- Kannada News Photo gallery Children's Day 2022: Vanshika Anjani Kashyap gets huge popularity from Colors Kannada Tv shows
Children’s Day 2022: ಕಿರುತೆರೆಯ ಸೂಪರ್ ಸ್ಟಾರ್ ವಂಶಿಕಾ; ಈ ಪುಟಾಣಿಯ ಪ್ರತಿಭೆಗೆ ಫಿದಾ ಆಗದವರಿಲ್ಲ
Vanshika Anjani Kashyap: ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ದಿನದಿಂದ ದಿನಕ್ಕೆ ಆಕೆಯ ಖ್ಯಾತಿ ಹೆಚ್ಚಾಗುತ್ತಿದೆ.
Updated on:Nov 14, 2022 | 11:21 AM

Children's Day 2022: Vanshika Anjani Kashyap gets huge popularity from Colors Kannada Tv shows

Children's Day 2022: Vanshika Anjani Kashyap gets huge popularity from Colors Kannada Tv shows

‘ಕಲರ್ಸ್ ಕನ್ನಡ’ ವಾಹಿನಿಯ ‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದಲ್ಲಿ ತಾಯಿ ಯಶಸ್ವಿನಿ ಜೊತೆ ವಂಶಿಕಾ ಭಾಗವಹಿಸಿದಳು. ಆಕೆಯ ಪ್ರತಿಭೆ ಏನೆಂಬುದು ಜಗತ್ತಿಗೆ ತಿಳಿಯಲು ಈ ವೇದಿಕೆ ಕಾರಣ ಆಯಿತು. ಆ ಶೋನಲ್ಲಿ ವಂಶಿಕಾ ಟ್ರೋಫಿ ಗೆದ್ದಳು.

‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋನಲ್ಲೂ ವಂಶಿಕಾ ಭಾಗವಹಿಸಿದ್ದಳು. ಆಕೆಯ ನಟನೆಗೆ ಹಿರಿಯ ನಟಿ ಶ್ರುತಿ ಕೂಡ ತಲೆ ಬಾಗಿದರು. ಎಮೋಷನಲ್ ದೃಶ್ಯಗಳನ್ನು ಲೀಲಾ ಜಾಲವಾಗಿ ಆಕೆ ನಟಿಸಿ ತೋರಿಸಿದ ಪರಿ ಕಂಡು ವೀಕ್ಷಕರು ಫಿದಾ ಆದರು.

ನಿರೂಪಕಿ ಆಗಿಯೂ ವಂಶಿಕಾ ಸೈ ಎನಿಸಿಕೊಂಡಿದ್ದಾಳೆ. ನಿರಂಜನ್ ಜೊತೆ ಸೇರಿ ‘ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2’ ನಿರೂಪಣೆಯನ್ನು ವಂಶಿಕಾ ಮಾಡುತ್ತಿದ್ದಾಳೆ. ಸಿನಿಮಾಗಳಿಂದಲೂ ಆಕೆಗೆ ಅವಕಾಶಗಳು ಹರಿದುಬರುತ್ತಿವೆ.

ಸೋಶಿಯಲ್ ಮೀಡಿಯಾದಲ್ಲಿ ವಂಶಿಕಾಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ದಿನದಿಂದ ದಿನಕ್ಕೆ ಆಕೆಯ ಖ್ಯಾತಿ ಹೆಚ್ಚಾಗುತ್ತಿದೆ. ವಂಶಿಕಾ ಇನ್ನಷ್ಟು ಯಶಸ್ಸು ಪಡೆಯಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
Published On - 11:21 am, Mon, 14 November 22




