AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶತಕಗಳ ಮೇಲೆ ಶತಕ… ಬಿಗ್ ಬ್ಯಾಷ್​ನಲ್ಲಿ ಹೊಸ ದಾಖಲೆ ನಿರ್ಮಾಣ

BBL 2026 Records: ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿ ಶುರುವಾಗಿ 15 ವರ್ಷಗಳಾಗಿವೆ. ಕಳೆದ 14 ವರ್ಷಗಳಲ್ಲಿ ಬಿಬಿಎಲ್​​ನಲ್ಲಿ ಬ್ಯಾಟರ್​ಗಳು ಅಬ್ಬರಿಸಿದರೂ ಮೂರಂಕಿ ಮೊತ್ತಗಳಿಸಿದ್ದು ಅತೀ ವಿರಳ. ಆದರೆ ಈ ಬಾರಿ 8 ಬ್ಯಾಟರ್​​​ಗಳು ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 9 ಶತಕಗಳೊಂದಿಗೆ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Jan 18, 2026 | 10:25 AM

Share
 BBL 2026: ಬಿಗ್ ಬ್ಯಾಷ್​​ ಲೀಗ್​​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಕೂಡ ಬ್ಯಾಟರ್​​​ಗಳ ಸಿಡಿಲಬ್ಬರದೊಂದಿಗೆ. ಈ ಸಿಡಿಲಬ್ಬರದೊಂದಿಗೆ ಬಿಗ್ ಬ್ಯಾಷ್ ಲೀಗ್ ಸೀಸನ್​​ವೊಂದರಲ್ಲಿ ಅತ್ಯಧಿಕ ಸೆಂಚುರಿಗಳು ಮೂಡಿಬಂದಿವೆ.

1 / 5
ಅಂದರೆ ಬಿಗ್ ಬ್ಯಾಷ್ ಲೀಗ್​​ ಇತಿಹಾಸದಲ್ಲೇ ಈ ಬಾರಿಯ ಆವೃತ್ತಿಯಲ್ಲಿ ಅತೀ ಹೆಚ್ಚು ಶತಕಗಳು ದಾಖಲಾಗಿವೆ. BBL 2025-26 ರಲ್ಲಿ ಈವರೆಗೆ 8 ಬ್ಯಾಟರ್​​​ಗಳು ಬರೋಬ್ಬರಿ 9 ಸೆಂಚುರಿ ಸಿಡಿಸಿದ್ದಾರೆ. ಇದಕ್ಕೂ ಮುನ್ನ ಬಿಬಿಎಲ್​​ನಲ್ಲಿ ಆರಕ್ಕಿಂತ ಅಧಿಕ ಶತಕ ಮೂಡಿಬಂದಿರಲಿಲ್ಲ ಎಂಬುದು ವಿಶೇಷ.

2 / 5
2022-23 ರ ಸೀಸನ್​​​ನಲ್ಲಿ ಒಟ್ಟು 6 ಶತಕಗಳು ಮೂಡಿಬಂದಿದ್ದವು. ಅದಕ್ಕೂ ಮುನ್ನ 2015-16 ರಲ್ಲಿ 5 ಸೆಂಚುರಿಗಳು ದಾಖಲಾಗಿದ್ದವು. ಅಲ್ಲದೆ ಕಳೆದ ಸೀಸನ್​​ನಲ್ಲಿ ದಾಖಲಾದ ಒಟ್ಟು ಶತಕಗಳ ಸಂಖ್ಯೆ ಕೇವಲ 5 ಮಾತ್ರ. ಆದರೆ ಈ ಬಾರಿ ಬ್ಯಾಟರ್​​ಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ.

3 / 5
ಅದರಲ್ಲೂ ಈ ಬಾರಿ ಆಸ್ಟ್ರೇಲಿಯನ್ ದಾಂಡಿಗ ಡೇವಿಡ್ ವಾರ್ನರ್ 2 ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಸೀಸನ್​​ವೊಂದರಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಡೇವಿಡ್ ವಾರ್ನರ್ ತಮ್ಮದಾಗಿಸಿಕೊಂಡಿದ್ದಾರೆ.

4 / 5
ಡೇವಿಡ್ ವಾರ್ನರ್ ಅಲ್ಲದೆ, ಟಿಮ್ ಸೈಫರ್ಟ್​, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಫಿನ್ ಅಲೆನ್, ಮ್ಯಾಟ್ ರೆನ್​​ಶಾ, ಜ್ಯಾಕ್ ವೈಲ್ಡರ್​ಮತ್, ಸ್ಯಾಮ್ ಹರ್ಪರ್ ಸಹ ಈ ಬಾರಿಯ ಬಿಗ್ ಬ್ಯಾಷ್ ಲೀಗ್​​ನಲ್ಲಿ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಬಿಗ್ ಬ್ಯಾಷ್ ಲೀಗ್ ಸೀಸನ್-15 ಅತ್ಯಧಿಕ ಸೆಂಚುರಿ ಮೂಡಿಬಂದ ಆವೃತ್ತಿಯಾಗಿ ಮಾರ್ಪಟ್ಟಿದೆ.

5 / 5
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ

ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ

ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ

ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ

ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ

ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ

ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ

ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ

ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ

ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ