- Kannada News Photo gallery Bigg Boss Kannada Season 9 finale Contestant Roopesh Shetty Rakesh adigas are Tough competitor
ಬಿಗ್ ಬಾಸ್ ಫಿನಾಲೆಯಲ್ಲಿ ಯಾವ ಸ್ಪರ್ಧಿ ಹೆಚ್ಚು ಸ್ಟ್ರಾಂಗ್? ಯಾರಿಗಿದೆ ಕಪ್ ಗೆಲ್ಲುವ ಚಾನ್ಸ್?
BBK 9 Finale Winner: ರೂಪೇಶ್ ಶೆಟ್ಟಿ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಒಟಿಟಿ ಸೀಸನ್ನಲ್ಲಿ ಟಾಪ್ನಲ್ಲಿದ್ದರು. ಈ ಬಾರಿ ಟಾಪ್ ಐದರಲ್ಲಿ ಅವರು ಸ್ಥಾನ ಪಡೆದಿದ್ದಾರೆ. ರೂಪೇಶ್ ಗೆಲ್ಲುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.
Updated on: Dec 30, 2022 | 3:50 PM

‘ಬಿಗ್ ಬಾಸ್ ಕನ್ನಡ ಸೀಸನ್ 9’ರ ಫಿನಾಲೆ ಇಂದು (ಡಿಸೆಂಬರ್ 30) ಹಾಗೂ ನಾಳೆ (ಡಿಸೆಂಬರ್ 31) ನಡೆಯಲಿದೆ. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ, ದೀಪಿಕಾ ದಾಸ್ ಹಾಗೂ ರಾಕೇಶ್ ಅಡಿಗ ಬಿಗ್ ಬಾಸ್ ಫಿನಾಲೆಯಲ್ಲಿದ್ದಾರೆ.

ರೂಪೇಶ್ ಶೆಟ್ಟಿ ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಒಟಿಟಿ ಸೀಸನ್ನಲ್ಲಿ ಟಾಪ್ನಲ್ಲಿದ್ದರು. ಈ ಬಾರಿ ಟಾಪ್ ಐದರಲ್ಲಿ ಅವರು ಸ್ಥಾನ ಪಡೆದಿದ್ದಾರೆ. ರೂಪೇಶ್ ಗೆಲ್ಲುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

ರಾಕೇಶ್ ಅಡಿಗ ಕೂಡ ಟಫ್ ಸ್ಪರ್ಧಿ ಆಗಿದ್ದಾರೆ. ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಮಧ್ಯೆ ಸಾಕಷ್ಟು ಕಾಂಪಿಟೇಷನ್ ಇದೆ. ಫಿನಾಲೆಯಲ್ಲಿ ಸುದೀಪ್ ಅಕ್ಕಪಕ್ಕ ನಿಲ್ಲುವ ಸ್ಪರ್ಧಿ ಇವರು ಎಂದು ಅನೇಕರು ಊಹಿಸುತ್ತಿದ್ದಾರೆ.

ದಿವ್ಯಾ ಉರುಡುಗ ಅವರು ಕಳೆದ ಸೀಸನ್ನಲ್ಲಿ ಎರಡನೇ ರನ್ನರ್ ಅಪ್ ಆಗಿದ್ದರು. ಈ ಬಾರಿ ಟಾಪ್ ಐದರಲ್ಲಿದ್ದಾರೆ. ಅರವಿಂದ್ ಫ್ಯಾನ್ಸ್ ಕೂಡ ದಿವ್ಯಾಗೆ ವೋಟ್ ಮಾಡುತ್ತಿದ್ದಾರೆ.

ನವೀನರ ಪೈಕಿ ಉಳಿದುಕೊಂಡಿದ್ದು ರೂಪೇಶ್ ರಾಜಣ್ಣ ಮಾತ್ರ. ಅವರು ತಮ್ಮ ಭಿನ್ನ ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಎಲ್ಲರಿಗೂ ಅವರು ಸ್ಪರ್ಧೆ ನೀಡುತ್ತಿದ್ದಾರೆ.

ದೀಪಿಕಾ ದಾಸ್ ಈ ಸೀಸನ್ನಲ್ಲಿ ಎಲಿಮಿನೇಟ್ ಆಗಿದ್ದರು. ವೈಲ್ಡ್ ಕಾರ್ಡ್ ಮೂಲಕ ಅವರು ಮತ್ತೆ ಎಂಟ್ರಿ ಪಡೆದರು. ಅವರು ಎಲ್ಲರಿಗೂ ಸ್ಪರ್ಧೆ ನೀಡುತ್ತಿದ್ದಾರೆ.




