AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋ ರೂಟ್​ಗೆ ಮತ್ತೆ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕತ್ವ

England Test Captaincy: ಬೆನ್ ಸ್ಟೋಕ್ಸ್ ವಿದಾಯ ಮತ್ತು ಮೆಕಲಮ್ ನಿರ್ಗಮನದ ನಂತರ ಇಂಗ್ಲೆಂಡ್ ಟೆಸ್ಟ್ ತಂಡ ಹೊಸ ನಾಯಕನ ಹುಡುಕಾಟದಲ್ಲಿದೆ. ಮಾಜಿ ನಾಯಕ ಜೋ ರೂಟ್ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ. ಹ್ಯಾರಿ ಬ್ರೂಕ್ ಹೆಸರೂ ಕೇಳಿಬಂದಿತ್ತು, ಆದರೆ ಅವರು ಸೀಮಿತ ಓವರ್‌ಗಳ ನಾಯಕರಾಗಿ ಮುಂದುವರೆಯಲಿದ್ದಾರೆ. ರೂಟ್ ಹಿಂದಿನ ನಾಯಕತ್ವದ ದಾಖಲೆ ಉತ್ತಮವಾಗಿದ್ದು, ಇಸಿಬಿ ಮತ್ತೊಮ್ಮೆ ಅವರತ್ತ ಒಲವು ತೋರಿದೆ.

ಪೃಥ್ವಿಶಂಕರ
|

Updated on: Jul 24, 2026 | 8:44 PM

Share
ಕೆಲವೇ ದಿನಗಳ ಹಿಂದೆ ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಬ್ರೆಂಡನ್ ಮೆಕಲಮ್ ಕೂಡ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ಹೀಗಾಗಿ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿ ಟೆಸ್ಟ್ ತಂಡಕ್ಕೆ ನೂತನ ನಾಯಕ ಹಾಗೂ ನೂತನ ಹೆಡ್ ಕೋಚ್ ಹುಡುಕಾಟದಲ್ಲಿದೆ(PC-PTI).

1 / 5
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನಾಯಕನ ಆಯ್ಕೆಯಾಗಿದೆ. ತಂಡದ ಮಾಜಿ ನಾಯಕ ಜೋ ರೂಟ್ ಅವರನ್ನು ಮತ್ತೊಮ್ಮೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕನನ್ನಾಗಿ ನೇಮಿಸಲು ತಯಾರಿ ನಡೆಯುತ್ತಿದೆ ಎಂದು ವರದಿಯಾಗಿದೆ. ವಾಸ್ತವವಾಗಿ ಬೆನ್ ಸ್ಟೋಕ್ಸ್ ವಿದಾಯದ ನಂತರ ಹ್ಯಾರಿ ಬ್ರೂಕ್​ಗೆ ಟೆಸ್ಟ್ ತಂಡದ ಜವಾಬ್ದಾರಿಯನ್ನು ನೀಡಲಾಗುತ್ತದೆ ಎನ್ನಲಾಗುತ್ತಿತ್ತು(PC-PTI).

2 / 5
ಆದರೆ ಬ್ರೂಕ್ ಏಕದಿನ ಮತ್ತು ಟಿ 20 ತಂಡಗಳ ನಾಯಕರಾಗಿ ಮುಂದುವರೆಯಲಿದ್ದು, ಟೆಸ್ಟ್ ತಂಡಕ್ಕೆ ಬೇರೆಯವರನ್ನು ನಾಯಕನಾಗಿ ನೇಮಿಸಲು ಇಸಿಬಿ ಯೋಚಿಸುತ್ತುದೆ. ಆದಾಗ್ಯೂ ಅವಕಾಶ ಸಿಕ್ಕರೆ ಟೆಸ್ಟ್ ನಾಯಕನಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಜೋ ಬ್ರೂಕ್ ಇತ್ತೀಚೆಗೆ ಹೇಳಿದ್ದರು, ಆದರೆ ಈಗ ಆ ಜವಾಬ್ದಾರಿಯನ್ನು ಅವರಿಗೆ ನೀಡಲಾಗುತ್ತಿಲ್ಲ. ಆಯ್ಕೆದಾರರು ಮತ್ತೊಮ್ಮೆ ಜೋ ರೂಟ್ ಅವರನ್ನು ನಾಯಕನನ್ನಾಗಿ ನೇಮಿಸಲು ಉತ್ಸುಕರಾಗಿದ್ದಾರೆ(PC-PTI).

3 / 5
2017 ರಲ್ಲಿ ಜೋ ರೂಟ್ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕರಾಗಿ ಆಯ್ಕೆಯಾಗಿದ್ದರು. ಅಲಸ್ಟೇರ್ ಕುಕ್ ನಿವೃತ್ತಿಯ ಬಳಿಕ ರೂಟ್​ಗೆ ಜವಾಬ್ದಾರಿ ನೀಡಲಾಗಿತ್ತು. ಈ ಮೂಲಕ ರೂಟ್ ಇಂಗ್ಲೆಂಡ್​ನ 80 ನೇ ಟೆಸ್ಟ್ ನಾಯಕನಾಗಿ ಆಯ್ಕೆಯಾಗಿದ್ದರು. ಆದಾಗ್ಯೂ ರೂಟ್ 2022 ರಲ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ್ದರು(PC-PTI).

4 / 5
ಜೋ ರೂಟ್ 65 ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದು, 27 ಪಂದ್ಯಗಳಲ್ಲಿ ಗೆಲುವು ಸಾಧಿಸಿ 27 ಪಂದ್ಯಗಳಲ್ಲಿ ಸೋತಿದ್ದಾರೆ. ಹಾಗೆಯೇ ನಾಯಕನಾಗಿ ಜೋ ರೂಟ್ ಟೆಸ್ಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದು, 46.71 ಸರಾಸರಿಯಲ್ಲಿ 5418 ರನ್ ಗಳಿಸಿದ್ದಾರೆ, ಇದರಲ್ಲಿ 15 ಶತಕಗಳು ಸೇರಿವೆ(PC-PTI).

5 / 5
Follow Us