ಬಿಗ್ಬಾಸ್ ಮನೆಯಲ್ಲಿ ಹೊಸ ಹೊಸ ಸ್ನೇಹಗಳು ಚಿಗುರಿಕೊಳ್ಳುತ್ತಿವೆ. ಕಾರ್ತಿಕ್-ಸಂಗೀತಾ ಜೋಡಿ, ಸ್ನೇಹಿತ್ ಮತ್ತು ನಮ್ರತಾ ನಡುವಿನ ಹೊಂದಾಣಿಕೆಯ ಜೊತೆಗೇ ಗಮನಸೆಳೆದಿರುವ ಇನ್ನೊಂದು ಜೋಡಿ ಮೈಕಲ್ ಮತ್ತು ಇಶಾನಿ ಅವರದ್ದು. ಮೈಕಲ್ ಇಶಾನಿ ಇಬ್ಬರೂ ಕನ್ನಡ ಮೂಲದವರು, ಆದರೆ ಕರ್ನಾಟಕದ ಆಚೆಗೇ ಹುಟ್ಟಿ ಬೆಳೆದವರು. ಹಾಗಾಗಿ ಇಬ್ಬರೂ ಕಷ್ಟಪಟ್ಟೇ ಕನ್ನಡ ಮಾತಾಡುತ್ತಾರೆ. ಇದೇ ಅವರ ನಡುವಿನ ಸ್ನೇಹಕ್ಕೆ ಸೇತುವಾಯ್ತೋ ಏನೋ