Travel: ಮನಸ್ಸಿಗೆ ಮುದ ನೀಡಬಲ್ಲ ಭಾರತದ ಸ್ವಚ್ಛ ನೀಲಿ ಬೀಚ್ಗಳು
Blue beaches of India: ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.
Updated on:May 13, 2022 | 4:02 PM

Blue Water Beach In India

Radha Nagar Beach

ಘೋಘಲಾ ಬೀಚ್, ದೀವ್: ಭಾರತದ ಈ ಬೀಚ್ನಲ್ಲಿ ವಾಟರ್ ಸ್ಕೂಟರ್ ಪ್ಯಾರಾಸೆಲಿಂಗ್ ರೀತಿಯ ಅಡ್ವೆಂಚರಸ್ ಚಟುವಟಿಕೆಗಳು ನಡೆಯುತ್ತವೆ. ಆದರೆ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಹೀಗಾಗಿ ನೀರು ಕೂಡ ಸ್ವಚ್ಛವಿರುತ್ತದೆ.

ಶಿವರಾಜ್ಪುರ ಬೀಚ್, ದ್ವಾರಕ: ಇದು ಗುಜರಾತ್ನ ಅತ್ಯಾಕರ್ಶಕ ಬೀಚ್ಗಳಲ್ಲಿ ಒಂದು ಇಲ್ಲಿನ ರುಕ್ಮಿಣಿ ಮಂದಿರದಿಂದ ಕೆಲವೇ ಕೆಲವು ನಿಮಿಷಗಳ ದೂರದಲ್ಲಿದೆ ಈ ಪ್ರದೇಶಕ್ಕೆ ನೀವು ಕುಟುಂಬ ಸಮೇತರಾಗಿ ಹೋಗಬಹುದಾಗಿದೆ.

ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ.

ಗೋಲ್ಡನ್ ಬೀಚ್, ಓಡಿಶಾ: ಓಡಿಶಾದ ಈ ಗೋಲ್ಡನ್ ಬೀಚ್ ಭಾರತದ ಸ್ವಚ್ಛ ಬೀಚ್ಗಳಲ್ಲಿ ಒಂದು ಎಂದೇ ಹೇಳಬಹುದು, ಇಲ್ಲಿ ಸೋಲಾರ್ ಎನರ್ಜಿಯಿಂದ ನಡೆಯುವ ಸಾಕಷ್ಟು ವ್ಯವಸ್ಥೆಗಳಿವೆ, ಈ ನೀಲಿ ನೀರಿರುವ ಬೀಚ್ನ ದಡದಲ್ಲಿ ನೀವು ನಿಮ್ಮ ಮಕ್ಕಳ ಜತೆ ಎಂಜಾಯ್ ಮಾಡಬಹುದಾಗಿದೆ.
Published On - 3:19 pm, Fri, 13 May 22

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್ ಇಂಡಿಯಾ ವೆಬ್ಸೈಟ್ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್ನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ
Read More



