AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Rankings: ರನ್ ಗಳಿಸದ ಕಿಶನ್​ಗೆ ಅಗ್ರಸ್ಥಾನ; ರನ್ ಗಳಿಸಿದ ಅಭಿಷೇಕ್​ಗೆ 2ನೇ ಸ್ಥಾನ

ICC T20 Rankings: ಐಸಿಸಿ ಟಿ20 ಬ್ಯಾಟ್ಸ್‌ಮನ್‌ ರ್ಯಾಂಕಿಂಗ್‌ನಲ್ಲಿ ಇಶಾನ್ ಕಿಶನ್ ಅಗ್ರಸ್ಥಾನದಲ್ಲಿದ್ದರೆ, ಅಭಿಷೇಕ್ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಕಿಶನ್ ಕಳಪೆ ಪ್ರದರ್ಶನ ನೀಡಿದರೂ ಅವರ ರೇಟಿಂಗ್ ಅಂಕಗಳು ಹೆಚ್ಚಾಗಿರುವುದು ಅಭಿಮಾನಿಗಳಿಗೆ ಆಶ್ಚರ್ಯ ತಂದಿದೆ. ಉತ್ತಮ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ ರೇಟಿಂಗ್ ಅಂಕಗಳಲ್ಲಿ ಕಿಶನ್‌ಗಿಂತ ಹಿಂದಿದ್ದಾರೆ. ಈ ಪ್ರದರ್ಶನ ಮತ್ತು ರ್ಯಾಂಕಿಂಗ್ ನಡುವಿನ ವ್ಯತ್ಯಾಸ ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ.

ಪೃಥ್ವಿಶಂಕರ
|

Updated on: Jul 08, 2026 | 5:22 PM

Share
ಐಸಿಸಿ ಇಂದು ಬಿಡುಗಡೆ ಮಾಡಿರುವ ಟಿ20 ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾದ ಇಬ್ಬರು ಬ್ಯಾಟರ್​ಗಳ ಪಾರುಪತ್ಯ ಮುಂದುವರೆದಿದೆ. ಅಚ್ಚರಿಯ ಸಂಗತಿಯೆಂದರೆ ಪ್ರಸ್ತುತ ರನ್ ಬರ ಎದುರಿಸುತ್ತಿರುವ ಇಶಾನ್ ಕಿಶನ್ ಅಗ್ರಸ್ಥಾನದಲ್ಲಿ ಮುಂದುವರೆದರೆ, ರನ್ ಗಳಿಸುತ್ತಿರುವ ಅಭಿಷೇಕ್ ಶರ್ಮಾ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಕಿಶನ್ ಅವರ ರೇಟಿಂಗ್ ಪಾಯಿಂಟ್ ಕೂಡ ಹೆಚ್ಚಾಗಿದೆ (PC-PTI).

1 / 7
ಐಸಿಸಿ ಬಿಡುಗಡೆ ಮಾಡಿರುವ ಸಾಪ್ತಾಯಿಕ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಶಾನ್ ಕಿಶನ್ 897 ರೇಟಿಂಗ್ ಪಾಯಿಂಟ್‌ ಹೊಂದಿದ್ದರೆ, ಅಭಿಷೇಕ್ ಶರ್ಮಾ 881 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಐರ್ಲೆಂಡ್ ಹಾಗೂ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅಭಿಷೇಕ್​ಗೆ ಹೊಲಿಸಿದರೆ, ಕಿಶನ್ ಅವರ ಪ್ರದರ್ಶನ ತೀರ ಕಳಪೆಯಾಗಿದೆ. ಇದರ ಹೊರತಾಗಿಯೂ ಕಿಶನ್ ಅವರ ರೇಟಿಂಗ್ ಪಾಯಿಂಟ್ಸ್ ಹೆಚ್ಚಾಗುವುದರ ಜೊತೆಗೆ ಅಗ್ರಸ್ಥಾನದಲ್ಲಿ ಮುಂದುವರೆಯುವಂತೆ ಮಾಡಿದೆ (PC-PTI).

2 / 7
ವಾಸ್ತವವಾಗಿ ಐರ್ಲೆಂಡ್ ಸರಣಿಯ ಆರಂಭಕ್ಕೂ ಮುನ್ನ, ಅಭಿಷೇಕ್ ಶರ್ಮಾ 875 ರೇಟಿಂಗ್ ಅಂಕಗಳೊಂದಿಗೆ ವಿಶ್ವದ ನಂ. 1 ಟಿ20 ಬ್ಯಾಟ್ಸ್‌ಮನ್ ಆಗಿದ್ದರು. ಇಶಾನ್ ಕಿಶನ್ 871 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರು. ಐರ್ಲೆಂಡ್ ಪ್ರವಾಸದಲ್ಲಿ, ಅಭಿಷೇಕ್ ಮೊದಲ ಪಂದ್ಯದಲ್ಲಿ 20 ಎಸೆತಗಳಲ್ಲಿ 49 ರನ್ ಗಳಿಸಿದರೆ, ಮುಂದಿನ ಪಂದ್ಯದಲ್ಲಿ ತಮ್ಮ ಖಾತೆಯನ್ನು ತೆರೆಯಲು ವಿಫಲರಾದರು. ಮತ್ತೊಂದೆಡೆ, ಇಶಾನ್ ಕಿಶನ್ ಮೊದಲ ಟಿ20 ಪಂದ್ಯದಲ್ಲಿ 1 ರನ್ ಮತ್ತು ಎರಡನೇ ಪಂದ್ಯದಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದರು (PC-PTI).

3 / 7
ಅಂದರೆ ಐರ್ಲೆಂಡ್ ಪ್ರವಾಸದಲ್ಲಿ ಕಿಶನ್​ಗೆ ಹೊಲಿಸಿದರೆ, ಅಭಿಷೇಕ್ ಕಲೆಹಾಕಿದ ರನ್​ಗಳು ಹೆಚ್ಚಿದ್ದವು. ಆದರೆ ಕಳೆದ ವಾರ ಬಿಡುಗಡೆಯಾಗಿದ್ದ ಐಸಿಸಿ ರ್ಯಾಂಕಿಂಗ್​ನಲ್ಲಿ ಇಶಾನ್ ಕಿಶನ್ 876 ರೇಟಿಂಗ್ ಪಾಯಿಂಟ್​ಗಳೊಂದಿಗೆ ನಂ. 1 ಸ್ಥಾನವನ್ನು ಅಲಂಕರಿಸಿದ್ದರು. ಇತ್ತ ಅಭಿಷೇಕ್ ಶರ್ಮಾ 869 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದರು (PC-PTI).

4 / 7
ಇನ್ನು ಇಂಗ್ಲೆಂಡ್‌ ಪ್ರವಾಸದಲ್ಲೂ ಕಿಶನ್ ಪ್ರದರ್ಶನ ಕಳಪೆಯಾಗಿದೆ. ಇತ್ತ ಅಭಿಷೇಕ್ ಶರ್ಮಾ ಅವರ ಸಾಧಾರಣ ಪ್ರದರ್ಶನ ಮುಂದುವರೆದಿದೆ. ಇಂಗ್ಲೆಂಡ್‌ ವಿರುದ್ಧ ಆಡಿದ 3 ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಒಂದು ಅರ್ಧಶತಕ ಸೇರಿದಂತೆ 112 ರನ್ ಗಳಿಸಿದ್ದಾರೆ. ಇತ್ತ ಇಶಾನ್ ಕಿಶನ್ ಮೂರು ಇನ್ನಿಂಗ್ಸ್‌ಗಳಲ್ಲಿ 62 ರನ್ ಗಳಿಸಿದ್ದಾರೆ. ಆದಾಗ್ಯೂ, ಹೊಸ ಶ್ರೇಯಾಂಕದಲ್ಲಿ, ಇಶಾನ್ ಕಿಶನ್ ಅವರ ರೇಟಿಂಗ್ 876 ರಿಂದ 897 ಕ್ಕೆ ಜಿಗಿದಿದೆ. ಮತ್ತೊಂದೆಡೆ, ಅಭಿಷೇಕ್ ಅವರ ರೇಟಿಂಗ್ ಹೆಚ್ಚು ರನ್ ಗಳಿಸಿದರೂ ಸ್ವಲ್ಪ ಏರಿಕೆ ಕಂಡಿದ್ದು, 869 ರಿಂದ 881 ಕ್ಕೆ ಏರಿದೆ (PC-PTI).

5 / 7
ಕಳೆದ ಐದು ಟಿ20 ಪಂದ್ಯಗಳಲ್ಲಿ ಅಭಿಷೇಕ್ ಹಾಗೂ ಕಿಶನ್ ಅವರ ಪ್ರದರ್ಶನವನ್ನು ಗಮನಿಸಿದರೆ, ಇಲ್ಲೂ ಸಹ ಅಭಿಷೇಕ್ ಮುಂದಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಅಭಿಷೇಕ್ 211.84 ರ ಸ್ಟ್ರೈಕ್ ರೇಟ್​ನಲ್ಲಿ 161 ರನ್ ಕಲೆಹಾಕಿದ್ದಾರೆ. ಇತ್ತ ಕಿಶನ್ ಕೇವಲ 15 ಸರಾಸರಿಯಲ್ಲಿ 75 ರನ್ ಗಳಿಸಿದ್ದಾರೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಅಭಿಷೇಕ್ ಕೇವಲ 6 ರೇಟಿಂಟ್ ಪಾಯಿಂಟ್​ಗಳನ್ನು ಹೆಚ್ಚಿಸಿಕೊಂಡರೆ, ಇಶಾನ್ ಕಿಶಾನ್ ಬರೋಬ್ಬರಿ 26 ಅವರ ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ. ಹೀಗಾಗಿ ಈ ಐಸಿಸಿ ರೇಟಿಂಗ್ ವ್ಯವಸ್ಥೆ ಅಭಿಮಾನಿಗಳಿಗೆ
 ದೊಡ್ಡ ಒಗಟಾಗಿ ಮಾರ್ಪಟ್ಟಿದೆ (PC-PTI).

ಕಳೆದ ಐದು ಟಿ20 ಪಂದ್ಯಗಳಲ್ಲಿ ಅಭಿಷೇಕ್ ಹಾಗೂ ಕಿಶನ್ ಅವರ ಪ್ರದರ್ಶನವನ್ನು ಗಮನಿಸಿದರೆ, ಇಲ್ಲೂ ಸಹ ಅಭಿಷೇಕ್ ಮುಂದಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಅಭಿಷೇಕ್ 211.84 ರ ಸ್ಟ್ರೈಕ್ ರೇಟ್​ನಲ್ಲಿ 161 ರನ್ ಕಲೆಹಾಕಿದ್ದಾರೆ. ಇತ್ತ ಕಿಶನ್ ಕೇವಲ 15 ಸರಾಸರಿಯಲ್ಲಿ 75 ರನ್ ಗಳಿಸಿದ್ದಾರೆ. ಉತ್ತಮ ಪ್ರದರ್ಶನದ ಹೊರತಾಗಿಯೂ ಅಭಿಷೇಕ್ ಕೇವಲ 6 ರೇಟಿಂಟ್ ಪಾಯಿಂಟ್​ಗಳನ್ನು ಹೆಚ್ಚಿಸಿಕೊಂಡರೆ, ಇಶಾನ್ ಕಿಶಾನ್ ಬರೋಬ್ಬರಿ 26 ಅವರ ರೇಟಿಂಗ್ ಪಾಯಿಂಟ್ ಗಳಿಸಿದ್ದಾರೆ. ಹೀಗಾಗಿ ಈ ಐಸಿಸಿ ರೇಟಿಂಗ್ ವ್ಯವಸ್ಥೆ ಅಭಿಮಾನಿಗಳಿಗೆ ದೊಡ್ಡ ಒಗಟಾಗಿ ಮಾರ್ಪಟ್ಟಿದೆ (PC-PTI).

6 / 7
ಉಳಿದಂತೆ ತಿಲಕ್ ವರ್ಮಾ 721 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಸೂರ್ಯಕುಮಾರ್ ಯಾದವ್ 687 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐದು ಸ್ಥಾನಗಳನ್ನು ಕುಸಿದು 13 ನೇ ಸ್ಥಾನಕ್ಕೆ ಬಂದಿದ್ದಾರೆ. ಹಾಗೆಯೇ ಭಾರತದ ವಿರುದ್ಧದ ಎರಡನೇ ಟಿ20ಪಂದ್ಯದಲ್ಲಿ ಅಜೇಯ 76 ರನ್ ಗಳಿಸಿದ ಜಾಕೋಬ್ ಬೆಥೆಲ್ ಏಳು ಸ್ಥಾನಗಳ ಜಿಗಿತದೊಂದಿಗೆ ಎಂಟನೇ ಸ್ಥಾನಕ್ಕೆ ತಲುಪಿದ್ದಾರೆ (PC-PTI).

7 / 7
Follow Us
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ

ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ

ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ

ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ

ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!

ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು

24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ

ಬೆಳಗಾವಿಯಲ್ಲಿ RSS ವಾರ್ಷಿಕ ಸಭೆ ಬಗ್ಗೆ ಪ್ರಿಯಾಂಕ್ ಖರ್ಗೆ ಖಡಕ್ ಮಾತು

ವಯನಾಡು ಭೂಕುಸಿತದ ಬಗ್ಗೆ ಡಿಸಿ ಮೇಘಶ್ರೀ ಮಾಹಿತಿ

ವಯನಾಡು ಗುಡ್ಡ ಕುಸಿತ ದುರಂತದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಹೊಟೇಲ್ ಮಾಲೀಕ