- TV9 Kannada Photo gallery Cricket photos India vs Pakistan: Naseem Shah is in tears after losing to Team India
India vs Pakistan: ಕಣ್ಣೀರು ಹಾಕಿದ ಪಾಕ್ ಆಟಗಾರ: ಸಮಾಧಾನ ಮಾಡಿದ ರೋಹಿತ್ ಶರ್ಮಾ
India vs Pakistan ICC T20 World Cup 2024: ನ್ಯೂಯಾರ್ಕ್ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 119 ರನ್ಗಳಿಸಿದರೆ, ಪಾಕಿಸ್ತಾನ್ ತಂಡವು 113 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಪಾಕ್ ವಿರುದ್ಧ ಭಾರತ ತಂಡ ರೋಚಕ ಗೆಲುವು ಸಾಧಿಸಿತು.
Updated on: Jun 10, 2024 | 8:23 AM

T20 World Cup 2024: ನ್ಯೂಯಾರ್ಕ್ನಲ್ಲಿ ನಡೆದ ಟಿ20 ವಿಶ್ವಕಪ್ನ 19ನೇ ಪಂದ್ಯದಲ್ಲಿ ಪಾಕಿಸ್ತಾನ್ (Pakistan) ವಿರುದ್ಧ ಟೀಮ್ ಇಂಡಿಯಾ (Team India) 6 ರನ್ಗಳ ರೋಚಕ ಜಯ ಸಾಧಿಸಿತು. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಸೋಲುತ್ತಿದ್ದಂತೆ ಪಾಕ್ ಆಟಗಾರ ನಸೀಮ್ ಶಾ ಕಣ್ಣೀರು ಹಾಕಿದರು.

9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಸೀಮ್ ಶಾ ಅಂತಿಮ ಓವರ್ ವೇಳೆ ದಿಟ್ಟ ಹೋರಾಟ ಪ್ರದರ್ಶಿಸಿದ್ದರು. 4 ಎಸೆತಗಳನ್ನು ಎದುರಿಸಿದ್ದ ನಸೀಮ್ 2 ಫೋರ್ಗಳೊಂದಿಗೆ 10 ರನ್ ಬಾರಿಸಿದ್ದರು. ಇದಾಗ್ಯೂ ಪಾಕ್ ತಂಡಕ್ಕೆ ಗೆಲುವು ತಂದು ಕೊಡಲು ಸಾಧ್ಯವಾಗಿರಲಿಲ್ಲ.

ಅತ್ತ ಟೀಮ್ ಇಂಡಿಯಾ 6 ರನ್ಗಳಿಂದ ರೋಚಕ ಜಯ ಸಾಧಿಸುತ್ತಿದ್ದಂತೆ, ಇತ್ತ ದುಃಖತಪ್ತನಾದ ನಸೀಮ್ ಶಾ ಅಳಲಾರಂಭಿಸಿದರು. ಈ ವೇಳೆ ಸಹ ಆಟಗಾರ ಶಾಹೀನ್ ಅಫ್ರಿದಿ ಸಮಾಧಾನಪಡಿಸಲು ಯತ್ನಿಸಿದರು.

ಇನ್ನು ಶೇಕ್ ಹ್ಯಾಂಡ್ ನೀಡುವ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಪಾಕ್ ತಂಡದ ಯುವ ವೇಗಿಯನ್ನು ಸಮಾಧಾನ ಪಡಿಸುತ್ತಿರುವುದು ಕಂಡು ಬಂತು.

ಇದೀಗ ಈ ಭಾವುಕ ಕ್ಷಣಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಯುವ ಆಟಗಾರನ ಪ್ರದರ್ಶನಕ್ಕೆ ಪಾಕ್ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ALL PC: ICC/GettyImages)

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



