸಂಚರಿಸುವಂತೆ ಸೂಚಿಸಲಾಗಿದೆ. (image credit blrcitytraffic)

3 / 7
ಕೆಆರ್​ ಪುರ್ ಠಾಣಾ ವಾಪ್ತಿಯ ಜಿಆರ್​ಟಿ ಜಂಕ್ಷನ್ ಬಳಿ ಮಳೆ ನೀರು ನಿಂತಿರುವುದರಿಂದ ನಗರದ ಕಡೆಯಿಂದ ಹೊಸಕೋಟೆ ಮಾರ್ಗವಾಗಿ ಹಾಗೂ ಭಟ್ಟರಹಳ್ಳಿ ಕಡೆಯಿಂದ ನಗರದ ಕಡೆಗೆ ವಾಹನಗಳ ಸಂಚಾರ ನಿಧಾನಗತಿಯಲ್ಲಿದೆ.  (image credit blrcitytraffic)

4 / 7
ಧಾರಾಕಾರ ಮಳೆಯಿಂದಾಗಿ ಯಲಹಂಕ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದು, ಏರ್‌ಪೋರ್ಟ್‌ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿದೆ. (image credit blrcitytraffic)

5 / 7
ವರ್ತೂರು, ಗುಂಜೂರು ಪ್ರದೇಶದ ಕೆಲವು ಭಾಗಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿವೆ. ವಾಹನ ಸವಾರರು ಜಾಗರೂಕರಾಗಿ ಸಂಚರಿಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. (image credit blrcitytraffic)

6 / 7
ಇನ್ನು ನಗರದ ಕೆಇಬಿ ಜಂಕ್ಷನ್​ನಿಂದ ಹೆಣ್ಣೂರು ಕಡೆಗೆ, ವರ್ತೂರು ಕೋಡಿಯಿಂದ ವೈಟ್‌ಫೀಲ್ಡ್ ಕಡೆಗೆ, ಹೆಗಡೆ ನಗರದಿಂದ ಥಣಿಸಂದ್ರ ಕಡೆಗೆ, ಮಡಿವಾಳ ಅಯ್ಯಪ್ಪ ಅಂಡರ್ ಪಾಸ್​ನಿಂದ ಮಡಿವಾಳ ಪಿಎಸ್ ಕಡೆಗೆ, ಸಿದ್ದಾಪುರದಿಂದ ವಿಬ್ಗ್ಯೋರ್ ಯು-ಟರ್ನ್ ಕಡೆಗೆ, ಬಿ-ನಾರಾಯಣಪುರದಿಂದ ನಗರದ ಕಡೆಗೆ ಮತ್ತು ಫೀನಿಕ್ಸ್ ಮಾಲ್ ಮಹದೇವಪುರ  ದಿಂದ ಹೂಡಿ ಕಡೆಗಳಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತಿರುವುದರಿಂದ ಸಂಚಾರ ದಟ್ಟಣೆ ಉಂಟಾಗಿದೆ. (image credit blrcitytraffic)

7 / 7

Published On - 6:42 pm, Sat, 20 June 26

Follow Us