- Kannada News Photo gallery Bigg Boss Kannada: Crack in Karthik Mahesh and Tanisha Kuppanda friendship
ಫಿನಾಲೆಯ ಟಿಕೆಟ್ ಪಡೆಯಲು ಮನೆಯ ಸ್ಪರ್ಧಿಗಳಲ್ಲಿ ಭಾರಿ ಪೈಪೋಟಿ
Bigg Boss Kannada: ಫಿನಾಲೆಗೆ ಹತ್ತಿರ ಬಂದಂತೆ ಬಿಗ್‌ಬಾಸ್ ಮನೆಯ ಸದಸ್ಯರ ನಡುವಿನ ಸಂಬಂಧಗಳು ಬದಲಾಗುತ್ತಿವೆ. ಗೆಳೆಯರು ವೈರಿಗಳಾಗುತ್ತಿದ್ದರು. ವೈರಿಗಳು ಮಿತ್ರರಾಗುತ್ತಿದ್ದಾರೆ.
Updated on: Jan 10, 2024 | 9:06 PM

ಫಿನಾಲೆಯ ವೇದಿಕೆ ಹತ್ತಲು ಬಿಗ್‌ಬಾಸ್ ಮನೆಯೊಳಗೆ ಪೈಪೋಟಿ ಜೋರಾಗಿಯೇ ನಡೆದಿದೆ. ಇದಕ್ಕೆ ಅನುಗುಣವಾಗಿ ಸ್ವತಃ ಬಿಗ್‌ಬಾಸ್ ಎಲ್ಲ ಸ್ಪರ್ಧಿಗಳಿಗೂ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ.

ನಿನ್ನೆ ನಮೃತಾ ಅವರಿಗೆ ತಮ್ಮ ಎದುರಾಳಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದ್ದರು. ನಮೃತಾ, ವರ್ತೂರು ಸಂತೋಷ್, ಪ್ರತಾಪ್ ಮತ್ತು ಸಂಗೀತಾ ಅವರನ್ನು ಎದುರಾಳಿಗಳನ್ನಾಗಿ ಆಯ್ದುಕೊಂಡಿದ್ದರು. ಆದರೆ ಎಲ್ಲರಿಗಿಂತ ಮೊದಲು ಅವರೇ ಸ್ಪರ್ಧೆಯಿಂದ ಔಟ್ ಆಗಿದ್ದರು.

ಈ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ಜಯಶಾಲಿಗಳಾಗಿದ್ದಾರೆ. ಎರಡನೇ ಸ್ಥಾನವನ್ನು ಪ್ರತಾಪ್ ಪಡೆದುಕೊಂಡಿದ್ದಾರೆ. ವೈಯಕ್ತಿಕ ಟಾಸ್ಕ್‌ನ ಮುಂದುವರಿದ ಭಾಗ ಇಂದು ನಡೆಯಲಿದೆ.

ಈ ಬಾರಿ ಬಿಗ್‌ಬಾಸ್ ತನಿಷಾ ಅವರಿಗೆ ಟಾಸ್ಕ್ ಕೊಟ್ಟು, ತಮ್ಮ ಎದುರಾಳಿಗಳನ್ನು ಆಯ್ದುಕೊಳ್ಳುವ ಅಧಿಕಾರನ್ನು ಕೊಟ್ಟಿದ್ದಾರೆ. ಈ ವಾರದ ನಾಮಿನೇಷನ್‌ನಲ್ಲಿ ತನಿಷಾ ಅವರನ್ನು ನಾಮಿನೇಟ್ ಮಾಡಿದ್ದ ಕಾರ್ತೀಕ್, ಈಗ ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳುವಂತೆ ತನಿಷಾ ಬಳಿ ಕನ್ವಿನ್ಸ್ ಮಾಡುತ್ತಿದ್ದಾರೆ.

ಆದರೆ ಇದಕ್ಕೆ ಜಗ್ಗಿಲ್ಲ. ‘ಬೇರೆವರು ಸಜಷನ್ ಕೊಟ್ರೆ ಕೇಳಿಸ್ಕೋತೀಯಾ, ನಾನು ಮಾತಾಡೋಕೆ ಬಂದ್ರೆ ಉಲ್ಟಾ ಮಾತಾಡ್ತೀಯಾ?’ ಎಂದು ಕಾರ್ತಿಕ್ ಕೇಳಿದ್ದಾರೆ. ಅದಕ್ಕೆ ತನಿಷಾ, ‘ನನಗೂ ಬ್ರೇನ್ ಇದೆ. ನೀನು ಹೇಳ್ಕೊಟ್ಟೇ ತಿಳ್ಕೋಬೇಕಾಗಿಲ್ಲ’ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.

ಈ ಸೀಸನ್ ಆರಂಭದಿಂದಲೂ ಸ್ನೇಹಿತರಾಗಿದ್ದ, ಒಬ್ಬರಿಗೊಬ್ಬರು ಬೆಂಬಲಕ್ಕೆ ನಿಂತಿದ್ದ ತನಿಷಾ ಮತ್ತು ಕಾರ್ತೀಕ್ ನಡುವೆ ಈಗ ಬಿರುಕು ಮೂಡಿದಂತಿದೆ. ಫಿನಾಲೆಗೆ ನೇರ ಪ್ರವೇಶ ಪಡೆಯುವ ಸ್ಪರ್ಧಿ ಯಾರೆಂಬುದು ಮಾತ್ರ ಇನ್ನೂ ಕುತೂಹಲಕಾರಿ ಪ್ರಶ್ನೆಯಾಗಿಯೇ ಉಳಿದಿದೆ.

ಇದೆಲ್ಲದರ ನಡುವೆ ಈ ವಾರ ನಾಮಿನೇಟ್ ಆಗದಿರುವ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಯಾವುದೇ ಟೆನ್ಷನ್ ಇಲ್ಲದೆ ಆರಾಮವಾಗಿದ್ದಾರೆ.



















