- TV9 Kannada Photo gallery Chaitra kundapura feels Labor Pain here is What She explain Cinema News in Kannada
‘ಹೆರಿಗೆ ನೋವು ಹೇಗಿರಬಹುದು ಅಂತ ಆ ಒಂದು ಘಟನೆಯಿಂದ ಗೊತ್ತಾಯ್ತು’; ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಹೆರಿಗೆ ನೋವಿನ ಬಗ್ಗೆ ಮಾತನಾಡಿದ್ದಾರೆ. ಅದು ಯಾವ ರೀತಿಯಲ್ಲಿ ಇರಬಹುದು ಎಂದು ಅವರು ಊಹಿಸಿಕೊಂಡಿದ್ದಾರೆ. ಅಲ್ಲದೆ, ಅದೇ ರೀತಿಯ ಅನುಭವ ಅವರಿಗೆ ಆಗಿರೋ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಏಕೆ ಹೀಗೆ ಹೇಳಿದರ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
Updated on:Dec 10, 2024 | 11:55 AM

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಸದಾ ಒದಿಲ್ಲೊಂದು ವಿಚಾರಕ್ಕೆ ಚರ್ಚೆ ಆಗುತ್ತಲೇ ಇರುತ್ತಾರೆ. ಈಗ ಚೈತ್ರಾ ಅವರು ನೀಡಿರೋ ಒಂದು ಹೇಳಿಕೆ ಗಮನ ಸೆಳೆಯುತ್ತಿದೆ.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ಹೆರಿಗೆ ನೋವಿನ ಬಗ್ಗೆ ಮಾತನಾಡಿದ್ದಾರೆ. ಅದು ಯಾವ ರೀತಿಯಲ್ಲಿ ಇರಬಹುದು ಎಂದು ಅವರು ಊಹಿಸಿಕೊಂಡಿದ್ದಾರೆ. ಅಲ್ಲದೆ, ಅದೇ ರೀತಿಯ ಅನುಭವ ಅವರಿಗೆ ಆಗಿರೋ ಬಗ್ಗೆ ಹೇಳಿಕೊಂಡಿದ್ದಾರೆ.

ಕಳೆದ ವಾರ ಯಾರನ್ನೂ ಎಲಿಮಿನೇಟ್ ಮಾಡಿಲ್ಲ. ಆದರೆ, ಚೈತ್ರಾಗೆ ಪ್ರ್ಯಾಂಕ್ ಮಾಡಲಾಯಿತು. ಅವರನ್ನು ಕನ್ಫೆಷನ್ರೂಂನಲ್ಲಿ ಕೂರಿಸಲಾಗಿತ್ತು. ತಾವು ಎಲಿಮಿನೇಟ್ ಆದೆ ಎಂದು ಅವರು ಭಾವಿಸಿದ್ದರು. ಆದರೆ, ಎಲಿಮಿನೇಟ್ ಆಗದೆ ಅವರು ಉಳಿದುಕೊಂಡರು. ಆ ಬಳಿಕ ಬಂದ ಅವರು ಮಾತನಾಡಿದ್ದಾರೆ.

‘ಹೆರಿಗೆ ನೋವು ಹೆಣ್ಣುಮಕ್ಕಳಿಗೆ ಪುನರ್ಜನ್ಮ ಎನ್ನುತ್ತಾರೆ. ಅದು ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಎಲಿಮಿನೇಟ್ ಆದಾಗ ಆಗುತ್ತಿದ್ದ ಫೀಲ್ ಇದೆಯಲ್ಲ. ಬಹುಶಃ ಹೆರಿಗೆ ನೋವು ಕೂಡ ಹೀಗೆಯೇ ಇರುತ್ತದೆ ಅನಿಸುತ್ತದೆ’ ಎಂದಿದ್ದಾರೆ ಚೈತ್ರಾ.

ಚೈತ್ರಾ ಕುಂದಾಪುರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಅವರು ಅನಾರೋಗ್ಯ ಕಾರಣಕ್ಕೆ ಒಮ್ಮೆ ಹೊರಕ್ಕೆ ಹೋಗಿ ಬಂದರೆ, ಮತ್ತೊಮ್ಮೆ ಕೋರ್ಟ್ ಕಾರಣಕ್ಕೆ ಹೊರಕ್ಕೆ ಹೋಗಿ ಬಂದಿದ್ದರು.
Published On - 11:54 am, Tue, 10 December 24

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More



