AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಬರ್ ಆಝಂ ಡುಮ್ಕಿ ಢಮಾರ್: ರೋಹಿತ್ ಶರ್ಮಾ ವಿಶ್ವ ದಾಖಲೆ ಸೇಫ್

Pakistan vs South Africa: ಪಾಕಿಸ್ತಾನ್ ವಿರುದ್ಧದ ಮೊದಲ ಟಿ೨೦ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 194 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ್ 18.1 ಓವರ್‌ಗಳಲ್ಲಿ 139 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸೌತ್ ಆಫ್ರಿಕಾ 55 ರನ್ ಗಳ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Oct 29, 2025 | 7:54 AM

Share
ಬರೋಬ್ಬರಿ ಒಂದು ವರ್ಷಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ (Babar Azam) ಮೊದಲ ಮ್ಯಾಚ್ ನಲ್ಲೇ ಮುಗ್ಗರಿಸಿದ್ದಾರೆ. ಅದು ಸಹ ಸೊನ್ನೆ ಸುತ್ತುವ ಮೂಲಕ ಎಂಬುದು ವಿಶೇಷ.

1 / 6
ರಾವಲ್ಪಿಂಡಿಯಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ತಾನೆದುರಿಸಿದ ಎರಡನೇ ಎಸೆತದಲ್ಲಿ ಸುಲಭ ಕ್ಯಾಚ್ ನೀಡಿ ಶೂನ್ಯದೊಂದಿಗೆ ಭಾರದ ಹೆಜ್ಜೆ ಹಾಕಿದರು.

2 / 6
ಇತ್ತ ಬಾಬರ್ ಸೊನ್ನೆ ಸುತ್ತಿರುವುದರಿಂದ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆಯೊಂದು ಸೇಫ್ ಝೋನಲ್ಲೇ ಉಳಿದಿದೆ. ಅಂದರೆ ಈ ಮ್ಯಾಚ್ ನಲ್ಲಿ ಬಾಬರ್ ಆಝಂ ಕೇವಲ 9 ರನ್ ಗಳಿಸಿದ್ದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳುತ್ತಿದ್ದರು. ಸದ್ಯ ಈ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ.

3 / 6
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಹಿಟ್​ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾ ಪರ 151 ಟಿ20 ಇನಿಂಗ್ಸ್ ಆಡಿರುವ ರೋಹಿತ್ ಶರ್ಮಾ ಒಟ್ಟು 4231 ರನ್​ ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

4 / 6
ಈ ದಾಖಲೆ ಮುರಿಯಲು ಬಾಬರ್ ಆಝಂಗೆ ಇನ್ನೂ 9 ರನ್​ಗಳು ಬೇಕಿದೆ. ಪಾಕ್ ಪರ ಈವರೆಗೆ 121 ಟಿ20 ಇನಿಂಗ್ಸ್ ಆಡಿರುವ ಬಾಬರ್ ಒಟ್ಟು 4223 ರನ್​ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್​ಗಳಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 6
ಸದ್ಯ ದ್ವಿತೀಯ ಸ್ಥಾನದಲ್ಲಿರುವ ಬಾಬರ್ ಆಝಂ ರೋಹಿತ್ ಶರ್ಮಾ ಅವರ ದಾಖಲೆ ಮುರಿಯಲು ಅಕ್ಟೋಬರ್ 31 ರವರೆಗೆ ಕಾಯಲೇಬೇಕು. ಅಂದರೆ ಪಾಕಿಸ್ತಾನ್ ಮತ್ತು ಸೌತ್ ಆಫ್ರಿಕಾ ನಡುವಿನ ದ್ವಿತೀಯ ಪಂದ್ಯವು ಮುಂದಿನ ಶುಕ್ರವಾರ ನಡೆಯಲಿದ್ದು, ಆ ಮ್ಯಾಚ್ ನಲ್ಲಿ 9 ರನ್ ಗಳಿಸಿದರೆ ಬಾಬರ್ ಆಝಂ ಹೆಸರಿಗೆ ಹೊಸ ವಿಶ್ವ ದಾಖಲೆ ಸೇರ್ಪಡೆಯಾಗಲಿದೆ. ಅಲ್ಲೀತನಕ ಹಿಟ್ ಮ್ಯಾನ್ ವರ್ಲ್ಡ್ ರೆಕಾರ್ಡ್ ಸೇಫ್.

6 / 6
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ

Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್

ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ

ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ

ಸಕಲ ಸರ್ಕಾರಿ ಗೌರವದೊಂದಿಗೆ ಸಾಲುಮರದ ತಿಮ್ಮಕ್ಕ ಅಂತ್ಯಕ್ರಿಯೆ

ಇದು ಆಕಸ್ಮಿಕವಲ್ಲ ಉದ್ದೇಶಪೂರ್ವಕವಾಗಿ ಮಾಡಿದ ಅಪಘಾತ

ಸಾಲುಮರದ ತಿಮ್ಮಕ್ಕಗೆ ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದ ಪೊಲೀಸರು

ತಮಿಳಿನ ಜಡ್ಜ್​ಗಳೂ ಕನ್ನಡದ ಶಿವಾನಿ ಫ್ಯಾನ್; ಫಿನಾಲೆ ಮತ್ತಷ್ಟು ಸನಿಹ

ರಕ್ಷಿತಾ ಹಾಗೂ ಗಿಲ್ಲಿಗೆ ಕ್ಲಾಸ್ ಫಿಕ್ಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್

ಮೈಸೂರು ಕಾಡಂಚಿನಲ್ಲಿ 20 ಹುಲಿಗಳ ಓಡಾಟ: ಸಾರ್ವಜನಿಕರಿಗೆ ಸಲಹೆ ಸೂಚನೆ ಏನು?