AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ನಾಯಕನಾಗಿ ಮೊದಲ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್

Shreyas Iyer's T20 Comeback: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ಮತ್ತು ಆಟಗಾರನಾಗಿ ವೈಫಲ್ಯ ಕಂಡಿದ್ದ ಶ್ರೇಯಸ್ ಅಯ್ಯರ್, ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. 47 ಎಸೆತಗಳಲ್ಲಿ 68 ರನ್ ಗಳಿಸಿ, ತಂಡಕ್ಕೆ ಆಧಾರವಾದರು. ಇದು ಅವರ ವೃತ್ತಿಜೀವನದ ಒಂಬತ್ತನೇ ಟಿ20 ಅರ್ಧಶತಕವಾಗಿದೆ.

ಪೃಥ್ವಿಶಂಕರ
|

Updated on: Jul 01, 2026 | 11:47 PM

Share
ನಾಯಕನಾಗಿ ಮೊದಲ ಟಿ20 ಸರಣಿ ಸೋಲಿನ ಆಘಾತಕ್ಕೆ ತುತ್ತಾಗಿದ್ದ ಶ್ರೇಯಸ್ ಅಯ್ಯರ್​ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ಮತ್ತು ಆಟಗಾರನಾಗಿ ಎರಡರಲ್ಲೂ ವಿಫಲರಾಗಿದ್ದರು. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 3 ರನ್​ಗಳಿಗೆ ಸುಸ್ತಾಗಿದ್ದ ಅಯ್ಯರ್, ಎರಡನೇ ಟಿ20 ಪಂದ್ಯದಲ್ಲಿ ಕೇವಲ 10 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ದರು (PC-PTI).

1 / 5
ಹೀಗಾಗಿ ಶ್ರೇಯಸ್ ಅಯ್ಯರ್ ಅವರ ಪ್ರದರ್ಶನದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಆದರೆ ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೇಯಸ್ ಆಟಗಾರನಾಗಿ ಮೊದಲ ಯಶಸ್ಸು ಪಡೆದುಕೊಂಡಿದ್ದಾರೆ. ವರ್ಷಗಳ ಬಳಿಕ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ಅಯ್ಯರ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ (PC-BCCI).

2 / 5
ಇಂಗ್ಲೆಂಡ್‌ ವಿರುದ್ಧ ಡರ್ಹಾಮ್‌ನ ಚೆಸ್ಟರ್-ಲೆ-ಸ್ಟ್ರೀಟ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಶ್ರೇಯಸ್ ಅಯ್ಯರ್ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಾಯಕನಾಗಿ ಇದು ಅವರ ಮೊದಲ ಟಿ20 ಅರ್ಧಶತಕವಾಗಿದ್ದರೆ, ಅವರ ವೃತ್ತಿಜೀವನದ ಒಂಬತ್ತನೇ ಟಿ20 ಅರ್ಧಶತಕವೂ ಇದಾಗಿದೆ (PC-BCCI).

3 / 5
ಈ ಪಂದ್ಯದಲ್ಲಿ 47 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 6 ಬೌಂಡರಿ ಹಾಗೂ 1ಸಿಕ್ಸರ್ ಸಹಿತ 144 ರ ಸ್ಟ್ರೈಕ್ ರೇಟ್​ನಲ್ಲಿ 68 ರನ್ ಬಾರಿಸಿ 18ನೇ ಓವರ್​ನಲ್ಲಿ ಔಟಾದರು. ಈ ಅರ್ಧಶತಕದ ಜೊತೆಗೆ ಅಯ್ಯರ್, ಅಭಿಷೇಕ್ ಶರ್ಮಾ ಜೊತೆಗೆ 3ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವನ್ನು ಕಟ್ಟಿದರು. ಇದರಿಂದಾಗಿ ಟೀಂ ಇಂಡಿಯಾ ಆರಂಭಿಕ ಆಘಾತದಿಂದ ಹೊರಬಂದಿತು (PC-BCCI).

4 / 5
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಅಭಿಷೇಕ್ ಶರ್ಮಾ ಹಾಗೂ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 189 ರನ್ ಕಲೆಹಾಕಿತು. ಇವರಿಬ್ಬರನ್ನು ಹೊರತುಪಡಿಸಿ ಶಿವಂ ದುಬೆ ಕೂಡ ಕೊನೆಯಲ್ಲಿ 42 ರನ್​ಗಳ ಕಾಣಿಕೆ ನೀಡಿದರು (PC-BCCI).

5 / 5
Follow Us
ಅಸ್ಸಾಂ ಪ್ರವಾಹದ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಕಿರಣ್ ರಿಜಿಜು

ಭಾರತಕ್ಕೆ ಜಪಾನ್ ದೇಶದ ಪ್ರಧಾನಿಯ ಮೊದಲ ಭೇಟಿ
ಭಾರತಕ್ಕೆ ಜಪಾನ್ ದೇಶದ ಪ್ರಧಾನಿಯ ಮೊದಲ ಭೇಟಿ
ಭಾರೀ ಮಳೆ ಮುನ್ಸೂಚನೆ: ಜು.2ರಂದು ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ರಾಮಮಂದಿರದ ಹುಂಡಿ ಲೂಟಿ: ಆರೋಪಿಗಳ ಬಳಿ ಇದ್ದ ಹಣ ಜಪ್ತಿ

ಪಿಚ್ಚರ್ ಚಿತ್ರದ ಮೂಲಕ ಗಾಯಕಿಯಾದ ಶಿಲ್ಪಾ ಗಣೇಶ್; ಬರ್ತಿವೆ ಭರ್ಜರಿ ಆಫರ್ಸ್

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ವಿ ಸೋಮಣ್ಣ

ಮೊಮ್ಮಕ್ಕಳನ್ನು ಹೇಗೆ ಸಾಕಲಿ’: ಗೋಳಾಡಿದ ಬೀದಿ ವ್ಯಾಪಾರಿ ಅಜ್ಜಿ

ಸೋಶಿಯಲ್ ಮೀಡಿಯಾ ಹಿರೋ ಆಗಬೇಕು ಅನ್ಕೊಂಡಿದ್ದಿಯಾ? ರೌಡಿಗೆ ಕಮಿಷನರ್ ವಾರ್ನ್

ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್

ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು