ಗಣೇಶ ದರ್ಶನಕ್ಕೆ ಬಂದ ಅತ್ಯಂತ ದುಬಾರಿ ಶ್ವಾನ: ಸೆಲ್ಫಿಗೆ ಮುಗಿಬಿದ್ದ ಜನ
Cadaboms Hayder Caucasian Shepherd Dog: ಚಿಕ್ಕಬಳ್ಳಾಪುರದ ಮುನಿಸಿಪಲ್ ಬಡಾವಣೆಯಲ್ಲಿ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘ ಗಣೇಶೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾರತೀಯ ಶ್ವಾನ ತಳಿಯ ಸಂಘದ ಅದ್ಯಕ್ಷ ಸತೀಶ ಹಾಗೂ ಅವರ ಕಾಡಬೊಮ್ ಹೈಡರ್ ಕಾಕೇಶಿಯನ್ ಶೆಪರ್ಡ್ ಡಾಗ್ ಕರೆಸಿದ್ದರು. ಅಂತ ಸುಂದರ ಬೃಹತ್ ಡಾಗ್ ಒಂದು ಗಣೇಶ ದರ್ಶನಕ್ಕೆ ಬಂದಿದ್ದೆ ತಡ, ಜನ ಕೇಳಬೇಕಾ? ನಾಮುಂದು, ತಾಮುಂದು ಅಂತ ಮುಗಿದ್ದು ತಮ್ಮ ಮೊಬೈಲ್ಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದಾರೆ.
Updated on:Sep 24, 2023 | 6:31 PM

ಅದು ಮೊದಲೇ ಹೇಳಿ ಕೇಳಿ ಜಗತ್ತಿನ ಅತ್ಯಂತ ದುಬಾರಿ ಶ್ವಾನ. ಅದರ ಬೆಲೆ ಬರೋಬ್ಬರಿ 20 ಕೋಟಿ ರೂಪಾಯಿಯಂತೆ. ಅದು ನೋಡಲು ಸಿಂಹ ಹುಲಿಗಿಂತ ಕಡಿಮೆ ಏನಿಲ್ಲ.

ಅಂತ ಸುಂದರ ಬೃಹತ್ ಡಾಗ್ ಒಂದು ಗಣೇಶ ದರ್ಶನಕ್ಕೆ ಬಂದಿದ್ದೆ ತಡ, ಜನ ಕೇಳಬೇಕಾ? ನಾಮುಂದು, ತಾಮುಂದು ಅಂತ ಮುಗಿದ್ದು ತಮ್ಮ ಮೊಬೈಲ್ಗಳಲ್ಲಿ ಸೆಲ್ಫಿ ತೆಗೆದುಕೊಂಡು ಸಂತಸಪಟ್ಟಿದ್ದಾರೆ.

ಚಿಕ್ಕಬಳ್ಳಾಪುರದ ಮುನಿಸಿಪಲ್ ಬಡಾವಣೆಯಲ್ಲಿ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘ ಗಣೇಶೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾರತೀಯ ಶ್ವಾನ ತಳಿಯ ಸಂಘದ ಅದ್ಯಕ್ಷ ಸತೀಶ ಹಾಗೂ ಅವರ ಕಾಡಬೊಮ್ ಹೈಡರ್ ಕಾಕೇಶಿಯನ್ ಶೆಪರ್ಡ್ ಡಾಗ್ ಕರೆಸಿದ್ದರು.

ಇದು ಜಗತ್ತಿನ ಅತ್ಯಂತ ದುಬಾರಿ ಶ್ವಾನವಂತೆ. ಇದರ ತೂಕ 120 ಕೆ.ಜಿ. ನೋಡಲು ಸಿಂಹದ ಮರಿಯ ರೀತಿ ಇದೆ. ಆದರೆ ಬೋಗಲ್ಲ ಕಚ್ಚಲ್ಲ, ನಾಜುಕಿನಲ್ಲಿ ನಾಜುಕು.

ಇಂಥ ವಿಶೇಷ ಡಾಗ್, ಚಿಕ್ಕಬಳ್ಳಾಫುರದಲ್ಲಿ ಪ್ರತ್ಯೇಕ್ಷವಾಗಿದ್ದೆ ತಡ ಜನ ಅದೇಲ್ಲಿದ್ದರೊ ಏನೋ ಡಾಗ್ ನೋಡಲು ಹಾಗೂ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಇದೆ ವೇಳೆ ಟಿವಿ9 ಜೊತೆ ಮಾತನಾಡಿದ ಶ್ವಾನದ ಮಾಲಿಕ ಸತೀಶ್, ತಮ್ಮ ನಾಯಿಯ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು. ಸಿಂಹದ ರೀತಿ ಹಾಗೂ ಮನುಷ್ಯರನ್ನೆ ಮೀರಿಸುವ ಹಾಗೆ ನಾಯಿಗಳು ಇರುತ್ತವೆ ಅನ್ನೊದನ್ನು ಜನ ನೋಡಿ ಸಂತಸಗೊಂಡರು.
Published On - 6:28 pm, Sun, 24 September 23

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.
Read More
