- Kannada News Photo gallery Cricket photos IPL 2022: David Warner responds after fans asks him to join RCB
IPL 2022: RCB ಪರ ಆಡುವ ಸುಳಿವು ನೀಡಿದ್ರಾ ಡೇವಿಡ್ ವಾರ್ನರ್?
IPL 2022 David Warner: ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದ ವಾರ್ನರ್ 2016 ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು.
Updated on: Dec 08, 2021 | 9:06 PM

ಮುಂದಿನ ಸೀಸನ್ ಐಪಿಎಲ್ನಲ್ಲಿ ಆರ್ಸಿಬಿ ತಂಡದ ನಾಯಕ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಒಂದೆಡೆಯಾದರೆ, ಎಬಿ ಡಿವಿಲಿಯರ್ಸ್ ಸ್ಥಾನದಲ್ಲಿ ಆಯ್ಕೆಯಾಗುವ ಆಟಗಾರ ಯಾರೆಂಬ ಕುತೂಹಲ ಇನ್ನೊಂದೆಡೆ. ಆರ್ಸಿಬಿ ಫ್ರಾಂಚೈಸಿ ಈ ಎರಡೂ ಸ್ಥಾನಗಳನ್ನು ತುಂಬುವ ಆಟಗಾರನ ಹುಡುಕಾಟದಲ್ಲಿರುವುದಂತು ಸತ್ಯ.

ಆದರೆ ಅಂತಹ ಸಮರ್ಥ ಆಟಗಾರ ಯಾರಿದ್ದಾರೆ ಎಂದು ಗಮನಿಸಿದರೆ, ಮೆಗಾ ಹರಾಜು ಪಟ್ಟಿಯಲ್ಲಿ ಡೇವಿಡ್ ವಾರ್ನರ್ ಹೆಸರು ಕಾಣ ಸಿಗುತ್ತದೆ. ಆದರೆ ಹರಾಜಿನಲ್ಲಿರುವ ಕಾರಣ ವಾರ್ನರ್ ಅವರನ್ನು ಯಾರು ಬೇಕಾದರೂ ಖರೀದಿಸಬಹುದು. ಇದಾಗ್ಯೂ ವಾರ್ನರ್ ಯಾವ ತಂಡದ ಪರ ಆಡಲು ಬಯಸುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದ ವಾರ್ನರ್ 2016 ರಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇದಾಗ್ಯೂ ಕಳೆದ ಸೀಸನ್ನಲ್ಲಿನ ಕಳಪೆ ಫಾರ್ಮ್ ಕಾರಣ ವಾರ್ನರ್ ಅವರನ್ನು ಕೈಬಿಡಲಾಗಿತ್ತು. ಇದೀಗ ಡೇವಿಡ್ ವಾರ್ನರ್ ಮೆಗಾ ಹರಾಜಿನ ಹಾಟ್ ಫೇವರೇಟ್ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ಮುಂದಿನ ಸೀಸನ್ನಲ್ಲಿ ಹೊಸ ಎರಡು ತಂಡಗಳು ಸೇರ್ಪಡೆಯಾಗಿದ್ದು, ಹೀಗಾಗಿ ಮೆಗಾ ಹರಾಜಿಗೂ ಮುನ್ನವೇ ವಾರ್ನರ್ ಅವರನ್ನು ಆಯ್ಕೆ ಮಾಡುವ ಅವಕಾಶ ಲಕ್ನೋ ಹಾಗೂ ಅಹಮದಾಬಾದ್ ಫ್ರಾಂಚೈಸಿಗಿದೆ. ಇದಾಗ್ಯೂ ಇದುವರೆಗೆ ವಾರ್ನರ್ ಹೊಸ ತಂಡಗಳ ಪರ ಒಪ್ಪಂದ ಮಾಡಿಕೊಂಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿಯೇ ಎಸ್ಆರ್ಹೆಚ್, ಸಿಎಸ್ಕೆ ಸೇರಿದಂತೆ ಅನೇಕ ತಂಡಗಳ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಯಾವ ತಂಡದ ಪರ ಆಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳ ಎಡೆಯಲ್ಲಿ ಆರ್ಸಿಬಿ ಅಭಿಮಾನಿ ಕೂಡ ಕಂಡು ಬಂದಿದ್ದು, ನೀವು ಆರ್ಸಿಬಿ ಪರ ಆಡಬೇಕೆಂದು ವಾರ್ನರ್ ಅವರಲ್ಲಿ ಮನವಿ ಮಾಡಿದ್ದಾರೆ.

ಇದಕ್ಕೆ ವಾರ್ನರ್ ಹಾರ್ಟ್ ಎಮೋಜಿ ಮೂಲಕ ಪ್ರತಿಕ್ರಿಯಿಸಿರುವುದು ವಿಶೇಷ. ಅಂದರೆ ಉಳಿದ ಯಾವುದೇ ತಂಡಗಳ ಅಭಿಮಾನಿಗಳ ಕೋರಿಕೆಗೆ ಉತ್ತರಿಸದ ವಾರ್ನರ್ ಆರ್ಸಿಬಿ ಅಭಿಮಾನಿಗೆ ಹಾರ್ಟ್ ಎಮೋಜಿಯ ಪ್ರತ್ಯುತ್ತರ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನು ಗಮನಿಸಿರುವ ಆರ್ಸಿಬಿ ಅಭಿಮಾನಿಗಳು ಡೇವಿಡ್ ವಾರ್ನರ್ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
