AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ 4 ಇನಿಂಗ್ಸ್​… ವಿರಾಟ್ ಕೊಹ್ಲಿಯ ದಾಖಲೆ ಮೇಲೆ ಅಭಿಷೇಕ್ ಶರ್ಮಾ ಕಣ್ಣು

India vs South Africa T20I: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಮುಗಿದಿದೆ. ಈ ಸರಣಿಯಲ್ಲಿ ಇನ್ನೂ ನಾಲ್ಕು ಮ್ಯಾಚ್​ಗಳಿವೆ. ಈ ಪಂದ್ಯಗಳ ಮೂಲಕ ವಿರಾಟ್ ಕೊಹ್ಲಿಯ 9 ವರ್ಷಗಳ ಹಳೆಯ ದಾಖಲೆ ಮುರಿಯುವ ಅವಕಾಶ ಅಭಿಷೇಕ್ ಶರ್ಮಾ ಮುಂದಿದೆ.

ಝಾಹಿರ್ ಯೂಸುಫ್
|

Updated on: Dec 11, 2025 | 1:54 PM

Share
ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ಅಭಿಷೇಕ್ ಶರ್ಮಾ ಮತ್ತೊಂದು ಭರ್ಜರಿ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಈ ದಾಖಲೆ ಮುರಿಯಲು ಅಭಿಷೇಕ್ ಮುಂದಿರುವುದು ಕೇವಲ 4 ಇನಿಂಗ್ಸ್​ಗಳು ಮಾತ್ರ. ಈ ನಾಲ್ಕು ಇನಿಂಗ್ಸ್​ಗಳ ಮೂಲಕ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ ಭರ್ಜರಿ ದಾಖಲೆಯನ್ನು ಮುರಿಯಬಹುದು.

1 / 5
ಹೌದು, ಟಿ20 ಕ್ರಿಕೆಟ್​ನಲ್ಲಿ ಒಂದೇ ವರ್ಷ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟರ್​ನ ಭರ್ಜರಿ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2016 ರಲ್ಲಿ 29 ಇನಿಂಗ್ಸ್​ಗಳ ಮೂಲಕ ಬರೋಬ್ಬರಿ 1614 ರನ್ ಪೇರಿಸಿದ್ದರು. 9 ವರ್ಷಗಳ ಹಿಂದೆ ಬರೆದಿದ್ದ ಈ ದಾಖಲೆಯನ್ನು ಮುರಿಯಲು ಈವರೆಗೆ ಭಾರತದ ಯಾವುದೇ ಬ್ಯಾಟರ್​ಗೆ ಸಾಧ್ಯವಾಗಿಲ್ಲ.

2 / 5
ಇದೀಗ 9 ವರ್ಷಗಳ ಬಳಿಕ ಅಭಿಷೇಕ್ ಶರ್ಮಾ ಕಿಂಗ್ ಕೊಹ್ಲಿಯ ದಾಖಲೆಯ ಸಮೀಪಕ್ಕೆ ತಲುಪಿದ್ದಾರೆ. ಅದು ಕೂಡ ಬರೋಬ್ಬರಿ 1516 ರನ್​ಗಳೊಂದಿಗೆ. ಅಂದರೆ ಈ ವರ್ಷ ಅಭಿಷೇಕ್ ಶರ್ಮಾ ಆಡಿದ 37 ಇನಿಂಗ್ಸ್​ಗಳ ಮೂಲಕ ಒಟ್ಟು 1516 ರನ್ ಕಲೆಹಾಕಿದ್ದಾರೆ.

3 / 5
ಇನ್ನು 99 ರನ್​ಗಳಿಸಿದರೆ ಟಿ20 ಕ್ರಿಕೆಟ್​ನಲ್ಲಿ ಒಂದೇ ವರ್ಷದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು. ಆದರೆ ಅದಕ್ಕಾಗಿ ಅಭಿಷೇಕ್ ಶರ್ಮಾ ಮುಂದಿರುವುದು ಕೇವಲ 4 ಇನಿಂಗ್ಸ್​ಗಳು ಮಾತ್ರ ಎಂಬುದು ಇಲ್ಲಿ ಉಲ್ಲೇಖಾರ್ಹ.

4 / 5
ಸೌತ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ 4 ಪಂದ್ಯಗಳ ಮೂಲಕವೇ ಅಭಿಷೇಕ್ ಶರ್ಮಾ ಒಟ್ಟು 99 ರನ್ ಕಲೆಹಾಕಬೇಕಿದೆ. ಏಕೆಂದರೆ ಭಾರತ-ಸೌತ್ ಆಫ್ರಿಕಾ ಟಿ20 ಸರಣಿಯು ಡಿಸೆಂಬರ್ 19 ರಂದು ಕೊನೆಗೊಳ್ಳಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಮತ್ತೆ ಟಿ20 ಪಂದ್ಯವಾಡುವುದು ಜನವರಿಯಲ್ಲಿ. ಹೀಗಾಗಿ ಡಿಸೆಂಬರ್ ತಿಂಗಳೊಳಗೆ 99 ರನ್ ಗಳಿಸಿದರೆ ಮಾತ್ರ ಅಭಿಷೇಕ್ ಶರ್ಮಾ ವಿರಾಟ್ ಕೊಹ್ಲಿ 1614 ರನ್​ಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸವನ್ನು ನಿರ್ಮಿಸಬಹುದು.

5 / 5
Follow Us
ಉತ್ತರ ಪ್ರದೇಶದ ಸಹರಾನ್‌ಪುರದ ವನ್ಯಜೀವಿ ಕಾರಿಡಾರ್‌ಗೆ ಪ್ರಧಾನಿ ಮೋದಿ ಭೇಟಿ

ಸಿದ್ದರಾಮಯ್ಯ ಜತೆ ರಹಸ್ಯ ಮಾತುಕತೆ ನಡೆಸಿ ಹೊರಟ ಜಮೀರ್, ಮಂತ್ರಿ ಕಥೆ ಏನು?

ಡೆಲಿವರಿ ಬಾಯ್ಸ್ ಕೆಲಸ ಗೌರವಿಸಿ; ಸ್ವಂತ ಅನುಭವ ಹಂಚಿಕೊಂಡ ಧರ್ಮ ಕೀರ್ತಿರಾಜ್

ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ರೆ ನನ್ನ ತಮ್ಮ ಬದುಕುತ್ತಿದ್ದ

ಚಲಿಸುತ್ತಿದ್ದ ಬಸ್​​ನಿಂದ ಬಿದ್ದು ವೃದ್ಧೆ ಸಾವು

ತಮಿಳುನಾಡು ಎಲೆಕ್ಷನ್‌ ಪ್ರಚಾರದ ವೇಳೆ ಕನ್ನಡದಲ್ಲಿ ಅಶೋಕ್‌ ಮತಬೇಟೆ

ನೀವು ದಲಿತ ವಿರೋಧಿ: ಶಾಸಕರ ಭಾಷಣಕ್ಕೆ ವ್ಯಕ್ತಿಯೋರ್ವನಿಂದ ಅಡ್ಡಿ

ಅನುಷಾ ರೈ ಜೊತೆ ಮದುವೆ ಆಗ್ತೀರಾ? ಧರ್ಮ ಕೀರ್ತಿರಾಜ್ ನೇರ ಉತ್ತರ

ಬೆಂಗಳೂರು: ಮಗಳನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ, ಕಾರಣವೇನು?

ಬಿಹಾರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಾಮ್ರಾಟ್ ಚೌಧರಿ ಹೇಳಿದ್ದೇನು?