AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB ಗೆ ಕನ್ನಡದಲ್ಲೇ ಧನ್ಯವಾದ ತಿಳಿಸಿದ ABD

Ab De Villiers: ಸೌತ್ ಆಫ್ರಿಕಾ ಪರ 479 ಇನಿಂಗ್ಸ್ ಆಡಿರುವ ಎಬಿ ಡಿವಿಲಿಯರ್ಸ್ 47 ಶತಕ ಹಾಗೂ 108 ಅರ್ಧಶತಕಗಳೊಂದಿಗೆ ಒಟ್ಟು 19864 ರನ್ ಕಲೆಹಾಕಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಎಲ್ಲಾ ಸಾಧನೆಗಾಗಿ ಇದೀಗ ಎಬಿಡಿಗೆ ಹಾಲ್ ಆಫ್ ಫೇಮ್ ಗೌರವ ಸಂದಿದೆ.

ಝಾಹಿರ್ ಯೂಸುಫ್
|

Updated on: Oct 26, 2024 | 1:31 PM

Share
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಸೌತ್ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಗೌರವ ನೀಡಿದೆ. ಈ ಗೌರವದೊಂದಿಗೆ ಎಬಿಡಿಗೆ ಹಾಲ್ ಆಫ್ ಫೇಮ್ ಕ್ಯಾಪ್ ಅನ್ನು ಕಳುಹಿಸಿಕೊಟ್ಟಿದ್ದಾರೆ.

1 / 6
ಈ ಗೌರವ ಸೂಚಕದ ಫೋಟೋವನ್ನು ಎಬಿ ಡಿವಿಲಿಯರ್ಸ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಮಾಜಿ ಕ್ರಿಕೆಟಿಗರು ಸೇರಿದಂತೆ ಅನೇಕರು ಪ್ರತಿಕ್ರಿಯಿಸಿ ಅಭಿನಂದನೆ ಸಲ್ಲಿಸಿದ್ದರು.

2 / 6
ಅದರಲ್ಲೂ ಆರ್​ಸಿಬಿ ಫ್ರಾಂಚೈಸಿಯು, ಗೌರವಗಳು ಬರುತ್ತವೆ ಹೋಗುತ್ತವೆ, ಆದರೆ ಈ ಫ್ರೇಮ್ ಶಾಶ್ವತವಾಗಿ ಉಳಿಯುತ್ತದೆ' ಎಂದು ಬರೆದು ಎಬಿಡಿ ಅವರ ಹಾಲ್ ಅಫ್ ಫೇಮ್​ ಗೌರವದ ಫೋಟೋ ಹಂಚಿಕೊಂಡಿದ್ದರು.

3 / 6
ಈ ಫೋಟೋಗೆ ಖುದ್ದು ಎಬಿಡಿ ಪ್ರತಿಕ್ರಿಯಿಸಿದ್ದಾರೆ. ಅದು ಕೂಡ ಕನ್ನಡದಲ್ಲಿ ಎಂಬುದು ವಿಶೇಷ. ಆರ್​ಸಿಬಿ ಹಂಚಿಕೊಂಡಿದ್ದ ಫೋಟೋಗೆ ಎಬಿ ಡಿವಿಲಿಯರ್ಸ್ "ಧನ್ಯವಾದಗಳು" ಎಂದು ಕನ್ನಡದಲ್ಲೇ ಪ್ರತಿಕ್ರಿಯೆ ನೀಡಿ ಕನ್ನಡಿಗರ ಮನಗೆದ್ದಿದ್ದಾರೆ.

4 / 6
ಇದೀಗ ಆರ್​ಸಿಬಿ ತಂಡದ ಮಾಜಿ ಆಟಗಾರನ ಕನ್ನಡ ಪ್ರೀತಿಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಮತ್ತೆ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವಂತೆ ಅನೇಕ ಅಭಿಮಾನಿಗಳು ಎಬಿಡಿ ಅವರಲ್ಲಿ ಮನವಿ ಮಾಡಿದ್ದಾರೆ.

5 / 6
2011 ರಲ್ಲಿ RCB ಸೇರಿದ್ದ ಎಬಿ ಡಿವಿಲಿಯರ್ಸ್ ಸತತ 11 ಸೀಸನ್​ಗಳಲ್ಲಿ ತಂಡದ ಭಾಗವಾಗಿದ್ದರು. ಅಲ್ಲದೆ RCB ಪರ 157 ಪಂದ್ಯಗಳಲ್ಲಿ 4522 ರನ್ ಗಳಿಸಿದ್ದಾರೆ. ಈ ಮೂಲಕ ಆರ್​ಸಿಬಿ ಪರ ಅತ್ಯಧಿಕ ರನ್ ಕಲೆಹಾಕಿದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ನೀಡಿರುವ ಎಬಿಡಿ ಮುಂಬರುವ ದಿನಗಳಲ್ಲಿ ಆರ್​ಸಿಬಿ ತಂಡದ ಸಿಬ್ಬಂದಿ ವರ್ಗಗಳ ಭಾಗವಾದರೂ ಅಚ್ಚರಿಪಡಬೇಕಿಲ್ಲ.

6 / 6
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ

‘ಮ್ಯಾಂಗೊ ಪಚ್ಚ’ ಕಟೌಟ್​​ನಲ್ಲಿ ನಟ ದರ್ಶನ್ ಚಿತ್ರ: ಸುದೀಪ್ ಹೇಳಿದ್ದೇನು?

ನೂತನ ಸಿಎಂ ಡಿಕೆ ಶಿವಕುಮಾರ್​​ಗೆ ಶುಭ ಹಾರೈಸಿದ ಲಿಂಗಾಯತ ಸ್ವಾಮೀಜಿಗಳು

ರಾಜೀನಾಮೆ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮಹತ್ವದ ಹೇಳಿಕೆ

ಕ್ಲಿಯರ್ ಔಟ್ ಆಗಿದ್ದರೂ... ನಾಟಕವಾಡಿ ಬಚಾವಾದ ಕೆಎಲ್ ರಾಹುಲ್!

ಮೃತ ಮಹಿಳೆಯ ಕುಟುಂಬಕ್ಕೆ ಪರಿಹಾರ ನೀಡದ್ದಕ್ಕೆ ಕೆಕೆಆರ್​ಟಿಸಿ ಬಸ್ ಜಪ್ತಿ

‘ಮ್ಯಾಂಗೋ ಪಚ್ಚ’ ರಿಲೀಸ್ ಬೆನ್ನಲ್ಲೇ ಕಿಚ್ಚ ಸುದೀಪ್ ಸುದ್ದಿಗೋಷ್ಠಿ

ಕೆಸಿಇಟಿ ಫಲಿತಾಂಶ ಪ್ರಕಟ: ಸಚಿವರ ಸುದ್ದಿಗೋಷ್ಠಿ ನೇರಪ್ರಸಾರ

2 ದಿನಗಳಲ್ಲಿ 33 ವಿಕೆಟ್ ಪತನ: ರೋಚಕ ಘಟ್ಟದತ್ತ 'ಲಾರ್ಡ್ಸ್'​ ಟೆಸ್ಟ್

ಬರ್ತ್ ಡೇ ಪಾರ್ಟಿ ವೇಳೆ ಕುಸಿದು ಬಿದ್ದ ಕಟ್ಟಡ: 15 ಯುವಕರು ಜಸ್ಟ್ ಮಿಸ್