AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಖಂಡಿತವಾಗಿಯೂ ಈ ಬಾರಿ ನೀವು ಈ 7 ಆಟಗಾರರನ್ನು ಮಿಸ್ ಮಾಡಿಕೊಳ್ತೀರಿ

IPL 2022: ಐಪಿಎಲ್​ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್​ಮನ್​ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...

TV9 Web
| Edited By: |

Updated on: Mar 26, 2022 | 4:06 PM

Share
 ಐಪಿಎಲ್ ಸೀಸನ್ 15 ರಂಗೇರುತ್ತಿದೆ. ಆದರೆ ಕಳೆದ 14 ಸೀಸನ್​ಗೆ ಒಂದು ಲೆಕ್ಕ, ಈ ಬಾರಿ ಮತ್ತೊಂದು ಲೆಕ್ಕ ಎಂಬಂತಾಗಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್. ಏಕೆಂದರೆ ಈ ಬಾರಿ ಐಪಿಎಲ್​ನಲ್ಲಿ ಹಲವು ಬದಲಾವಣೆಗಳಾಗಿವೆ. ಅದರಲ್ಲೂ ಮುಖ್ಯವಾಗಿ 2 ಹೊಸ ತಂಡಗಳ ಸೇರ್ಪಡೆ. ಅದರಂತೆ ಈ ಬಾರಿ 10 ತಂಡಗಳು ಕಣಕ್ಕಿಳಿಯುತ್ತಿರುವುದು ವಿಶೇಷ.

1 / 9
 ಇನ್ನು ಐಪಿಎಲ್​ನಲ್ಲಿ ನಾಯಕರಾಗಿಯೇ ನೋಡಿದ್ದ ಕೆಲ ಆಟಗಾರರು ಈ ಬಾರಿ ಕೇವಲ ಆಟಗಾರರಾಗಿ ಕಾಣಿಸಿಕೊಳ್ತಿರುವುದು ಮತ್ತೊಂದು ಮತ್ತೊಂದು ವಿಶೇಷ ಎನ್ನಬಹುದು. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಟೂರ್ನಿಗೆ ವಿದಾಯ ಹೇಳಿದ ನೋವು ಅಭಿಮಾನಿಗಳನ್ನು ಕಾಡುತ್ತಿದೆ. ಹೀಗಾಗಿ ಕಳೆದ 14 ಸೀಸನ್ ಐಪಿಎಲ್​ ನೋಡಿದ ಅನುಭವ ಈ ಬಾರಿ ಸಿಗಬೇಕೆಂದಿಲ್ಲ. ಏಕೆಂದರೆ ಐಪಿಎಲ್​ನ ದಾಖಲೆಗಳ ಸರದಾರ, ಸ್ಪೋಟಕ ಬ್ಯಾಟ್ಸ್​ಮನ್​ಗಳು ಎನಿಸಿಕೊಂಡ ಆಟಗಾರರೇ ಈ ಬಾರಿ ಇಲ್ಲ. ಹಾಗಿದ್ರೆ ಈ ಬಾರಿ ಐಪಿಎಲ್​ನಲ್ಲಿ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿರುವ ಆಟಗಾರರು ಯಾರೆಲ್ಲಾ ನೋಡೋಣ...

2 / 9
ಎಬಿ ಡಿವಿಲಿಯರ್ಸ್​: ಆರ್​ಸಿಬಿ ತಂಡದ ಆಪತ್ಬಾಂಧವ ಎಂದೇ ಖ್ಯಾತರಾಗಿದ್ದ ಎಬಿಡಿ ಈ ಬಾರಿ ತಂಡದಲ್ಲಿಲ್ಲ ಎಂಬುದೇ ಅಭಿಮಾನಿಗಳಿಗೆ ದೊಡ್ಡ ನಿರಾಸೆ. ಏಕೆಂದರೆ ಆರ್​ಸಿಬಿ ಪರ ಅದೆಂಥಂತಹ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಶ್ರೇಯಸ್ಸು ಎಬಿಡಿಗೆ ಸಲ್ಲುತ್ತೆ. ಹೀಗಾಗಿಯೇ ವಿರಾಟ್ ಕೊಹ್ಲಿಯಷ್ಟೇ ಆರ್​ಸಿಬಿ ಅಭಿಮಾನಿಗಳಿಗೆ ಎಬಿಡಿಯನ್ನು ಇಷ್ಟಪಟ್ಟಿದ್ದರು. ಆದರೆ ಇದೇ ಮೊದಲ ಬಾರಿಗೆ ಎಬಿಡಿ ಇಲ್ಲದೆ ಆರ್​ಸಿಬಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಐಪಿಎಲ್ ನೋಡಲಿದ್ದಾರೆ.

3 / 9
 ಕ್ರಿಸ್ ಗೇಲ್: ಎಬಿಡಿ ಬಿಟ್ಟರೆ ಆರ್​ಸಿಬಿ ಅಭಿಮಾನಿಗಳು ಅತೀ ಹೆಚ್ಚು ಇಷ್ಟಪಟ್ಟಿದ್ದ ವಿದೇಶಿ ಆಟಗಾರನೆಂದರೆ ಕ್ರಿಸ್ ಗೇಲ್. ಆರ್​ಸಿಬಿಯಿಂದ ಪಂಜಾಬ್ ಕಿಂಗ್ಸ್ ತಂಡಕ್ಕೆ ಹೋದರೂ ಗೇಲ್ ಅಬ್ಬರವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ  ಗೇಲ್ ಕೂಡ ಐಪಿಎಲ್​ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಬಾರಿ ಕ್ರಿಸ್ ಗೇಲ್ ಅವರ ಆರ್ಭಟ ಕೂಡ ಐಪಿಎಲ್​ನಲ್ಲಿ ಕಾಣಿಸಿಕೊಳ್ಳುವುದಿಲ್ಲ.

4 / 9
 ಸುರೇಶ್ ರೈನಾ: ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅನ್​ಸೋಲ್ಡ್ ಆಗಿದ್ದೇ ಅಚ್ಚರಿ. ಸಿಎಸ್​ಕೆ ತಂಡದ ಆಧಾರಸ್ತಂಭವೇ ಆಗಿದ್ದ ರೈನಾ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಹೀಗಾಗಿ ಸಿಎಸ್​ಕೆ, ರೈನಾ ಅಭಿಮಾನಿಗಳು ಐಪಿಎಲ್​ನಲ್ಲಿ ಎಡಗೈ ದಾಂಡಿಗನನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

5 / 9
 ಇಯಾನ್ ಮೋರ್ಗನ್: ಕಳೆದ ಬಾರಿ ಕೆಕೆಆರ್ ತಂಡವನ್ನು ಫೈನಲ್​ಗೆ ಕೊಂಡೊಯ್ದ ನಾಯಕ ಇಯಾನ್ ಮೋರ್ಗನ್ ಕೂಡ ಈ ಬಾರಿ ಕಾಣಿಸಿಕೊಳ್ಳುವುದಿಲ್ಲ. ಐಪಿಎಲ್​ನ ಕೂಲ್ ಕ್ಯಾಪ್ಟನ್​ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮೋರ್ಗನ್ ಅವರನ್ನು ಈ ಸಲ ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

6 / 9
ಶಾಕಿಬ್ ಅಲ್ ಹಸನ್: ಐಪಿಎಲ್​ಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಶಾಕಿಬ್ ಅಲ್ ಹಸನ್ ಪ್ರತಿನಿಧಿಸುವ ತಂಡಕ್ಕೆ ಬಾಂಗ್ಲಾದೇಶದ ಅಭಿಮಾನಿಗಳು ಹೆಚ್ಚಿರುತ್ತಾರೆ. ಆದರೆ ಈ ಬಾರಿ ಶಾಕಿಬ್ ಅನ್​ಸೋಲ್ಡ್ ಆಗಿದ್ದಾರೆ. ಇತ್ತ ಐಪಿಎಲ್​ನ ಪ್ರಮುಖ ಆಲ್​ರೌಂಡರ್ ಆಗಿ ಗುರುತಿಸಿಕೊಂಡಿದ್ದ ಶಾಕಿಬ್ ಕೂಡ ಈ ಬಾರಿ ಐಪಿಎಲ್​ನಲ್ಲಿ ಕಾಣಿಸಿಕೊಳ್ತಿಲ್ಲ.

7 / 9
ಸ್ಟೀವ್ ಸ್ಮಿತ್: ವಿಶ್ವ ಕ್ರಿಕೆಟ್ ಪ್ರೇಮಿಗಳು ಪ್ರೀತಿಸುವ ಆಟಗಾರರಲ್ಲಿ ಸ್ಟೀವ್ ಸ್ಮಿತ್ ಕೂಡ ಒಬ್ಬರು. ಆದರೆ ಸ್ಮಿತ್​ಗೆ ಈ ಬಾರಿ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿಲ್ಲ. ಇದರೊಂದಿಗೆ ಸ್ಮಿತ್ ಅಭಿಮಾನಿಗಳಿಗೂ ಈ ಬಾರಿಯ ಐಪಿಎಲ್​ ಈ ಹಿಂದಿನಂತೆ ಇರುವುದಿಲ್ಲ.

8 / 9
ಇಮ್ರಾನ್ ತಾಹಿರ್: ಐಪಿಎಲ್​ನಲ್ಲಿ ತಮ್ಮ ವಿಭಿನ್ನ ಸೆಲೆಬ್ರೇಷನ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಆಟಗಾರನೆಂದರೆ ಇಮ್ರಾನ್ ತಾಹಿರ್. ಅದರಲ್ಲೂ ಸಿಎಸ್​ಕೆ ಅಭಿಮಾನಿಗಳ ಪಾಲಿನ ಶಕ್ತಿ ಎಕ್ಸ್​ಪ್ರೆಸ್ ಎಂದೇ ಖ್ಯಾತರಾಗಿದ್ದ ಇಮ್ರಾನ್ ತಾಹಿರ್ ಅವರನ್ನೂ ಕೂಡ ಈ ಬಾರಿ ಐಪಿಎಲ್ ಅಭಿಮಾನಿಗಳು ಮಿಸ್ ಮಾಡಿಕೊಳ್ಳಲಿದ್ದಾರೆ.

9 / 9
Follow Us
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​

ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ

ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ

ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?

ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ

ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!

ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!

ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!

ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ