AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs IRE: ಟೀಂ ಇಂಡಿಯಾದೆದುರು ಐರ್ಲೆಂಡ್ ಟಿ20 ದಾಖಲೆ ಹೇಗಿದೆ ಗೊತ್ತಾ?

IND vs IRE: ಟಿ20 ಯಲ್ಲಿ ಐರ್ಲೆಂಡ್ ದಾಖಲೆಯನ್ನು ನೋಡುವುದಾದರೆ.. 2008 ರಿಂದ ಒಟ್ಟು 152 ಟಿ20 ಪಂದ್ಯಗಳನ್ನು ಆಡಿರುವ ಐರ್ಲೆಂಡ್, 65 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಟೈ ಮತ್ತು ಏಳು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

ಪೃಥ್ವಿಶಂಕರ
|

Updated on:Aug 17, 2023 | 2:03 PM

Share
ಆಗಸ್ಟ್ 18ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ಹಾಗೂ ಐರ್ಲೆಂಡ್ ತಂಡಗಳು ಸನ್ನದ್ಧವಾಗಿವೆ. ಉಭಯ ತಂಡಗಳ ನಡುವಣ ಮೊದಲ ಟಿ20 ಪಂದ್ಯ ಇದೇ ಶುಕ್ರವಾರದಂದು, ಡಬ್ಲಿನ್‌ನ ದಿ ವಿಲೇಜ್‌ ಮೈದಾನದಲ್ಲಿ ನಡೆಯಲ್ಲಿದೆ.

1 / 7
ಟೀಂ ಇಂಡಿಯಾಕ್ಕೆ ಹೋಲಿಸಿದರೆ, ಐರ್ಲೆಂಡ್ ಅಷ್ಟೇನೂ ಬಲಿಷ್ಠ ತಂಡವಾಗಿಲ್ಲದಿದ್ದರೂ, ಲೋರ್ಕನ್ ಟಕೆಟ್, ಕರ್ಟಿಸ್ ಕ್ಯಾಂಫರ್, ಹ್ಯಾರಿ ಟೆಕ್ಟರ್ ಮತ್ತು ಜೋಶುವಾ ಲಿಟಲ್‌ರಂತಹ ಪ್ರತಿಭೆಗಳನ್ನು ಹೊಂದಿರುವ ಐರಿಶ್ ತಂಡವನ್ನು ಬುಮ್ರಾ ಪಡೆ ಕಡೆಗಣಿಸುವಂತಿಲ್ಲ.

2 / 7
ಟಿ20 ಯಲ್ಲಿ ಐರ್ಲೆಂಡ್ ದಾಖಲೆಯನ್ನು ನೋಡುವುದಾದರೆ.. 2008 ರಿಂದ ಒಟ್ಟು 152 ಟಿ20 ಪಂದ್ಯಗಳನ್ನು ಆಡಿರುವ ಐರ್ಲೆಂಡ್, 65 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಒಂದು ಪಂದ್ಯ ಟೈ ಮತ್ತು ಏಳು ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.

3 / 7
ಇನ್ನು ಭಾರತ ಹಾಗೂ ಐರ್ಲೆಂಡ್ ಈ ಚುಟುಕು ಮಾದರಿಯಲ್ಲಿ ಐದು ಪಂದ್ಯಗಳನ್ನು ಆಡಿವೆ. ಈ ಐದೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿದೆ.

4 / 7
2009ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಬಲಿಷ್ಠ ಭಾರತ ತಂಡದ ವಿರುದ್ಧ ಐರಿಶ್ ತಂಡವು ಅಮೋಘ ಹೋರಾಟವನ್ನು ನೀಡಲು ಸಾಧ್ಯವಾಗದೆ, ಎಂಟು ವಿಕೆಟ್‌ಗಳಿಂದ ಸೋಲು ಕಂಡಿತ್ತು.

5 / 7
ಇನ್ನು ಉಭಯ ತಂಡಗಳ ನಡುವೆ ಈ ಹಿಂದೆ ನಡೆದಿದ್ದ 2 ಪಂದ್ಯಗಳ ಟಿ20 ಸರಣಿಯ ಎರಡು ಪಂದ್ಯವನ್ನು ಭಾರತ ಕ್ರಮವಾಗಿ 76 ಮತ್ತು 143 ರನ್‌ಗಳಿಂದ ಗೆಲುವು ಸಾಧಿಸಿತ್ತು.

6 / 7
ತವರಿನಲ್ಲಿಯೂ ಐರ್ಲೆಂಡ್ ತಂಡದ ದಾಖಲೆ ಕಳಪೆಯಾಗಿದ್ದು, ತವರಿನಲ್ಲಿ ಆಡಿದ 43 ಪಂದ್ಯಗಳಲ್ಲಿ ಕೇವಲ 13 ಪಂದ್ಯಗಳಲ್ಲಿ ಐರ್ಲೆಂಡ್ ಜಯಗಳಿಸಿದ್ದು, 3 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.

7 / 7

Published On - 2:02 pm, Thu, 17 August 23